ಅಪ್ಪು ಜೇಮ್ಸ್ ಚಿತ್ರಕ್ಕೆ ಒಂದು ವಾರದ ನಂತರ ಕಂಟಕವಾಗಲಿದೆ ರಾಜಮೌಳಿಯವರ RRR ಸಿನೆಮಾ

ಇಡೀ ಕರ್ನಾಟಕವೇ ಕನಸಿನಲ್ಲಿ ಕೂಡ ಅಂದಾಜು ಮಾಡಿರುವ ಘಟನೆಯೊಂದು ಅಕ್ಟೋಬರ್ ತಿಂಗಳಲ್ಲಿ. ನಡೆದುಹೋಯ್ತು. ಕರ್ನಾಟಕದ ಯುವ ರತ್ನಾ ಪುನಿತ್ ರಾಜ್ ಕುಮಾರ್ ಅವರು ಇಹಲೋಕವನ್ನು ತ್ಯಜಿಸಿ ಬಿಟ್ಟರು. ಹಿನ್ನೆಲೆ ಇರುವವರು ಕೇವಲ ನೆನಪು ಮಾತ್ರ ಅವರು ಬಿಟ್ಟುಹೋಗಿರುವ ಸಾಧನೆಗಳೇ ನಮಗೆ ಮಾರ್ಗಸೂಚಿ. ಕಳೆದ 4 ತಿಂಗಳಿಂದ ನಾವೆಲ್ಲ ಅಪ್ಪು ಅವರ ನೆನಪಿನಲ್ಲೇ ಕಾಲ ಕಳೆಯುತ್ತಿದ್ದೇವೆ. ಇದೀಗ ನಮಗೆಲ್ಲ ಅಪ್ಪು ಅವರ ನೆನಪಿನನ್ನು ತೆರೆಯ ಮೇಲೆ ಮರುಳು ಹಾಕುವ ಅವಕಾಶ ಒದಗಿದೆ.

ನಿಮಗೆಲ್ಲ ಗೊತ್ತಿರುವ ಹಾಗೆ ಇದೇ ತಿಂಗಳು ಮಾರ್ಚ್ 17 ರಂದು ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಇದೇ ಮೊದಲ ಸಲ ಪುನೀತ್ ಅವರು ಇಲ್ಲದೆ ಅವರ ಹುಟ್ಟುಹಬ್ಬವನ್ನು ಆಚರಿಸುವ ದುರದೃಷ್ಟ ಒದಗಿದೆ. ಹಿಂದೆಂದೂ ಆಚರಿಸದ ರೀತಿ ದೊಟ್ಟಮಟ್ಟದಲ್ಲಿ ಪುನೀತ್ ಅವರ ಹುಟ್ಟು ಹಬ್ಬವನ್ನು ಆಚರಿಸಬೇಕೆಂದು ಅಭಿಮಾನಿಗಳೆಲ್ಲ ರೆಡಿಯಾಗಿದ್ದಾರೆ. ಹೆಲಿಕಾಪ್ಟರ್ ನಿಂದ ಪುನೀತ್ ಅವರ ಕಟೌಟ್ ಗೆ ಪುಷ್ಪಗಳ ಸುರಿಮಳೆ ಸೂರಿ ಸುರಿಸಲಿದ್ದಾರೆ.

ಮಾರ್ಚ್ ಹದಿನೇಳು ರಂದು ಸುಮಾರು ಇಪ್ಪತ್ತು ರಿಂದ ಮೂವತ್ತು ಸಾವಿರ ಅಭಿಮಾನಿಗಳು ಮೆರವಣಿಗೆ ಹೋಗಲಿದ್ದಾರೆ. ಇಷ್ಟೇಲ್ಲ ಯಾವ ಹೀರೋಗೂ ಸಿಗದಂತಹ ಸನ್ಮಾನ ಅಪ್ಪುಗೆ ಇದೇ ತಿಂಗಳು ಮಾರ್ಚ್ ಹದಿನೇಳರಂದು ಸಿಗಲಿದೆ ಅಪ್ಪು ಅವರ ಹುಟ್ಟುಹಬ್ಬದ ದಿನ ಅವರ ಕೊನೆಯ ಚಿತ್ರ ಜೇಮ್ಸ್ ಇಡೀ ದೇಶದಾದ್ಯಂತ ರಿಲೀಸ್ ಆಗಲಿದೆ. ಹಿಂದೆಂದೂ ಕಾಣದ ರೆಕಾರ್ಡ್ ಗಳನ್ನು ಈ ಸಿನಿಮಾ ಮಾಡಲಿದೆ. ಜೇಮ್ಸ್ ಚಿತ್ರ ಒಂದೇ ದಿನದಲ್ಲಿ 2 ಸಾವಿರಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಇಷ್ಟೇ ಅಲ್ಲ ಜೇಮ್ಸ್ ಚಿತ್ರ ಬಿಡುಗಡೆಯಾಗುವ ದಿನ ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಪುನೀತ್ ಅವರ ಎಲ್ಲ ಸಿನಿಮಾಗಳ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಒಟ್ಟಾರೆ 32 ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಅದ್ದೂರಿಯಾಗಿ ತೆರೆ ಕಾಣಲಿರುವ ಪುನೀತ್ ಜೇಮ್ಸ್ ಚಿತ್ರಕ್ಕೆ ಸಂಕಟವನ್ನು ಎದುರಾಗಲಿದೆ. ಹೌದು ಸ್ನೇಹಿತರ ಮಾರ್ಚ್ 17 ಕ್ಕೆ ಜೇಮ್ಸ್ ಚಿತ್ರ ಬಿಡುಗಡೆಯಾದ 1 ವಾರದ ನಂತರ ತೆಲುಗಿನ ರಾಜಮೌಳಿಯವರ RRR ಸಿನಿಮಾ ಕೂಡ ಬಿಡುಗಡೆ ಆಗಲಿದೆ.

ರಾಜಮೌಳಿ ಅವರ RRR ಸಿನಿಮಾ ಬಿಗ್ ಬಜೆಟ್ ಸಿನಿಮಾ ಆದ್ದರಿಂದ ಕರ್ನಾಟಕದಲ್ಲಿ RRR ಸಿನಿಮಾಗೆ ಹೆಚ್ಚಿನ ಥಿಯೇಟರ್ಗಳು ಪಾಲಾಗುವ ಸಾಧ್ಯತೆಯಿದೆ. ಜೇಮ್ಸ್ ಚಿತ್ರ ಒಂದೇ ವಾರಕ್ಕೆ ಕೊನೆಗೊಳ್ಳುತ್ತಾ ಎಂಬ ಭಯ ಅಭಿಮಾನಿಗಳಲ್ಲಿ ಕಾಡುತ್ತಿದೆ . ಒಂದು ಕಡೆ ಪುನೀತ್ ಅವರ ಅಭಿಮಾನಿಗಳು ಜೇಮ್ಸ್ ಚಿತ್ರವನ್ನು ಒಂದು ವಾರದ ನಂತರ ತೆಗೆದುಹಾಕಲು ನಾವು ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಜೇಮ್ಸ್ ಅಬ್ಬರದ ಮುಂದೆ RRR ಸಿನಿಮಾ ಧೂಳಿಪಟ ಆಗುತ್ತದೆಯೋ ಇಲ್ಲ RRR ಚಿತ್ರದ ಮುಂದೆ ಜೇಮ್ಸ್ ಚಿತ್ರ ಧೂಳಿಪಟ ಆಗುತ್ತದೆಯೋ ಕಾದು ನೋಡಬೇಕಾಗಿದೆ.

Leave a Comment