ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸರಿ ಯಾವುದು ತಪ್ಪು ಯಾವುದು ಎಂಬ ಅರಿವಿಲ್ಲದ ವಯಸ್ಸು ಆಗಿರುತ್ತೆ. ಇಂಥ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳನ್ನು ಬಹಳಷ್ಟು ಬೇಗನೆ ನಂಬಿಬಿಡುತ್ತಾರೆ . ಈಗಿನ ಕಾಲದಲ್ಲಂತೂ ಗುರುತು ಪರಿಚಯ ಇರುವವರೇ ಮೋಸ ಮಾಡೋದು ಹೆಚ್ಚು. ಅದರಲ್ಲೂ ವಿದ್ಯಾರ್ಥಿನಿಯರನ್ನು ದಾರಿತಪ್ಪಿಸೋಕೆ ಹಲವಾರು ಪೋ’ಲಿ’ ಹುಡುಗರು ಯಾವಾಗಲೂ ಒಂದು ಕಣ್ಣು ಇಟ್ಟಿರುತ್ತಾರೆ. 15 -19 ವರ್ಷದ ವಿದ್ಯಾರ್ಥಿನಿಯರು ಬಹಳ ಸುಲಭವಾಗಿ ಮೋಸ ಹೋಗುತ್ತಾರೆ.
ಚೆನ್ನೈನ ಅರುಂಬಕ್ಕಮ್ ನಲ್ಲಿ 14 ವರ್ಷದ ವಿದ್ಯಾರ್ಥಿನಿಯ ಘಟನೆಯೊಂದು ಇದೀಗ ಸದ್ದು ಮಾಡುತ್ತಿವೆ. ಅರುಂಬಕ್ಕಮ್ ನ 14 ವರ್ಷದ ವಿದ್ಯಾರ್ಥಿನಿ ತಂದೆ ತಾಯಿಗೆ ಒಬ್ಬಳೇ ಮುದ್ದುಮಗಳು. ಈ ಅಪ್ರಾಪ್ತ ವಿದ್ಯಾರ್ಥಿನಿ ವಾಸವಿದ್ದ ಏರಿಯಾದಲ್ಲೇ ಜಯಸೂರ್ಯ ಎಂಬ ಹುಡುಗ ವಾಸಮಾಡುತ್ತಿದ್ದ ಇವನು ಸಿನಿಮಾಗಳಲ್ಲಿ ಗ್ರೂಪ್ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದ. ಸಿನಿಮಾಗಳಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತೇನೆ ಹಾಗೆ ಹೀಗೆ ಅಂತ ಕಥೆ ಹೇಳಿ ವಿದ್ಯಾರ್ಥಿನಿಯ ಜೊತೆ ಸ್ನೇಹವನ್ನು ಈತ ಬೆಳೆಸೋಕೆ ಶುರು ಮಾಡಿದ್ದ.
ತನ್ನ ಏರಿಯಾದ ಹುಡುಗನೇ ಅಲ್ವಾ ಅಂತ ಈ ವಿದ್ಯಾರ್ಥಿನಿ ಅವನ ಜೊತೆ ತುಂಬಾ ಕ್ಲೋಸ್ ಆಗಿ ಮಾತನಾಡುತ್ತಿದ್ದಳು. ಹಾಗೆ ಇಬ್ಬರ ಗೆಳೆತನ ಪ್ರೀತಿಯಾಗಿ ಬದಲಾಗುತ್ತೆ. ದಿನೇ ದಿನೆ ಕಳೆದಂತೆ ವಿದ್ಯಾರ್ಥಿನಿ ತಂದೆ ತಾಯಿಗೆ ಗೊತ್ತಿಲ್ಲದೆ ಯುವಕನ ಜೊತೆ ಕಾಲ ಕಳೆಯೋಕೆ ಪ್ರಾರಂಭಿಸುತ್ತಾಳೆ. ಆದರೆ ಆ ಯುವಕ ಗೋಮುಖ ವ್ಯಾಘ್ರ ಎಂದು ಈಕೆಗೆ ಗೊತ್ತೇ ಇರಲಿಲ್ಲ. ಹೀಗೆ ಗೆಳೆತನ ವಾದಮೇಲೆ ಜಯಸೂರ್ಯ ಆ ವಿದ್ಯಾರ್ಥಿನಿಯನ್ನು ಒಂದು ದಿನ ಆಚೆ ಹೋಗೋಣ ಅಂತ ಕರೆದಿದ್ದಾನೆ. ಆಗ ವಿದ್ಯಾರ್ಥಿನಿ ಶಾಲೆ ಸಮಯದಲ್ಲಿಯೇ ತಂದೆ ತಾಯಿಗೆ ಈ ವಿಷಯ ತಿಳಿಸದೆ ಈ ಹುಡುಗ ಕರೆದ ಜಾಗಕ್ಕೆ ಹೋಗುತ್ತಾಳೆ.
ಪ್ರೀತಿಯ ಮತ್ತಿನಲ್ಲಿದ್ದ ವಿದ್ಯಾರ್ಥಿನಿಗೆ ಜಯಸೂರ್ಯ ಯಾವ ಕೆಲಸ ಮಾಡೋಕು ಹಿಂಜರಿಯಲ್ಲ ಎಂಬ ಸೂಚನೆ ಇರಲಿಲ್ಲ. ಜಯಸೂರ್ಯ ಈ ವಿದ್ಯಾರ್ಥಿನಿಯನ್ನು ಹೊಟೇಲ್ ವೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಖಾಸಗಿ ಹೋಟೆಲ್ ಗೆ ಹೋಗಿ ಬಾಡಿಗೆ ರೂಮ್ ಗೆ ಕರೆದುಕೊಂಡು ಹೋಗಿದ್ದಾನೆ. ಇವನನ್ನು ನಂಬಿದ ಹುಡುಗಿ ಒಂಟಿಯಾಗಿ ಜಯಸೂರ್ಯನ ಜೊತೆ ಹೋಗಿದ್ದಾಳೆ. ಹೋಟೆಲ್ ನ ಆ ರೋಮ್ ಗೆ ಹೋದ ವೇಳೆ ರೂಂ ನ ಬಾಗಿಲು ತೆಗೆದಾಗ ವಿದ್ಯಾರ್ಥಿನಿಗೆ ದೊಡ್ಡ ಶಾಕ್ ಆಗುತ್ತೆ. ವಿದ್ಯಾರ್ಥಿನಿ ಕನಸಿನಲ್ಲೂ ಕೂಡ ಜಯಸೂರ್ಯ ಇಂತಹ ಕೆಲಸ ಮಾಡುತ್ತಾನೆ ಎಂದು ಅಂದುಕೊಂಡಿರಲಿಲ್ಲ.
ಜಯಸೂರ್ಯ ವಿದ್ಯಾರ್ಥಿನಿಯನ್ನು ಬಾಡಿಗೆ ರೂಮ್ ಗೆ ಕರೆದುಕೊಂಡು ಹೋಗಿ ಅ ತ್ಯಾಚಾರ ಮಾಡಿದ್ದಾನೆ. ಜಯಸೂರ್ಯ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಿದ್ದ ರೂಂನಲ್ಲಿ ಅವನ ಮೂರು ಜನ ಸ್ನೇಹಿತರು ಕೂಡ ಕಾದು ಕುಳಿತಿದ್ದರು. ಅತ್ತ ಕಡೆ ತನ್ನ ಮಗಳು ಕಾಣುತ್ತಿಲ್ಲವೆಂದು ಪಾಲಕರು ಪೊಲೀಸರಿಗೆ ದೂರು ಕೊಟ್ಟಿದ್ದರು ಅದೇ ಸಮಯಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿ ಖಾಸಗಿ ಹೋಟೆಲ್ ಗೆ ಬಂದು ಜಯಸೂರ್ಯನನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಪೊಲೀಸರು ತನಿಖೆಯನ್ನು ಆಳವಾಗಿ ಕಾರ್ಯಾಚರಣೆ ನಡೆಸಿದಾಗ ಜಯಸೂರ್ಯ ಎಂಬ ಈ ವ್ಯಕ್ತಿ ಮೂವರು ಸ್ನೇಹಿತರ ಜೊತೆ ಸೇರಿಕೊಂಡು ಹುಡುಗಿಯರನ್ನು ಯಾಮಾರಿಸಿ ಹೋಟೆಲ್ ರೂಮ್ ಗೆ ಕರೆ ತಂದು ಅ- ತ್ಯಾಚಾರ ಮಾಡುತ್ತಿದ್ದ ಎಂಬ ಸತ್ಯ ಹೊರಬಂದಿದೆ.