ಭಾರತದ ಬಹುನಿರೀಕ್ಷಿತ ಸಿನೆಮಾ ಆರ್ ಆರ್ ಆರ್ ಇದೀಗ ಬಿಡುಗಡೆಯಾಗಿದೆ. ಬಿಡುಗಡೆಯಾದ ಮೊದಲನೇ ದಿನವೇ ಅದ್ಧೂರಿ ಓಪನಿಂಗ್ ಪಡೆದಿದೆ. ಬಾಹುಬಲಿ ಚಿತ್ರವನ್ನು ನಿರ್ದೇಶಿಸಿದ್ದ ರಾಜಮೌಳಿ ಅವರ ಚಿತ್ರ ಆದ್ದರಿಂದ ಪ್ರೇಕ್ಷಕರು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದರು. ಜನರ ನಿರೀಕ್ಷೆಗೆ ತಕ್ಕಂತೆ ಚಿತ್ರ ಮೂಡಿ ಬಂದಿದೆ. ಈ ಚಿತ್ರದ ಬಗ್ಗೆ ಸಕಾರಾತ್ಮಕ ವಿಮರ್ಶೆಗಳು ಕೇಳಿಬರುತ್ತಿದೆ. RRR ಚಿತ್ರವು ಬಿಗ್ ಬಜೆಟ್ ಕ್ಯಾನ್ವಾಸ್ ಸಿನಿಮಾವಾಗಿದ್ದು ಬಹುದೊಡ್ಡ ತಾರಾ ಬಳಗವನ್ನೇ ಹೊಂದಿದೆ. ಜೂನಿಯರ್ ಎನ್ ಟಿಆರ್ ರಾಮ್ ಚರಣ್ ಅಲಿಯಾ ಭಟ್ ಅಜಯ್ ದೇವ್ಗನ್ ಈ ಚಿತ್ರದಲ್ಲಿ ನಟಿಸಿದ್ದಾರೆ.
ತೆಲುಗಿನ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಮುಖ್ಯಪಾತ್ರ ದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿರುವುದು ಈ ಚಿತ್ರದ ಹೈಲೈಟ್. ಇಬ್ಬರು ಸ್ಟಾರ್ ನಟರನ್ನು ಒಂದೇ ಚಿತ್ರದಲ್ಲಿ ಆವರಣಿಸುವುದು ಸುಲಭದ ಮಾತಲ್ಲ. ಆದರೆ ರಾಜಮೌಳಿ ಅವರ ಈ ದೊಡ್ಡ ನಟರ ತೂಕವನ್ನು ಒಂದೇ ಸಮನಾಗಿ ಅಳೆದಿದ್ದಾರೆ. ನಿಮಗೆ ಗೊತ್ತಾ ಈ ಸಿನಿಮಾದ ಒಟ್ಟು ಬಜೆಟ್ 250 ಕೋಟಿ ಆಗಿದೆ.
ಇದರಲ್ಲಿ ಸುಮಾರು ನೂರು ಕೋಟಿಗೂ ಅಧಿಕ ಹಣ ಕೇವಲ ನಟರಿಗೆ ಸಂಭಾವನೆ ರೂಪದಲ್ಲಿ ನೀಡಿದ್ದಾರೆಂದರೆ ನೀವೆಲ್ಲಾ ನಂಬಲೇ ಬೇಕು. 2018 ರಿಂದ 2021 ರ ವರೆಗೆ ಚಿತ್ರದ ಶೂಟಿಂಗ್ ನಡೆದಿದೆ. ಎನ್ ಟಿಆರ್ ಮತ್ತು ರಾಮ್ ಚರಣ್ ಇಬ್ಬರೂ ತಮ್ಮ 4 ವರ್ಷಗಳ ಸಮಯವನ್ನು ಈ ಸಿನಿಮಾಗಾಗಿ ಮುಡಿಪಾಗಿಟ್ಟಿದ್ದರು. ಆದ್ದರಿಂದ ಈ ಇಬ್ಬರು ನಟರು ಕೂಡ 4 ವರ್ಷಗಳ ಒಟ್ಟು ಸಂಭಾವನೆಯನ್ನು ಒಂದೇ ಸಿನಿಮಾದ ಮೂಲಕ ಪಡೆದಿದ್ದಾರೆ.
ಬಲ್ಲ ಮೂಲಗಳ ಪ್ರಕಾರ ರಾಮ್ ಚರಣ್ ಮತ್ತು ಜೂನಿಯರ್ ಎಂಟಿಆರ್ ಇಬ್ಬರೂ ಕೂಡ ಈ ಸಿನಿಮಾಗೆ 45 ಕೋಟಿ ರುಪಾಯಿಗಳ ಸಂಭಾವನೆ ಪಡೆದಿದ್ದಾರಂತೆ ಆದರೆ ಇಷ್ಟಕ್ಕೆ ಮುಗಿದಿಲ್ಲ. ಸಿನಿಮಾಗೆ ಬಂದ ಲಾಭದಲ್ಲಿ ಶೇರ್ ಸಲ್ಲುತ್ತೆ. ರಾಮ್ ಚರಣ್ ಮತ್ತು ಎಂಟಿ ಅವರಿಬ್ಬರಿಗೂ ಕೂಡ ಚಿತ್ರದ ಲಾಭದಲ್ಲಿ ಶೇಕಡಾ ಹತ್ತರಷ್ಟು ಪಾಲು ಸಿಗಲಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.
ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಅವರಿಗೂ ಕೂಡ ದೊಡ್ಡ ಮಟ್ಟದ ಸಂಭಾವನೆ ಸಿಕ್ಕಿದೆ. RRR ಸಿನಿಮಾದಲ್ಲಿ ಕೇವಲ ಹತ್ತು ನಿಮಿಷಗಳ ಕಾಲ ಕಾಣಿಸಿಕೊಂಡಿರುವ ಆಲಿಯಾ ಭಟ್ ಹತ್ತು ಕೋಟಿ ರುಪಾಯಿಗಳನ್ನು ಪಡೆದಿದ್ದಾರೆ. ಮತ್ತು ಅಜಯ್ ದೇವಗನ್ ಅವರು ಕೂಡ ಹತ್ತು ಕೋಟಿ ರುಪಾಯಿಗಳನ್ನು ಪಡೆದಿದ್ದಾರಂತೆ. ಹಾಗೆ ನೋಡಿದರೆ ಸಿನಿಮಾದಲ್ಲಿ ಪಾತ್ರ ವಹಿಸಿದ ನಟ ನಟಿಯರಿಗೆ 150 ಕೋಟಿಗಿಂತಲೂ ಹೆಚ್ಚು ಹಣ ಖರ್ಚಾಗಿದೆ.