ಮದುವೆಗೆ ಮುನ್ನ ಸರ್ಪ್ರೈಸ್ ಗಿಫ್ಟ್ ಪಡೆದ ಹರ್ಷಿಕ ಪುಣಚ್ಚ

ಸ್ನೇಹಿತರೆ, ಸ್ಯಾಂಡಲ್ ವುಡ್ನ ಮುದ್ದಾದ ಜೋಡಿಗಳೆನಿಕೊಳ್ಳುವ ಹರ್ಷಿಕ ಪುಣಚ್ಚ(Harshika Poonacha) ಮತ್ತು ಭುವನ್ ಪೊನ್ನಣ್ಣ (Bhuvan Ponanna) ಇದೇ ತಿಂಗಳು 23 ಮತ್ತು 24ನೇ ತಾರೀಖಿನಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದರ ಬೆನ್ನಲ್ಲೇ ಸ್ಯಾಂಡಲ್ವುಡ್ ನ ಗಣ್ಯರಿಗೆ ಮದುವೆ ಲಗ್ನ ಪತ್ರಿಕೆ ಹಂಚುತ್ತ ಸರ್ವರಿಗೂ ಆಹ್ವಾನ ಕೋರುತ್ತಿದ್ದಾರೆ.

ಹೀಗಿರುವಾಗ ಮದುವೆಯ ಕಾರ್ಡ್ ನೀಡಲು ಹೋದಾಗ ನಟಿ ಹರ್ಷಿಕ ಪುಣಚ್ಚಗೆ ಸರ್ಪ್ರೈಸ್ ಆದ ಉಡುಗೊರೆ ಒಂದು ದೊರಕಿದೆ. ಹೌದು ಸ್ನೇಹಿತರೆ ಇದೇ ತಿಂಗಳು ಆಗಸ್ಟ್ 24 ನೇ ತಾರೀಕಿನಂದು ಹರ್ಷಿಕ ಮತ್ತು ಭುವನ್ ಕೊಡವ ಸಂಪ್ರದಾಯದಂತೆ (Kodava Traditional) ಗುರು ಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಕಲ ಸಿದ್ಧತೆಯನ್ನು ನಡೆಸುತ್ತಿದ್ದಾರೆ‌‌.

ಈಗಾಗಲೇ ಮದುವೆ ಕೆಲಸಗಳೆಲ್ಲವೂ ಬಹುತೇಕ ಪೂರ್ಣಗೊಂಡಿದ್ದು, ಹರ್ಷಿಕ ಮತ್ತು ಭುವನ್ ಹೋಗಿ ಕನ್ನಡ ಸಿನಿಮಾರಂಗದ ಸಾಕಷ್ಟು ದಿಗ್ಗಜ ಕಲಾವಿದರಿಗೆ ಆಹ್ವಾನ ಪತ್ರ ನೀಡಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿ ಕೊಂಡು ತಮ್ಮ ಮದುವೆಗೆ ಬರಮಾಡಿಕೊಳ್ಳದಿದ್ದರೆ ಇದೇ ಸಂದರ್ಭದಲ್ಲಿ ನೆನ್ನೆಯಷ್ಟೇ ಕನ್ನಡದ ಹಿರಿಯ ನಟಿ ಜಯಮಾಲಾ ಅವರ ಮದುವೆಗೆ ಹೋಗಿದ್ದಾಗ ಅವರು ಸರ್ಪ್ರೈಸ್ ಗಿಫ್ಟ್ (Surprise gift) ಒಂದನ್ನು ಮದುವೆಗೂ ಮುನ್ನವೇ ನೀಡಿದ್ದಾರೆ.

ಹೌದು ಗೆಳೆಯರೇ ಮದುವೆ ಕುರಿತು ಮಾತನಾಡುತ್ತಾ ಇದ್ದಾಗ ನಟಿ ಹರ್ಷಿಕ ಪುಣಚ್ಚಗೆ ಜಯಮಾಲರವರು ಚಿನ್ನದ ಓಲೆಗಳನ್ನು ಹಾಕುವ ಮೂಲಕ ಮದುವೆಗೂ ಮುನ್ನವೇ ಭರ್ಜರಿ ಚಿನ್ನದ ಉಡುಗೊರೆಯನ್ನು ನೀಡಿ ನವ ವದುವರರನ್ನು ಅರಸಿ ಆಶೀರ್ವದಿಸಿದರು. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು ನಟಿ ಜಯಮಾಲ(Jayamala) ಅವರಿಗೆ ಹರ್ಷಿಕ ಮತ್ತು ಭುವನ್ ಮೇಲೆ ಇರುವಂತಹ ಅಕ್ಕರೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಇದರ ಕೆಲವು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ(Social media) ಹಂಚಿಕೊಂಡು ಸಂತಸ ವ್ಯಕ್ತಪಡಿಸಿರುವ ಹರ್ಷಿಕಾ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದ್ದಾರೆ.

ಇದನ್ನೂ ಓದಿ ಮದುವೆಯಾದ ಬಹುದಿನದ ನಂತರ ತನ್ನ ಮಡದಿ ಜೊತಿಗಿನ ಸುಂದರ ಫೋಟೋಸ್ ಹಂಚಿಕೊಂಡ ಅಭಿಷೇಕ್ ಅಂಬರೀಷ್

Leave a Comment