ಆಕಾಶದಲ್ಲಿ ನಕ್ಷತ್ರವನ್ನು ಎಣಿಸುತ್ತಾ ಇದ್ದರೆ ಆ ನಕ್ಷತ್ರಗಳಲ್ಲಿ ಒಂದು ತಾರೆ ಅಪ್ಪು ಇರಬಹುದು ಅಂತ ಅನಿಸುತ್ತೆ. ನಮ್ಮ ಜೊತೆಗೆ ಇದ್ದಾಗಲೂ ಸ್ಟಾರ್ ಆಗಿದ್ದ ಪುನೀತ್ ಈಗ ಇಲ್ಲದಿದ್ದರೂ ಸೇರಿಕೊಂಡಿದ್ದು ತಾರೆಯನ್ನೇ. ಅದೆಷ್ಟು ವರ್ಷಗಳು ಉರುಳಿದರೂ ಅಪ್ಪು ಅವರನ್ನು ಕನ್ನಡ ಚಿತ್ರರಂಗವಾಗಲಿ, ಅವರ ಅಭಿಮಾನಿಗಳಾಗಲಿ ಎಂದೆಂದಿಗೂ ಮರೆಯಲು ಸಾಧ್ಯವೇ ಇಲ್ಲ. ಇನ್ನು ಅವರ ಕುಟುಂಬದವರಂತೂ ಇಂದಿಗೂ ಅಪ್ಪು ತಮ್ಮ ಜೊತೆ ಇದ್ದಾನೆ ಎಂಬ ಭಾವನೆಯಲ್ಲಿಯೇ ದಿನಕಳೆಯುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಹೋದರಿ ಪೂರ್ಣಿಮಾ ರಾಜಕುಮಾರ್, ಅಪ್ಪು ಅವರೊಂದಿಗೆ ಅಪಾರ ಬಾಂಧವ್ಯವನ್ನು ಇಟ್ಟುಕೊಂಡವರು. ತಮ್ಮನನ್ನು ಅತ್ಯಂತ ಪ್ರೀತಿಸುತ್ತಿದ್ದ ಪೂರ್ಣಿಮಾ ಅವರು ಅಶ್ವಿನಿ ಹಾಗೂ ಅಪ್ಪು ನಿಜವಾಗಿಯೂ ಯಾವ ರೀತಿ ಇರ್ತಾ ಇದ್ರು ಅನ್ನೋದನ್ನು ತಿಳಿಸಿದ್ದಾರೆ.
ಪುನೀತ್ ರಾಜಕುಮಾರ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಅವರು ಒಬ್ಬ ಸ್ಟಾರ್ ನಟ ಎಂದು ಜನ ನೋಡುವುದಕ್ಕಿಂತ ಅವರ ಮುಗ್ಧವಾದ ನಗು, ಅವರ ವ್ಯಕ್ತಿತ್ವವನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಿದ್ದರು. ಪುನೀತ್ ರಾಜಕುಮಾರ್ ಗೆ ಕೇವಲ ಸ್ನೇಹಿತರ ಬಳಗ ಮಾತ್ರ ಇತ್ತು. ಯಾರೊಂದಿಗೂ ಯಾವತ್ತಿಗೂ ವೈರತ್ವವನ್ನು ಕಟ್ಟಿಕೊಂಡವರಲ್ಲ. ಹಾಗಾಗಿ ತಮ್ಮ ಮನೆಯಲ್ಲಿಯೂ ಪುನೀತ್ ರಾಜಕುಮಾರ್ ಬಹಳ ಪ್ರೀತಿಯಿಂದಲೇ ಇರುತ್ತಿದ್ದರು.
ಅಪ್ಪು ಅವರ ಸಹೋದರಿ ಪೂರ್ಣಿಮಾ ಹೇಳುವಂತೆ, ’ತಾನು ಹುಟ್ಟಿದ ನಂತರ ಹುಟ್ಟಿದ ಅಪ್ಪು ಎಂದರೆ ನನಗೆ ಬಹಳ ಪ್ರೀತಿ. ಅವನು ಅತ್ಯಂತ ಚಿಕ್ಕವನಿರುವಾಗಲೇ ನಾನು ಅವನನ್ನು ಎತ್ತಿಕೊಳ್ಳುತ್ತಿದ್ದೆ. ಮನೆಯವರು ಅಷ್ಟೇ ಅಲ್ಲ ಅಪ್ಪುವನ್ನ ಯಾರೇ ನೋಡಿದ್ರು ಎತ್ತಿಕೊಂಡು ಮುದ್ದಾಡುತ್ತಿದ್ದರು. ಅಪ್ಪು ದೊಡ್ಡವನಾದ ಮೇಲೆಯೂ ಹಾಗೆಯೇ ಇದ್ದ. ಎಲ್ಲರ ಜೊತೆಗೆ ಪ್ರೀತಿಯಿಂದ ತಾಳ್ಮೆಯಿಂದ ವ್ಯವಹರಿಸುತ್ತಿದ್ದ’. ಎಂದು ಸಹೋದರಿ ಪೂರ್ಣಿಮ ತಿಳಿಸುತ್ತಾರೆ. ಇನ್ನು ಪುನೀತ್ ರಾಜಕುಮಾರ್ ಅವರು ಮದುವೆಯಾದ ಮೇಲೆಯೂ ಅಶ್ವಿನಿ ಹಾಗೂ ತನ್ನ ಮಕ್ಕಳೊಂದಿಗೆ ಹೇಗೆ ಇದ್ದರೂ ಎಂಬುದನ್ನು ಅಶ್ವಿನಿ ಹೇಳುತ್ತಾರೆ.
’ಪುನೀತ್ ರಾಜಕುಮಾರ್ ಎಂದೂ ತಮ್ಮೊಂದಿಗೆ ಇಲ್ಲ ಎನ್ನುವ ಭಾವನೆಯ ನಮ್ಮಲ್ಲಿಇನ್ನೂ ಮೂಡದೇ ಇರುವುದಕ್ಕೆ ಕಾರಣ ಆತನ ಪತ್ನಿ ಅಶ್ವಿನಿ. ಇಂದು ಅವಳಲ್ಲಿಯೇ ನಾವು ಅಪ್ಪುವನ್ನ ಕಾಣುತ್ತಾ ಇದ್ದೇವೆ. ಅಪ್ಪು ಹಾಗೂ ಅಶ್ವಿನಿ ಯಾವತ್ತೂ ಗಂಡ-ಹೆಂಡತಿಯ ತರ ಇರಲಿಲ್ಲ. ಅವರು ಉತ್ತಮ ಸ್ನೇಹಿತರಂತೆ ಇದ್ದರು. ಅಪ್ಪು ಕೂಡ ಯಾವತ್ತೂ ಸಿಟ್ಟು ಮಾಡಿಕೊಂಡವನಲ್ಲ. ಆತ ಯಾರ ಮೇಲೆ ರೇಗಾಡಿದ್ದನ್ನೂ ನಾನು ನೋಡಿಲ್ಲ. ಮಕ್ಕಳಿಗೂ ಇದುವರೆಗೆ ಒಂದು ಮಾತು ಅಂದವನಲ್ಲ ಅಪ್ಪು’. ಎಂದು ಅಪ್ಪು ಹಾಗೂ ಅಶ್ವಿನಿ ಅವರ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡಿರುವ ಪೂರ್ಣಿಮ ಹೇಳುತ್ತಾರೆ.
ಇನ್ನು ಅಪ್ಪು ಮನೆಯವರಿಗೆ ಮಾತ್ರವಲ್ಲ ಎಲ್ಲರಿಗೂ ಸ್ಪಂದಿಸುತ್ತಿದ್ದ ಜೀವ. ತಾವು ಎಷ್ಟೇ ಬ್ಯುಸಿ ಇರಲಿ ತಮ್ಮ ಕೆಲಸ ಮುಗಿದ ತಕ್ಷಣ ಯಾರೇ ಕರೆ ಮಾಡಿದ್ದರೂ ಉತ್ತರಿಸುತ್ತಿದ್ದರು. ಅಪ್ಪು ಅವರು ಸ್ಟಾರ್ ನಟರಾಗಿದ್ದರು ಕೂಡ ಬೇರೆ ಬೇರೆ ಮೊಬೈಲ್ ಗಳನ್ನ, ನಂಬರ್ ಳನ್ನು ಇಟ್ಟುಕೊಂಡಿರಲಿಲ್ಲ. ಪೂರ್ಣಿಮ ಅವರು ಹೇಳುವಂತೆ ಅಪ್ಪು ಅವರ ನಂಬರ್ ಅವರ ಕುಟುಂಬದಲ್ಲಿ ಎಲ್ಲರ ಬಳಿಯೂ ಇತ್ತು. ಹಾಗಾಗಿ ಯಾರೂ ಯಾವುದೇ ವಿಷಯವನ್ನು ತಿಳಿಸುವುದಿದ್ದರೂ ನೇರವಾಗಿ ಅಪ್ಪುವಿಗೆ ಕಾಲ್ ಮಾಡಿ ಮಾತನಾಡುತ್ತಿದ್ದರು. ಅಪ್ಪು ಕೂಡ ಯಾರೇ ಕಾಲ್ ಮಾಡಿದ್ರು ಅತ್ಯಂತ ಸಂಯಮದಿಂದ ಮಾತನಾಡುತ್ತಿದ್ದರು.
ಇನ್ನು ಅಪ್ಪು ಕಾಲವಾದ ಮೇಲೆ ಅಶ್ವಿನಿ ಅವರನ್ನು ಪೂರ್ಣಿಮಾ ರಾಜಕುಮಾರ್, ರಾಘಣ್ಣ ಹಾಗೂ ಇತರರು ದಿನವೂ ಹೋಗಿ ಮಾತನಾಡಿಸಿಕೊಂಡು ಬರುತ್ತಾರಂತೆ. ಅಪ್ಪು ಮನೆಗೆ ಹೋಗಿ ಅಶ್ವಿನಿ ಹಾಗೂ ಅವರ ಮಕ್ಕಳನ್ನು ನೋಡಿದಾಗ ಅಪ್ಪು ಇಲ್ಲೇ ಎಲ್ಲೊ ಇದ್ದಾನೆ ಜಿಮ್ಮಿನಲ್ಲಿಯೋ ಶೂಟಿಂಗ್ ನಲ್ಲಿಯೋ ಎನ್ನುತ್ತಾರೆ ಪೂರ್ಣಿಮಾ. ಅವರ ಕುಟುಂಬದವರಿಗೆ ಮಾತ್ರವಲ್ಲ ಅಪ್ಪು ಅಭಿಮಾನಿಗಳು ಕೂಡ ತಮ್ಮ ಜೊತೆಯಲ್ಲಿ ಅಪ್ಪು ಇದ್ದಾರೆ ಎಂದೇ ಭಾವಿಸಿ ಜೀವನ ಸಾಗಿಸುತ್ತಿದ್ದಾರೆ.