ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾ ಇಂದಿಗೂ ನೋಡಲು ಏನೋ ಒಂದು ಕಾತುರತೆ ಇರುತ್ತದೆ
ಅವರ ಪ್ರೇಮಲೋಕ ಸಿನಿಮಾ ಇಂದಿಗೂ ಯಾರು ಮರೆಯುವುದಿಲ್ಲ ಇಂದು ಟೆಲಿವಿಜನ್ ಅಲ್ಲಿ ಹಾಕಿದಾಗ ಮನೆಮಂದಿಯೆಲ್ಲಾ ಕೂತು ನೋಡಬಹುದಾದಂತಹ ಒಂದು ಸಿನಿಮಾ ಸಾಮಾನ್ಯವಾಗಿ ಒಂದು ಸಿನಿಮಾ ತೆಗೆಯಲು ಹಲವಾರು ನಿರ್ಮಾಪಕರ ಸಿನಿಮಾ ಮಾಡಲು ಬಂಡವಾಳ ಹಾಕುತ್ತಾರೆ ಅದರಿಂದ ತೆಗೆದ ಸಿನಿಮಾವನ್ನು ಹಂಚಿಕೆದಾರರ ಮೂಲಕ ಚಿತ್ರ ಮಂದಿರಕ್ಕೆ ರವಾನೆ ಮಾಡುತ್ತಾರೆ
ಆ ಸಿನಿಮಾವನ್ನು ನೋಡಿ ಪ್ರೇಕ್ಷಕರು ಅದನ್ನು ಹಿಟ್ ಮಾಡಿದರೆ ನಿರ್ಮಾಪಕ ಹಾಕಿದ ಬಂಡವಾಳಕ್ಕೆ ಮೋಸ ಇಲ್ಲ ಒಂದು ವೇಳೆ ಸಿನಿಮಾ ಫ್ಲಾಪ್ ಆದರೆ ನಿರ್ಮಾಪಕನ ತಲೆ ಮೇಲೆ ತಣ್ಣೀರ ಬಟ್ಟೆಯೇ ಗತಿ ಅವನು ಮಾಡಿದ ಸಾಲವನ್ನು ತೀರಿಸಲು ಮತ್ತೆ ಸಾಲ ಮಾಡಬೇಕು ಇಂಥ ಅಪರೂಪದ ಘಟನೆ ಬಗ್ಗೆ ರವಿಚಂದ್ರನ್ ಅವರ ಜೀವನದಲ್ಲೂ ನಡೆಯಿತು ಹೇಗೆಲ್ಲಾ ಕಷ್ಟ ಪಟ್ಟರೂ ಹಾಗೂ ಏನೆಲ್ಲಾ ಮಾರಿದರು ಎಂಬುದರ ಬಗ್ಗೆ ಇಂದಿನ ಲೇಖನದಲ್ಲಿ ನೋಡೋಣ
ರವಿಚಂದ್ರನ್ ತಮ್ಮ ಸಿನಿಮಾ ಮಾಡಲು ಏನೆಲ್ಲಾ ಕಳೆದು ಕೊಂಡರು ಎನ್ನುವುದರ ಬಗ್ಗೆ ಇಂದಿನ ಲೇಖನದಲ್ಲಿ ನೋಡೋಣ ಬನ್ನಿ ಶಾಂತಿ ಕ್ರಾಂತಿ ಸಿನಿಮಾವನ್ನು ಎಲ್ಲರೂ ನೋಡಿದಿರಾ ಅವಾಗಿನ ಕಾಲದಲ್ಲಿ ಸುಮಾರು ಆರು ಕೋಟಿ ಹಣವನ್ನು ಖರ್ಚು ಮಾಡಿ ತಯಾರಿಸಿದ ಸಿನಿಮಾ ಆಗಿದೆ ಇದು ತೆಲುಗು ಮತ್ತು ತಮಿಳು ಅಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಿ ನಿರ್ಮಾಣ ಮಾಡಿದ ಸಿನಿಮಾ ಆಗಿದೆ ಕನ್ನಡದಲ್ಲಿ ರವಿಚಂದ್ರನ್ ತಮಿಳ್ ನಲ್ಲಿ ರಜನಿಕಾಂತ್ ಹಾಗೂ ತೆಲುಗು ಅಲ್ಲಿ ನಾಗಾರ್ಜುನ ಅವರು ಅಭಿನಯಿಸಿದ ಸಿನಿಮಾ ಆಗಿದೆ
ಆದರೆ ಸಿನಿಮಾ ಅಷ್ಟೊಂದು ಹಿಟ್ ಆಗದೇ ಜನರ ಮನಕ್ಕೆ ಮುಟ್ಟುವುದಿಲ್ಲ ಇದರಿಂದ ವಿತರಕರಿಗೆ ನಷ್ಟ ಉಂಟಾಗುವುದು ಇಂಥ ಸಂದರ್ಭದಲ್ಲಿ ತನ್ನ ತಂದೆಯ ಮಾತು ನೆನಪು ಆಗುವುದು ಈಶ್ವರಿ ಸಂಸ್ಥೆ ಯಾವತ್ತೂ ಯಾರಿಗೂ ಹಣವನ್ನು ನೀಡಲು ತಡ ಮಾಡಿಲ್ಲ ಎಂಬುದನ್ನು ನೆನಪಿಸಿ ಕೊಂಡು ಅವರ ಹತ್ತಿರ ವಜ್ರೇಶ್ವರಿ ಕಂಬೈನ್ಸ್ ಪಕ್ಕ ಇದ್ದಂಥ 100*100 ಸೈಟ್ ಅನ್ನು ಮಾರುತ್ತಾರೆ ಇಂದಿನ ಅ ಸೈಟಿನ ಬೆಲೆ ಸುಮಾರು 25 ಕೋಟಿ ಆಗುವುದು ಹಾಗೂ ಆ ಜಾಗದಲ್ಲಿ ಈಶ್ವರಿ ಪ್ರೊಡಕ್ಷನ್ಸ್ ಅವರ ಒಂದು ಆಫೀಸ್ ಇದ್ದು ಅದನ್ನು ಕೂಡ ಮಾರಾಟ ಮಾಡಿ ಬಂದ ಹಣದಿಂದ ಬಾಕಿ ಮೊತ್ತವನ್ನು ನೀಡುತ್ತಾರೆ
ಶಾಂತಿ ಕ್ರಾಂತಿ ನಂತರ ರಾಮಾಚಾರಿ ಚಿನ್ನ ಚೆಲುವ ಮುಂತಾದ ಹಲವಾರು ಸಿನಿಮಾ ಮಾಡಿ ಮತ್ತೆ ಮೊದಲಿನ ಜೀವನಕ್ಕೆ ಹೆಜ್ಜೆ ಇಡುತ್ತಾರೆ ತದನಂತರ ಏಕಾಂಗಿ ಸಿನಿಮಾ ಕಥೆಯನ್ನು ಯೋಚಿಸಿ ತಾವೇ ನಿರ್ಮಾಣ ಮಾಡುತ್ತಾರೆ ಅದರ ಸೆಟ್ ಬೇರೆ ಬೇರೆ ಕೆಲಸಗಳಿಗೆ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ ಕೊನೆಗೆ ಸಿನಿಮಾ ಬಿಡುಗಡೆ ಆದರೂ ಜನರು ಅದನ್ನು ಅಷ್ಟೊಂದು ಇಷ್ಟ ಪಡುವುದಿಲ್ಲ ಮತ್ತೆ ರವಿಚಂದ್ರನ್ ಅವರು ಸಾಲದ ಚಕ್ರಕ್ಕೆ ಸಿಲುಕುತ್ತಾರೆ ಆದರೂ ಧೃತಿಗೆಡದೆ ಬೇರೆ ಸಿನಿಮಾ ಅಲ್ಲಿ ನಟಿಸುತ್ತ ಸಾಲವನ್ನು ತಕ್ಕ ಮಟ್ಟಿಗೆ ತೀರಿಸುತ್ತ ಬರುತ್ತಾರೆ ಅಹಂ ಪ್ರೇಮಾಸ್ಮಿ ಚಿತ್ರ ಮೂಲಕ ಅವರ ತಮ್ಮ ಬಾಲಾಜಿಯನ್ನು ಸಿನಿಮಾ ರಂಗಕ್ಕೆ ತಂದು ದೊಡ್ಡ ನಟ ಆಗಿ ಗುರುತಿಸಬೇಕು ಎಂಬ ಹಂಬಲ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ
ಆದರೆ ಆ ಸಿನಿಮಾ ಕೂಡ ಪ್ಲಾಪ್ ಆಗುವುದು ಇದರಿಂದ ಪೂರ್ತಿ ಯೋಚನೆ ಹಾಗೂ ಮಾನಸಿಕವಾಗಿ ಕುಸಿದು ಹೋಗುತ್ತಾರೆ ಇದನ್ನು ನೋಡಿದ ರವಿ ಚಂದ್ರನ್ ಅವರ ತಾಯಿಯು ಅವರ ಹೆಸರಿನಲ್ಲಿ ಇದ್ದಂಥ ಎರಡು ಆಸ್ತಿ ಮಾರಿ ಸಾಲವನ್ನು ತೀರಿಸಲು ಹೇಳುತ್ತಾರೆ ಆದರೆ ಆ ಆಸ್ತಿ ಇದ್ದ ಜಾಗವನ್ನು ಕೇಳಿದರೆ ನಿಜಕ್ಕೂ ನಿಬ್ಬೇರಾಗುವ ಸರದಿ ನಮ್ಮದು ಆ ಜಾಗವೂ ಮಲ್ಲೇಶ್ವರಂ ಅಲ್ಲಿ ಇರುವ ನಟರಾಜ್ ಚಿತ್ರಮಂದಿರ ಎದುರುಗಡೆ ಇರುವ ಒಂದು ದೊಡ್ಡ ಕಾಂಪ್ಲೆಕ್ಸ್ ಹಾಗೂ ರಾಜಾಜಿನಗರದಲ್ಲಿ ಅವರ ಮನೆಯ ಎದುರುಗಡೆ ಇರುವ ಕಾಂಪ್ಲೆಕ್ಸ್ ಅನ್ನು ಕೂಡ ಮಾರಾಟ ಮಾಡಿ ಸಾಲವನ್ನು ತೀರಿಸುತ್ತಾರೆ
ಇಷ್ಟೆಲ್ಲಾ ಆದ ಬಳಿಕ ಕೂಡ ರವಿಚಂದ್ರನ್ ಅವರು ಮತ್ತೆ ಮಂಜಿನ ಹನಿ ಎನ್ನುವ ಸಿನಿಮಾ ವ್ಯಾಮೋಹ ಅವರನ್ನು ಬೆಂಬಿಡದೆ ಕಾಡುವುದು ಮತ್ತೆ ಸಿನಿಮಾ ಮಾಡಲು ಹಣವನ್ನು ಹೊಂದಿಸಿ ತನ್ನ ಮಗನನ್ನು ಕೂಡ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿಸಲು ಪ್ರೇಮಲೋಕದಲ್ಲಿ ರಣಧೀರ ಎಂಬ ಸಿನಿಮಾ ಅನ್ನು ಮಾಡಲು ಮುಂದೆ ಹೆಜ್ಜೆ ಇಡುತ್ತಾರೆ ಆದರೆ ಈ ಸಿನಿಮಾ ನಿರ್ಮಾಣಕ್ಕೆ ಹೆಸರು ಘಟ್ಟದಲ್ಲಿ ಇರುವ ಸುಮಾರು ಇಪ್ಪತ್ತು ಎಕರೆ ಅಷ್ಟು ಆಸ್ತಿಯನ್ನು ತನ್ನ ತಂಗಿಗೆ ಮಾರಾಟ ಮಾಡುತ್ತಾರೆ
ಇವಾಗ ಅಲ್ಲಿ ಅವರ ತಂಗಿ ಇಂದು ವಿದ್ಯಾಸಂಸ್ಥೆಯನ್ನು ನಡೆಸುತ್ತ ಇದ್ದಾರೆ ಹಾಗೂ ರವಿಚಂದ್ರನ್ ಅವರ ತಂದೆ ವೀರ ಸ್ವಾಮಿ ಅವರ ಸಮಾಧಿ ಕೂಡ ಅಲ್ಲೇ ಇದೆ ಎಂಬ ವರದಿ ಇದೆ ಇಷ್ಟೆಲ್ಲ ಕಳೆದುಕೊಂಡು ಮತ್ತು ತನ್ನ ನೆಚ್ಚಿನ ಕಾರನ್ನು ಕೂಡ ಈ ಸಿನಿಮಾ ಮಾಡುವ ಮೂಲಕ ಕಳೆದು ಕೊಳ್ಳುತ್ತಾರೆ ಕಲಾವಿದರು ದೊಡ್ಡ ನಟ ನಿರ್ಮಾಪಕ ಅವರಿಗೆ ಯಾವ ಚಿಂತೆ ಇದೆ ಒಳ್ಳೆ ಐಶಾರಾಮಿ ಜೀವನ ನಡೆಸುವವರು ಇವರು ಎಂದು ನಾವು ಭಾವಿಸುತ್ತೇವೆ ಆದರೆ ಇವರ ಜೀವನದ ಬಗ್ಗೆ ಹತ್ತಿರ ಹೋಗಿ ನೋಡಿದಾಗ ಸತ್ಯದ ಅರಿವು ಆಗುವುದು
ರವಿಚಂದ್ರನ್ ಅವರ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಲೇ ಇಲ್ಲ ಸರಳವಾಗಿ ಮಾಡಿದ್ದಾರೆ ಇದರ ಬಗ್ಗೆ ರವಿಚಂದ್ರನ್ ಅವರೇ ಹೇಳಿಕೊಂಡಿದ್ದಾರೆ ಯಾವುದೇ ಮಾದ್ಯಮಗಳನ್ನು ಕರೆದು ದೊಡ್ಡದಾಗಿ ಟೆಲಿಕ್ಯಾಸ್ಟ್ ಮಾಡಲು ಸಾದ್ಯವಿಲ್ಲ ತುಂಬಾ ಸರಳ ಆಗಿ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ ರವಿ ಬೋಪಣ್ಣ ಸಿನಿಮಾ ನಿರ್ಮಾಣ ಮಾಡುತಲಿದ್ದು ಅದರಲ್ಲಿ ಸುದೀಪ್ ಅವರು ಕೂಡ ಅಭಿನಯ ಮಾಡಿದ್ದಾರೆ ಕ್ರೇಜಿ ಸ್ಟಾರ್ ಅವರು ತನ್ನ ಕ್ರೇಜಿ ಆಲೋಚನೆಯಿಂದ ಮತೊಮ್ಮೆ ಸಿನಿಮಾ ರಂಗದಲ್ಲಿ ಮತ್ತೊಮ್ಮೆ ಪಿನಿಕ್ಸ್ ತರಹ ಮಿಂಚಲಿ ಎಂದು ಹಾರೈಸೋಣ ಅವರೇ ಹೇಳಿಕೊಂಡಿದ್ದಾರೆ
ಇಷ್ಟು ದಿನ ಕೋಟಿ ಕಳೆದುಕೊಂಡು ಜೀವನ ಸಾಗಿಸಿದಿನಿ ಇನ್ನುಮೇಲೆ ಹಣವನ್ನು ಹೇಗೆಲ್ಲಾ ಉಳಿತಾಯ ಮಾಡಬಹುದು ಎಂಬುದನ್ನು ಯೋಚಿಸಿ ಮುಂದೆ ಹೆಜ್ಜೆ ಇಡುವೆ ಇನ್ನಾದರು ಅವರ ಸಿನಿಮಾ ಹಿಟ್ ಆಗಲಿ ಶತ ದಿನ ಓಡಲಿ ಎಂದು ಹಾರೈಸೋಣ.ಕನ್ನಡ ಚಿತ್ರಗಳನ್ನು ದಯವಿಟ್ಟು ಚಿತ್ರ ಮಂದಿರಗಳಲ್ಲೇ ಹೋಗಿ ನೋಡಿ.
ಕನ್ನಡ ಉಳಿಸಿ ಬೆಳೆಸಿ ಹಾಗೂ ಬಳಸಿ