ಒಬ್ಬರನ್ನ ಹೋಲುವವರು ಏಳು ಜನರಿರುತ್ತಾರೆ ಎಂಬ ಮಾತಿದೆ. ಕೆಲವರ ವಿಷಯದಲ್ಲಿ ಈ ಮಾತು ಅಕ್ಷರಶಃ ಸತ್ಯವಾಗಿದ್ದೂ ಇದೆ. ಹಾಗೆ ಕನ್ನಡ ಹಿರಿತೆರೆಯ ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಅವರನ್ನ ಹೋಲುವ ವ್ಯಕ್ತಿ ಲಕ್ಷ್ಮೀ ನಾರಾಯಣ್. ಆದರೆ ಇವರು ಇಂದು ನಮ್ಮೊಂದಿಗಿಲ್ಲ.
ಹೌದು, ಥೇಟ್ ರವಿಚಂದನ್ ಅವರನ್ನೇ ಹೋಲುತ್ತಿದ್ದ ಲಕ್ಷ್ಮಿನಾರಾಯಣ್ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಇವರು ಜ್ಯೂನಿಯರ್ ರವಿಚಂದ್ರನ್ ಎಂದೇ ಹೆಸರು ಮಾಡಿದ್ದರು. ಲಕ್ಷ್ಮಿ ನಾರಾಯಣ್ ಅಲಿಯಾಸ್ ಜ್ಯೂ. ರವಿಚಂದ್ರನ್ ಅವರು ತುಮಕೂರು ಜಿಲ್ಲೆಯ ಕುಣಿಗಲ್ ತಲೂಕಿನ ಹೇರೂರು ಗ್ರಾಮದವರು. ಇವರು ಅರ್ಕೆಸ್ಟ್ರಾ ಸ್ಟಾರ್ ಕೂಡ ಆಗಿದ್ದರು. ಆರ್ಕೆಸ್ಟ್ರಾ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಕೊಟ್ಟಿರುವ ಲಕ್ಷ್ಮಿ ನಾರಾಯಣ್ ಅವರಿಗೆ ರವಿಚಂದ್ರನ್ ಅವರ ಮುಖದ ಹೋಲಿಕೆ ಬಹುವಾಗಿ ಇತ್ತು.
ಸಾಮಾನ್ಯವಾಗಿ ಸ್ಟಾರ್ ನಟ ನಟಿಯರನ್ನ ಜನ ಅನುಕರಣೆ ಮಾಡುತ್ತಾರೆ. ಆದರೆ ಅವರಂತೆಯೇ ಗೆಟಪ್ ಮಾಡಿಕೊಂಡು ಇರುವವರು ಕಡಿಮೆ. ಅಂಥವರಲ್ಲಿ ಲಕ್ಷ್ಮಿ ನಾರಾಯಣ್ ಮಾತ್ರ ರವಿಚಂದ್ರನ್ ಅವರ ದೊಡ್ಡ ಅಭಿಮಾನಿಯೂ ಆಗಿದ್ದು, ರವಿಚಂದ್ರನ್ ಅವರು ಅವರ ಚಿತ್ರದಲ್ಲಿ ಹಾಕಿದ ಎಲ್ಲಾ ಗೆಟಪ್ ಗಳನ್ನೂ ತೊಟ್ಟು ಜನರನ್ನು ರಂಜಿಸಿದ್ದಾರೆ. ಹಾಗಾಗಿ ಇವರಿಗೆ ಸಾಕಷ್ಟು ಅಭಿಮನಿಗಳೂ ಇದ್ದರು. ಇನ್ನು ಲಕ್ಷ್ಮಿ ನಾರಾಯಣ್ ತಮ್ಮ ಆರ್ಕೆಸ್ಟ್ರಾದ ಮೂಲಕ ಹಾಡು, ಕುಣಿತ, ರವಿಚಂದ್ರನ್ ಅವರ ಸ್ಟ್ರೈಲ್, ಡೈಲಾಗ್ ಮೂಲಕ ಜನರನ್ನ ರಂಜಿಸುತ್ತಿದ್ದರು.
ಜ್ಯೂನಿಯರ್ ರವಿಚಂದ್ರನ್ ಎಂದೇ ಖ್ಯಾತರಾಗಿದ್ದ ಲಕ್ಷ್ಮಿ ನಾರಾಯಣ್ ಕೇವಲ ತಮ್ಮ 35 ನೇ ವರ್ಷದಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಸಂಪ್ ಗೆ ನೀರು ತುಂಬಿಸಲು ಮೋಟಾರ್ ಆನ್ ಮಾಡಿದಾಗ ವಿದ್ಯುತ್ ತಗುಲಿ ಅಸುನೀಗಿದ್ದಾರೆ. ಲಕ್ಷ್ಮಿ ನಾರಾಯಣ್ ಮನೆಯವರ ನೋವು ಭರಿಸಲು ಯಾರಿಂದಲೂ ಸಾಧ್ಯವಿಲ್ಲದಂತಾಗಿದೆ.
ಕುಣಿಗಲ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದರಿಂದ ಅಲ್ಲಿಯೇ ಪ್ರಕರಣ ದಾಖಲಾಗಿದೆ. ಜ್ಯೂನಿಯರ್ ರವಿಚಂದ್ರನ್ ಅವರು ಒರಿಜಿನಲ್ ರವಿಚಂದ್ರನ್ ಅವರನ್ನೂ ಭೇಟಿ ಮಾಡಿದ್ದಾರೆ. ಜೊತೆಗೆ ಚಾನಲ್ ಗಳಲ್ಲಿಯೂ ಕೆಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರವಿಚಂದ್ರನ್ ಹಾಗೆಯೇ ಇರುವುದಕ್ಕಾಗಿ ಇವರಿಗೂ ಸಾಕಷ್ಟು ಅಭಿಮಾನಿಗಳಿದ್ದು ಇವರು ಸಿಕ್ಕಾಗೆಲ್ಲ ಜನ ಅವರ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಲಕ್ಶ್ಗ್ಮಿ ನಾರಾಯಣ್ ಅಗಲಿಕೆಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಂತಾಪವನ್ನು ಸೂಚಿಸಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ ನೆಟ್ಟಿಗರು. ಜ್ಯೂ. ರವಿಚಂದ್ರನ್ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವುದೇ ನಮ್ಮ ಹಾರೈಕೆ!