ಸಕತ್ ಫೇಮಸ್ ಆಗಿದ್ದ ಈ ಸ್ಟಾರ್ ಕಲಾವಿದರು ಇದ್ದಕಿದ್ದಂತೆ ಕಣ್ಮರೆ ಆಗಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ನಮ್ಮ ಭಾರತೀಯ ಚಿತ್ರರಂಗದಲ್ಲಿ ಖ್ಯಾತಿಯ ಉತ್ತುಂಗದಲ್ಲಿ ಇದ್ದಾಗಲೇ ಚಿತ್ರರಂಗದಿಂದ ತಮ್ಮ ಮೌಲ್ಯವನ್ನು ಕಳೆದುಕೊಂಡ ಕಲಾವಿದರ ಕುರಿತಂತೆ ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಮೊದಲಿಗೆ ತಮಿಳು ಚಿತ್ರರಂಗದ ದುಬಾರಿ ಹಾಸ್ಯ ನಟ ಆಗಿದ್ದ ವಡಿವೇಲು ಅವರ ಕುರಿತಂತೆ ಹೇಳಲು ಹೊರಟಿದ್ದೇವೆ. 2008 ನೇ ಇಸವಿಯಲ್ಲಿ ಅವರ ಮನೆಗೆ ಅಪರಿಚಿತರು ಕಲ್ಲಿನಿಂದ ದಾಳಿ ಮಾಡಿದಾಗ ಮನೆಯ ಗ್ಲಾಸ್ ಹಾಗೂ ಫರ್ನಿಚರ್ ಗಳು ಹಾನಿಗೊಳಗಾದವು.

ಇದನ್ನು ವಡಿವೇಲ್ ರವರು ನಟ ಹಾಗೂ ರಾಜಕೀಯ ನಾಯಕ ವಿಜಯಕಾಂತ್ ಹಾಗೂ ಅವರ ಚೇಲಗಳು ಮಾಡಿದ್ದಾರೆ ಎಂಬುದಾಗಿ ಆರೋಪಿಸಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ಸಿನಿಮಾಗಳ ಅಡ್ವಾನ್ಸ್ ಹಣವನ್ನು ತೆಗೆದುಕೊಂಡು ನಟಿಸದೆ ಸಿನಿಮಾ ಮಂಡಳಿಯಿಂದ ರೆಡ್ ನೋಟಿಸಿಗೆ ಒಳಗಾಗಿ ಸಿನಿಮಾರಂಗದಿಂದ ಕೂಡ ಬ್ಯಾನ್ ಅನುಭವಿಸುತ್ತಾರೆ.

ಎರಡನೇದಾಗಿ ಸಿಂಬು. ನಟ ಸಿಲಂಬರಸನ್ ರವರು ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರು. ಸದಾಕಾಲ ತಮ್ಮ ಸಿನಿಮಾಗಳ ವಿಚಾರವಾಗಿ ವಿವಾದಾತ್ಮಕವಾಗಿ ಸುದ್ದಿಯಾಗುತ್ತಿದ್ದ ಇವರು ತಮ್ಮ ಸಿನಿಮಾದ ಹಲವಾರು ಹಾಡುಗಳ ಮೂಲಕ ವಿವಾದಗಳನ್ನು ಹುಟ್ಟುಹಾಕಿದ್ದಾರೆ ಇನ್ನು ಕೆಲವು ಸಿನಿಮಾಗಳನ್ನು ಒಪ್ಪಿಕೊಂಡು ಮಾಡದೆ ಕೂಡ ಸುದ್ದಿಯಾಗಿ ಕಾಂಟ್ರವರ್ಸಿ ಕ್ರಿಯೇಟ್ ಮಾಡಿದ್ದರು. ಹಲವಾರು ಹಾಡುಗಳಲ್ಲಿ ವಿವಾದಾತ್ಮಕ ಸಾಹಿತ್ಯವನ್ನು ಬರೆಯುವುದರ ಮೂಲಕ ಮಹಿಳಾ ಸಮಾಜದ ವಿರುದ್ಧದ ಕೆಂಗಣ್ಣಿಗೆ ಕೂಡ ಇವರು ಗುರಿಯಾಗಿದ್ದರು.

ಮೂರನೇದಾಗಿ ಕಮಲ್ ಹಾಸನ್. ತಮಿಳು ಚಿತ್ರರಂಗದ ಹಿರಿಯ ನಟ ಆದರೆ ಇವರು ಮಾಡಿರುವ ಹಲವಾರು ಸಿನಿಮಾಗಳಲ್ಲಿ ಅದರಲ್ಲೂ ದಶಾವತಾರಂ ಎನ್ನುವ ಸಿನಿಮಾ ಯಾವ ಮಟ್ಟಿಗೆ ವಿವಾದವನ್ನು ಹುಟ್ಟು ಹಾಕಿತ್ತು ಎಂಬುದು ನಿಮಗೆ ತಿಳಿದಿದೆ. ಈಗ ಅವರಿಗೆ ಯಾವುದೇ ಸಮಸ್ಯೆ ಇಲ್ಲ ಬಹುದು ಆದರೆ 80ರ ದಶಕದಲ್ಲಿ ಒಂದು ಕಾರ್ಯಕ್ರಮದಲ್ಲಿ ತಮಿಳು ಚಿತ್ರರಂಗದ ದಂತಕತೆ ಎಂಜಿಆರ್ ಅವರು ಆಗಮಿಸಿದ್ದರು

ಆ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಂತಿದ್ದರೂ ಆದರೆ ಕಮಲ ಹಾಸನ್ ಮಾತ್ರ ಕುಳಿತು ಆಗೌರವವನ್ನು ಗೊತ್ತೋ ಗೊತ್ತಿಲ್ಲದೆಯೋ ಸೂಚಿಸಿದ್ದರು. ಆ ಸಂದರ್ಭದಲ್ಲಿ ತಮಿಳು ಚಿತ್ರರಂಗದಲ್ಲಿ ಯಾವುದು ಅವಕಾಶ ಸಿಗದೆ ಎಂಜಿಆರ್ ಅವರು ಮರಣ ಹೊಂದುವ ತನಕವೂ ಕೂಡ ಮಲಯಾಳಂ ಚಿತ್ರರಂಗದಲ್ಲೇ ಇದ್ದರಂತೆ.

ಇನ್ನು ಕನ್ನಡ ಮೂಲದ ಸುಮನ್ ಕೂಡ ಒಂದು ಕಾಲದಲ್ಲಿ ತಮಿಳು ಚಿತ್ರರಂಗದ ಸ್ಟಾರ್ ನಟ ಆಗಿ ಚಾಕ್ಲೇಟ್ ಬಾಯ್ ರೀತಿಯಲ್ಲಿ ಫೇಮಸ್ ಆಗಿದ್ದರು. ಆದರೆ ತಮಿಳು ನಾಡಿನ ಖ್ಯಾತ ಉದ್ಯಮಿ ಒಬ್ಬರ ಮಗಳನ್ನು ಪ್ರೀತಿ ಮಾಡಿದ ನಂತರ ಅಲ್ಲಿ ಎಂಜಿಆರ್ ಅವರಿಂದ ಒತ್ತಡ ಬಂದ ನಂತರ ಆ ಚಿತ್ರರಂಗವನ್ನು ಬಿಟ್ಟು ತೆಲುಗು ಚಿತ್ರರಂಗಕ್ಕೆ ಹೋದರು ಎಂಬ ಸುದ್ದಿ ಕೂಡ ಇದೆ. ಈ ವಿಚಾರಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a Comment