junior Chiru: ಸ್ವತಂತ್ರೋತ್ಸವದ ಸಂಭ್ರಮದಲ್ಲಿ ಜೂನಿಯರ್ ಚಿರು! ಇಲ್ಲಿವೆ ವೈರಲ್ ಫೋಟೋಸ್

junior Chiru ಸ್ನೇಹಿತರೆ, ನಿನ್ನೆಯಷ್ಟೇ ನಾವೆಲ್ಲರೂ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು (Independence Day) ಅದ್ದೂರಿಯಾಗಿ ಆಚರಿಸಿದ ಪ್ರತಿಯೊಬ್ಬರನ್ನು ದೇಶದ ಮೇಲಿರುವಂತಹ ಪ್ರೀತಿಯು ಉಕ್ಕಿ ಹರಿದು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಧ್ವಜ ರೋಹಣ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಿದರು.

ಹೀಗೆ ಸಿನಿಮಾ ಸೆಲೆಬ್ರಿಟಿಗಳು ಕೂಡ ಬಿಳಿ ಬಣ್ಣದ ಉಡುಪನ್ನು ತೊಟ್ಟು ತಮ್ಮ ತಮ್ಮ ಮನೆಯಲ್ಲಿ ಧ್ವಜ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡು ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಮಾಡುವುದರಲ್ಲಿ ಹಿಂದುಳಿದಿರಲಿಲ್ಲ. ಪ್ರತಿಯೊಬ್ಬರೂ ಕೂಡ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿ ಇದರ ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಸರ್ವರಿಗೂ ಶುಭಕೋರುವ ಮೂಲಕ ವೈರಲ್ ಆದರೂ.

ಆದರೆ ಏನು ಅರಿಯದಂತಹ ಪುಟ್ಟ ಕಂದಮ್ಮ ಚಿರು ಸರ್ಜರ ಪುತ್ರ ರಾಯನ್ ರಾಜ್ ಸರ್ಜಾ ಕೂಡ ಬಿಳಿ ಬಣ್ಣದ ಉಡುಪನ್ನು ತೊಟ್ಟು ಸಲ್ಯೂಟ್ ಮಾಡುತ್ತಾ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸದ್ಯ ನೆಟ್ಟಿಗರ ಗಮನ ಸೆಳೆಯುತ್ತದೆ. ಹೌದು ಗೆಳೆಯರೇ ನಟಿ ಮೇಘನಾ ಮಗನ ಮುದ್ದು ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ವರಿಗೂ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.

ಜೂನಿಯರ್ ಚಿರು ತನ್ನ ಪುಟ್ಟ ಕೈಗಳಿಂದ ಸೆಲ್ಯೂಟ್ ಮಾಡುತ್ತಾ ಭಾರತದ ಜನತೆಗೆ ನಮಸ್ಕರಿಸುತ್ತಿರುವ ವಿಡಿಯೋವನ್ನು ತಾಯಿ ಮೇಘನಾ ಪೋಸ್ಟ್ ಮಾಡಿದ್ದಾರೆ. ಚಿರಂಜೀವಿ ಸರ್ಜಾ(Chiranjeevi Sarja) ಅವರ ಅಗಲಿಕೆಯ ನಂತರ ಮೇಘನ ರಾಜ್ (Meghana Raj)ಅವರ ಯಾವ ಸಿನಿಮಾಗಳು ಕೂಡ ಥಿಯೇಟರ್ಗೆ ಅಪ್ಪಳಿಸಿರಲಿಲ್ಲ. ಆದರಿಗ ಮಗನ ಹಾರೈಕೆಯ ಜೊತೆಗೆ ತತ್ಸಮ ತದ್ಭವ (Tatsama Tadbhava) ಸಿನಿಮಾದಲ್ಲಿಯೂ ಮೇಘನಾ ನಟಿಸುತ್ತಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಇದೇ ವರ್ಷಾಂತ್ಯದೊಳಗೆ ಸಿನಿಮಾವನ್ನು ತೆರೆಗೆ ತರುವ ನಿರೀಕ್ಷೆಯಲ್ಲಿದ್ದಾರೆ.

ಅದರಂತೆ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿ ಇರುವಂತಹ ಮೇಘನಾ ರಾಜ್ ಅವರು ಆಗಾಗ ತಮ್ಮ ಹಾಗೂ ತಮ್ಮ ಮುದ್ದು ಮಗ ಜೂನಿಯರ್ ಚಿರುವಿನ(Jnr.Chiru) ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾ ಸಂತೋಷ ವ್ಯಕ್ತಪಡಿಸುತ್ತಿರುತ್ತಾರೆ. ಸದ್ಯ ಪುಟ್ಟ ಕಂದಮ್ಮನಲ್ಲಿರುವ ದೇಶಪ್ರೇಮಕ್ಕೆ ಅಭಿಮಾನಿಗಳು ಮನಸ್ಸೊತ್ತು ಹೋಗಿದ್ದು ಲವ್ ಯು ಜೂನಿಯರ್ ಚಿರು ಕ್ಯೂಟ್ ಕಂದ ಎಂದೆಲ್ಲ ನೆಟ್ಟಿಗರು ಕಮೆಂಟ್ ಮಾಡಿ ತೊಡಗಿದ್ದಾರೆ. ಇದನ್ನೂ ಓದಿ ಸ್ವಾತಂತ್ರ್ಯ ದಿನವೇ ಬಂಗಾರದ ಕಾರನ್ನು ಖರೀದಿಸಿದ ಅಂಬಾನಿ ಪತ್ನಿ ಇದರ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ

Leave a Comment