ಯಾವಾಗಲೂ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಎಂದರೆ ದೊಡ್ಡ ಮಟ್ಟದಲ್ಲಿ ಕ್ರೇಜ್ ಇರುತ್ತದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಅಂದ್ರೆ ಕ್ರೇಜ್ ಕಮ್ಮಿ ಇರುತ್ತಾ ಡಬಲ್ ಇರುತ್ತೆ. ಇಂದು ಮಾರ್ಚ್ 17 ರಂದು ಪುನೀತ್ ಅವರ ಕೊನೆಯ ಚಿತ್ರ ವಾದ ಜೆಮ್ಸ್ ವಿಶ್ವದಾದ್ಯಂತ ಬಿಡುಗಡೆ ಹೊಂದಿದೆ. ಗುರುವಾರ ಬಿಡುಗಡೆಯಾಗಿರುವ ಚಿತ್ರದ ಟಿಕೇಟ್ ಗಳು ರವಿವಾರದ ತನಕ ಮುಂಚಿತವಾಗಿಯೇ ಸೋಲ್ಡ್ ಆಗಿದೆ.
ಜೇಮ್ಸ್ ಚಿತ್ರ ಮೊದಲನೇ ದಿನವೇ ಭರ್ಜರಿ ಓಪನಿಂಗ್ ಪಡೆದಿದೆ ಇದು ಇತಿಹಾಸದ ಎಲ್ಲ ಹಳೆಯ ರೆಕಾರ್ಡ್ ಗಳನ್ನು ಉಡೀಸ್ ಮಾಡಿದೆ ಮತ್ತು ಯಾರು ಅಳಿಸಿಹಾಕಲು ಆಗ ದಂತಹ ದೊಡ್ಡ ದಾಖಲೆಯನ್ನು ಸೃಷ್ಟಿ ಮಾಡಿದೆ. ಇಡೀ ಕರ್ನಾಟಕದಲ್ಲಿ ಒಂದೇ ದಿನ ನಾಲ್ಕು ನೂರು ಸ್ಕ್ರೀನ್ ಗಳಲ್ಲಿ ಜೇಮ್ಸ್ ತೆರೆಕಂಡಿದೆ. ಹಾಗೆ ಕೇವಲ ಬೆಂಗಳೂರಿನಲ್ಲಿ ಸಾವಿರ ಶೋಗಳು ಒಂದೇ ದಿನ ತೆರೆ ಕಂಡಿದೆ. ಇತಿಹಾಸದಲ್ಲಿ ಇಲ್ಲಿಯವರೆಗೆ ಯಾವ ಕನ್ನಡ ಸಿನಿಮಾಗೆ ಕೂಡ ಇಷ್ಟೊಂದು ಶೋಗಳು ಸಿಕ್ಕಿರಲಿಲ್ಲ.
ಇಡೀ ಕರ್ನಾಟಕದಲ್ಲಿ 2500 ಶೋಗಳು ಮತ್ತು ದೇಶದಾದ್ಯಂತ ಮೂರರಿಂದ 4 ಸಾವಿರ ಶೋಗಳು ತೆರೆಕಂಡಿವೆ. ಸುಮಾರು ಎಲ್ಲಾ ಶೋಗಳು ಕೂಡ ಹೌಸ್ ಫುಲ್ ಆಗಿವೆ. ಕರ್ನಾಟಕದಲ್ಲಂತೂ ಕೇಳಲೇಬೇಡಿ ನಿಂತುಕೊಂಡು ಕೂಡ ಸಿನಿಮಾ ನೋಡಿದವರು ಇದ್ದಾರೆ. ಅಧಿಕೃತವಾಗಿ ಲೆಕ್ಕ ತೆಗೆದುಕೊಂಡರೆ ಜೇಮ್ಸ್ ಸಿನೆಮಾ ಕಡಿಮೆಯೆಂದರೂ ಮೂವತ್ತು ಕೋಟಿ ಕಲೆಕ್ಷನ್ ಮಾಡಿವೆ ಎಂಬುದನ್ನು ಅಂದಾಜು ಮಾಡಲಾಗಿದೆ. ಅತ್ಯಂತ ಹೆಚ್ಚು ಫಸ್ಟ್ ಡೇ ಕಲೆಕ್ಷನ್ ಮಾಡಿರುವ ಕನ್ನಡ ಸಿನಿಮಾ ಜೇಮ್ಸ್ ಆಗಿದೆ. ಮೊದಲ ಸ್ಥಾನದಲ್ಲಿದ್ದ ಯಶ್ ಅವರ ಕೆಜಿಎಫ್ ಚಿತ್ರವನ್ನು ಜೇಮ್ಸ್ ಇದೀಗ ಹಿಂದಿಕ್ಕಿದೆ.
ಅಷ್ಟೇ ಅಲ್ಲದೆ ಟಿಕೇಟ್ ದರವನ್ನು ಬಿಟ್ಟು ಜೇಮ್ಸ್ ಸಿನಿಮಾ ಎಂಬತ್ತು ಕೋಟಿ ರುಪಾಯಿಗಳನ್ನು ಡಿಜಿಟಲ್ ಮತ್ತು ಟೆಲಿವಿಷನ್ ರೈಟ್ಸ್ ನಿಂದ ಪಡೆದಿದೆ. ಅತಿ ಹೆಚ್ಚು ಟೆಲಿವಿಶನ್ ರೈಟ್ಸ್ ಗೆ ಮಾರಾಟವಾದ ಮೊದಲ ಕನ್ನಡ ಸಿನಿಮಾವಾಗಿದೆ. 40 ಕೋಟಿ ರುಪಾಯಿಗಳು ಸೋನಿ ಡಿಜಿಟಲ್ , 13.8 ಕೋಟಿ ಸ್ಟಾರ್ ನೆಟ್ ವರ್ಕ್, 5.7 ಕೋಟಿ ಮಾ ಟೀವಿ, 5 ಕೋಟಿ ಸನ್ ನೆಟ್ವರ್ಕ್, ಮಲಯಾಳಂ 1.2 ಕೋಟಿ ಗೆ ,ಭೋಜಪುರಿ 5 ಕೋಟಿಗೆ, ಹಿಂದಿ ಭಾಷೆಯ ಸೋನಿ ಟಿವಿ 2.5 ಕೋಟಿಗೆ ಜೇಮ್ಸ್ ಸಿನಿಮಾ ಮಾರಾಟವಾಗಿದೆ.
80 ಕೋಟಿ ರುಪಾಯಿಗಳು ರೈಟ್ಸ್ ನಿಂದ ಮತ್ತು 30 ಕೋಟಿ ರುಪಾಯಿಗಳು ಥಿಯೇಟರ್ ಕಲೆಕ್ಷನ್. ಒಟ್ಟಾರೆ ನೋಡಿದರೆ 110 ಕೋಟಿಗೂ ಅಧಿಕ ಹಣ ಅಪ್ಪು ಸಿನಿಮಾ ಗಳಿಸಿಕೊಂಡಿದೆ. ಪುನೀತ್ ಅವರ ಈ ಕೊನೆಯ ಸಿನಿಮಾ 2 ನೂರು ಕೋಟಿ ಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ಜೇಮ್ಸ್ ಚಿತ್ರದ ಈ ಕುದುರೆ ಓಟವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಬಿಡಿ. ಈ ರೆಕಾರ್ಡ್ ಗಳನ್ನು ನೋಡಿದರೆ ಜೇಮ್ಸ್ ಟ್ರೇಲರ್ ನಲ್ಲಿ ಹೇಳಿರುವ ಡೈಲಾಗ್ ವೊಂದು ನೆನಪಿಗೆ ಬರುತ್ತೆ ” ನನಗೆ ಮೊದಲಿನಿಂದಲೂ ರೆಕಾರ್ಡ್ಸ್ ಬ್ರೇಕ್ ಮಾಡಿ ನೇ ಅಭ್ಯಾಸ”