ಬೀದಿ ಭಿಕ್ಷುಕಿಯ ಮಗಳು ಸಲ್ಮಾನ್ ಖಾನ್ ತಂಗಿ ಆಗಿದ್ದೆಗೆ? ಇಲ್ಲಿದೆ ನೋಡಿ ಅಸಲಿ ಸತ್ಯ.

ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಸಲ್ಮಾನ್ ಖಾನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಾಲಿವುಡ್ ಚಿತ್ರರಂಗದ ನಾಯಕನಾದರೂ ಕೂಡ ಅವರ ಅಭಿಮಾನಿಗಳು ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೂಡ ದೊಡ್ಡ ಮಟ್ಟದಲ್ಲಿದ್ದಾರೆ. ಸಲ್ಮಾನ್ ಖಾನ್ ರವರು ಹಲವು ವರ್ಷಗಳ ಹಿಂದೆ ಮಾಡಿರುವ ಕೆಟ್ಟ ಕೆಲಸಗಳ ಬಗ್ಗೆ ಗೊತ್ತು ಆದರೆ ಅವರ ಒಳ್ಳೆಯತನದ ಬಗ್ಗೆ ಗೊತ್ತಿರುವುದು ಕೆಲವರಿಗೆ ಮಾತ್ರ. ಅದರಲ್ಲೂ ವಿಶೇಷವಾಗಿ ಅವರ ತಂಗಿಯಾಗಿರುವ ಅರ್ಪಿತ ಖಾನ್ ಅವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಅರೆ ಇದೇನಿದು ಅರ್ಪಿತಾ ಖಾನ್ ಅವರ ಹೆಸರು ಹಿಂದೂ ರೀತಿ ಇದೆ ಅವರು ಹೇಗೆ ಸಲ್ಮಾನ್ ಖಾನ್ ಅವರ ಸಹೋದರಿಯಾಗಲು ಸಾಧ್ಯ ಎಂಬುದಾಗಿ ನೀವು ಕೇಳಬಹುದು. 30 ವರ್ಷಗಳ ಹಿಂದೆ ಸಲ್ಮಾನ್ ಖಾನ್ ರವರ ತಂದೆ ಸಲೀಂ ಖಾನ್ ಅವರು ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಬೀದಿ ಬದಿ ಕೊಳಕು ಬಟ್ಟೆಯಲ್ಲಿ ಒಬ್ಬ ಭಿಕ್ಷುಕ ತನ್ನ ಹೆಣ್ಣು ಮಗುವಿನ ಜೊತೆಗೆ ಕೂತಿರುವುದು ಕಾಣಿಸುತ್ತದೆ. ಆಗ ಅವರಿಗೆ ಮನಸ್ಸು ಕರಗಿ ತಮ್ಮ ಮನೆಯಿಂದ ಆಹಾರ ನೀಡುವ ಕಾರ್ಯವನ್ನು ಮಾಡುತ್ತಾರೆ. ಇದೇ ರೀತಿ ಪ್ರತಿದಿನ ವಾಕಿಂಗ್ ಗೆ ಬಂದಾಗಲೂ ಕೂಡ ಸಲೀಂ ಖಾನ್ ಅವರು ಇದನ್ನೇ ಮಾಡುತ್ತಾರೆ ಆದರೆ ಒಂದು ದಿನ ಆಕೆ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ. ಆ ಮಗು ಏನೂ ತಿಳಿಯದೆ ತಾಯಿಯ ದೇಹದ ಬಳಿಯ ಕೂತಿರುತ್ತದೆ.

ಇದನ್ನು ಕಂಡು ಮರುಗಿದ ಸಲೀಂ ಖಾನ್ ಅವರು ಆ ಮಗುವನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ತಮ್ಮ ಮಗಳಂತೆ ಸಾಕುತ್ತಾರೆ. ಕೇವಲ ಸಲಿಂ ಖಾನ್ ಮಾತ್ರವಲ್ಲದೆ ಅವರ ಮೂರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಕೂಡ ತಮ್ಮ ಸಹೋದರಿಯಂತೆಯೇ ಅರ್ಪಿತ ಅವರನ್ನು ಕಾಣುತ್ತಾರೆ. ತಮ್ಮ ಜೊತೆಗೆ ಇದ್ದಾಳೆ ಎನ್ನುವ ಕಾರಣಕ್ಕಾಗಿ ಖಾನ್ ಎಂಬ ಸರ್ ನೇಮ್ ಅನ್ನು ಅವಳಿಗೆ ಹಾಕುತ್ತಾರೆ ಹೊರತು ಧರ್ಮ ಬದಲಾವಣೆ ಕುರಿತಂತೆ ಯಾವತ್ತೂ ಕೂಡ ಮಾತನಾಡಿದವರಲ್ಲ. ಸಲ್ಮಾನ್ ಖಾನ್ ಕೂಡ ತಮ್ಮ ತಂಗಿ ಎಂದರೆ ಪಂಚಪ್ರಾಣ ಎನ್ನುತ್ತಿದ್ದರು. ಅವಳ ಇಷ್ಟದಂತೆಯೇ ಅವಳಿಗೆ ಆರ್ಕಿಟೆಕ್ಟರ್ ವಿದ್ಯಾಭ್ಯಾಸವನ್ನು ಕಲಿಸುತ್ತಾರೆ.

ಆಯುಷ್ ಶರ್ಮ ಎನ್ನುವ ಉದ್ಯಮಿ ಹಾಗೂ ನಟನಿಗೆ ಕೊಟ್ಟು ಹೈದರಾಬಾದ್ನ ನಿಜಾಮರ ಅರಮನೆಯಲ್ಲಿ ಬರೋಬ್ಬರಿ ಎರಡು ಕೋಟಿಗೂ ಅಧಿಕ ಖರ್ಚಿನಲ್ಲಿ ಮದುವೆ ಮಾಡಿಸಿ ಕೊಡುತ್ತಾರೆ. ಅಷ್ಟರಮಟ್ಟಿಗೆ ಅರ್ಪಿತಾಳನ್ನು ಖಾನ್ ಅವರ ಕುಟುಂಬ ತಮ್ಮ ಮನೆಯ ಹೆಣ್ಣು ಮಗಳು ಎಂದು ಭೇದ ಭಾವ ಇಲ್ಲ ಸಾಕಿ ಸಲಹಿದರು. ಅರ್ಪಿತಾ ಖಾನ್ ಯಾರು ಎಂಬ ಕುರಿತಂತೆ ಎಲ್ಲರಿಗೂ ಕೂಡ ತಿಳಿದಿದೆ ಆದರೆ ಅವರ ನಿಜವಾದ ಜನ್ಮ ರಹಸ್ಯ ಏನು ಎಂಬುದು ಹಲವಾರು ಜನರಿಗೆ ತಿಳಿದಿಲ್ಲ. ಈ ನಿಜವಾದ ರಹಸ್ಯವನ್ನು ತಿಳಿದ ನಂತರ ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬದ ನಿಜವಾದ ವ್ಯಕ್ತಿತ್ವ ಏನು ಎಂಬುದನ್ನು ಜನರು ಅರಿತುಕೊಳ್ಳಬಹುದಾಗಿದೆ.

Leave a Comment