ಬಸ್ ಡ್ರೈವರ್ ಆಗಿದ್ದ ಯಶ್ ಅಪ್ಪ ಇದೀಗ ಹೇಗೆ ರಾಯಲ್ ಆಗಿ ಬದುಕುತ್ತಿದ್ದಾರೆ ನೋಡಿ

ನಟ ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಕನ್ನಡ ಸಿನಿಮಾದ ಯಶಸ್ವಿ ನಟ. ಇದ್ದಕ್ಕಿದ್ದಂತೆ ಯಾವುದೋ ಪವಾಡ ನಡೆದು ನಟ ಯಶ್ ಅವರು ರಾತ್ರೋರಾತ್ರಿ ಹೆಸರು ಮಾಡಿದವರಲ್ಲ. ಸತತ ಪರಿಶ್ರಮ ಮತ್ತು ತಾಳ್ಮೆಯಿಂದ ಕಷ್ಟಪಟ್ಟು ಹೆಸರನ್ನು ಸಂಪಾದನೆ ಮಾಡಿದ್ದಾರೆ. ಯಶ್ ಅವರ ತಂದೆ ಒಬ್ಬ ಸಾಧಾರಣ ಬಸ್ ಡ್ರೈವರ್. ಆ ದಿನಗಳಲ್ಲಿ ಯಶ್ ಅವರ ತಂದೆ ಬಸ್ ಓಡಿಸಿ ಅದರಲ್ಲಿ ಬಂದ ಹಣದಿಂದ ತನ್ನ ಕುಟುಂಬವನ್ನು ನಡೆಸುತ್ತಿದ್ದರು.

ಕಡಿಮೆ ಸಂಬಳ ಬಂದರೂ ಕೂಡ ಯಶ್ ತಂದೆ ತನ್ನ ಮಕ್ಕಳನ್ನು ರಾಯಲ್ ಆಗಿಯೇ ಬೆಳೆಸಿದ್ದಾರೆ. ಎಂದಿಗೂ ಕೂಡ ತಮ್ಮ ಮಕ್ಕಳಿಗೆ ಯಾವುದು ಕಡಿಮೆ ಮಾಡಿಲ್ಲ. ಯಶ್ ಅವರು ಕೂಡ ತಮ್ಮ ತಂದೆ ನನ್ನ ಚಿಕ್ಕ ವಯಸ್ಸಿನಲ್ಲಿ ತುಂಬಾ ಚೆನ್ನಾಗಿ ಬೆಳೆಸಿದ್ದಾರೆ ಇಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಯಶ್ ಅವರ ತಂದೆ ತಾಯಿಗೆ ಮುಂಚೆ ತಮ್ಮ ಮಕ್ಕಳು ಚೆನ್ನಾಗಿರಬೇಕು ಆರೋಗ್ಯವಾಗಿರಬೇಕು ಎನ್ನುವುದೇ ಗುರಿಯಾಗಿತ್ತು.

ಆದರೆ ಇಂದು ಯಶ್ ಅವರು ತಮ್ಮನ್ನು ಚಿಕ್ಕವಯಸ್ಸಿನಿಂದ ರಾಯಲ್ ಆಗಿ ಬೆಳೆಸಿದ ತಂದೆ ತಾಯಿಯನ್ನು ಇದೀಗ ರಾಯಲ್ ಆಗಿ ಸಾಕುತ್ತಿದ್ದಾರೆ. ಹೌದು ಯಶ್ ಅವರ ತಂದೆ ಇದೀಗ ಸಕ್ಕತ್ತಾಗಿ ರಾಯಲ್ ಲೈಫ್ ನಡೆಸುತ್ತಿದ್ದಾರೆ. ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಯಶ್ ಅವರ ತಂದೆ ಇಡೀ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ. ಯಶ್ ಅವರು ಚಿತ್ರರಂಗದಲ್ಲಿ ಯಶಸ್ಸನ್ನು ಪಡೆದ ಮೇಲೆ ಯಶ್ ಅವರ ತಂದೆ ಬಸ್ ಒಡಿಸುವುದನ್ನು ಬಿಟ್ಟು ಇದೀಗ ರಿಟೈರ್ ತಗೊಂಡಿದ್ದಾರೆ. ಹಾಗಾದರೆ ಇದೀಗ ಯಶ್ ಅವರ ತಂದೆ ಮತ್ತು ತಾಯಿ ಹೇಗಿದ್ದಾರೆ ಮತ್ತು ಏನ್ ಮಾಡ್ತಾ ಇದ್ದಾರೆ ಗೊತ್ತಾ..

ಯಶ್ ಅವರ ತಂದೆಗೆ ಮುಂಚೆಯಿಂದಲೂ ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಇತ್ತು. ತನ್ನ ಮಗನ ಬಳಿ ಯಶ್ ಅವರ ತಂದೆ ಹತ್ತು ಎಕರೆ ಜಾಗವನ್ನು ನನಗೆ ಕೊಡಿಸು ಎಂದು ಕೇಳಿಕೊಂಡಿದ್ದರು. ತನ್ನ ತಂದೆಯ ಆಸೆಯನ್ನು ಈಡೇರಿಸಲು ಯಶ್ ಅವರು ತನ್ನ ತಂದೆಗೆ ಹಾಸನದಲ್ಲಿ ಹತ್ತು ಎಕರೆಗೂ ಹೆಚ್ಚಿನ ಜಮೀನು ಪ್ರದೇಶವನ್ನು ಖರೀದಿ ಮಾಡಿ ಉಡುಗೊರೆಯಾಗಿ ಕೊಟ್ಟಿದ್ದಾರೆ. ಮತ್ತು ಖರೀದಿಸಿದ ಜಮೀನಿನಲ್ಲಿ ಫಾರ್ಮ್ ಹೌಸ್ ನಿರ್ಮಾಣ ಮಾಡಿದ್ದಾರೆ. ಈ ಬೃಹತ್ತಾದ ಫಾರ್ಮ್ ಹೌಸ್ ನಲ್ಲಿ ಯಶ್ ಅವರ ತಂದೆ ತಾಯಿ ವಾಸ ಮಾಡುತ್ತಾರೆ.

ಬೃಹತ್ತಾದ ಜಮೀನಿನಲ್ಲಿ ಯಶ್ ಅವರ ಸಾವಿರಾರು ಮಾವಿನ ಮರ ತೆಂಗಿನಮರ ಹಲಸಿನ ಮರ-ಗಿಡಗಳನ್ನು ಬೆಳೆಸಿದ್ದಾರೆ. ಈ ಜಮೀನಿನ ಅಭಿವೃದ್ಧಿ ಇನ್ನೂ ಕೂಡ ಪ್ರಗತಿಯಲ್ಲಿದೆ. ಕೆರೆಗಳನ್ನು ಕಟ್ಟಿ ಜಮೀನನ್ನು ಇನ್ನೂ ಫಲವತ್ತಾಗಿ ಮಾಡಬೇಕೆಂಬುದು ಅವರ ತಂದೆಯ ಆಸೆ. ಹಾಗೆ ತನ್ನ ತಂದೆಗೆ ಓಡಾಡಲು ಯಶ್ ಅವರು ಮಹಿಂದ್ರಾ ಥಾರ್ ಜೀಪ್ ವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ಜಿಪ್ ನ ಬೆಲೆ ಹದಿನೈದು ಲಕ್ಷ ರುಪಾಯಿಗಳು. ಯಶ್ ಅವರು ಆಗಾಗ ಈ ಫಾರ್ಮ್ ಹೌಸ್ ಗೆ ಬರುತ್ತಾರೆ ಮತ್ತು ಯಶ್ ಅವರ ತಂದೆ ತಾಯಿ ಕೂಡ ಆಗಾಗ ಬೆಂಗಳೂರಿಗೆ ಹೋಗಿ ತಮ್ಮ ಮೊಮ್ಮಕ್ಕಳ ಜತೆ ಕಾಲ ಕಳೆಯುತ್ತಿರುತ್ತಾರೆ.

ಯಶ್ ಅವರ ಈ ಒಂದು ಅಗಾಧ ಯಶಸ್ಸನ್ನು ಕಂಡು ತಂದೆ ತಾಯಿ ಇಬ್ಬರೂ ಕೂಡ ಆನಂದ ಭಾಷ್ಪ ಸುರಿಸಿದ್ದಾರೆ. ತನ್ನ ಮಗನನ್ನು ತುಂಬಾ ಕಷ್ಟಪಟ್ಟು ಸಾಕಿದ್ದೇವೆ ಇದೀಗ ಅವನು ನಮ್ಮನ್ನು ರಾಯಲ್ಲಾಗಿ ಸಾಕುತ್ತಿದ್ದಾನೆ ಇಂಥ ಮಗನನ್ನು ಪಡೆದಿತ್ತು ಸಾರ್ಥಕವಾಯಿತು ಎಂದು ಯಶ್ ತಂದೆ ತಾಯಿ ಹೇಳಿಕೊಂಡಿದ್ದಾರೆ. ಯಶ್ ಅವರ ಸಾಧನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹೇಳಿ ಎಂದಾಗ ಯಶ್ ಅವರ ತಾಯಿ ನನ್ನ ಮಗ ಇನ್ನೂ ಏನು ಸಾದಿಸಿಲ್ಲ. ಅವನು ಜನರಿಗೋಸ್ಕರ ಈ ಸಮಾಜಕ್ಕೋಸ್ಕರ ಇನ್ನೂ ಏನಾದರೂ ಒಳಿತನ್ನು ಮಾಡಬೇಕಿದೆ.ಅವನಿಗೆ ಆ ಸಾಮರ್ಥ್ಯ ಇದೆ.ಅವನು ಖಂಡಿತ ಮಾಡೇ ಮಾಡುತ್ತಾನೆ ಎಂದು ಹೇಳಿದ್ದಾರೆ.

Leave a Comment