ಮೊನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರ್ಷಿಕಾ ಪುನಚ್ಚ ಮತ್ತು ಭುವನ್ ಪೊನ್ನಣ್ಣ ಮದುವೆ ಆಲ್ಬಂ!

ಸ್ನೇಹಿತರೆ ಸ್ಯಾಂಡಲ್ ವುಡ್ನ ಜೋಡಿ ಹಕ್ಕಿಗಳು ಎಂದು ಕರೆಸಿಕೊಳ್ಳುತ್ತಿದ್ದಂತಹ ಹರ್ಷಿಕಾ ಪುನಚ್ಚ(Harshika Poonacha) ಮತ್ತು ಭುವನ್ ಪೊನ್ನಣ್ಣ(Bhuvan Ponnanna) ಫ್ಯಾಷನ್ ಒಂದರಲ್ಲಿ ಭೇಟಿ ಮಾಡಿ ಆನಂತರ ಆತ್ಮೀಯ ಸ್ನೇಹಿತರಾಗುತ್ತಾರೆ. ಒಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಇದ್ದಂತಹ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದು ಕೆಲ ಕಾಲಗಳ ನಂತರ ಸ್ನೇಹಿತರಾಗಿದ್ದಂತಹ ಇವರು ತಮ್ಮ ಸಂಬಂಧವನ್ನು ಪ್ರೀತಿಗೆ ತಿರುಗಿಸಿಕೊಳ್ಳುತ್ತಾರೆ.

ಹೀಗೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳ ಗಮನವನ್ನು ಸೆಳೆಯುತ್ತಿದ್ದಂತಹ ಪುನಚ್ಚ(Harshika Poonacha) ಮತ್ತು ಭುವನ್ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹಲವು ಬಾರಿ ವೈರಲ್ ಆಗಿತ್ತು. ಆದರೆ ಯಾವುದಕ್ಕೂ ಹರ್ಷಿಕ ಆಗಲಿ ಭುವನ್ ಆಗಲಿ ಅಧಿಕೃತ ಸ್ಪಷ್ಟನೆಯನ್ನು ನೀಡಲಿಲ್ಲ. ಮದುವೆಯ ಹಿಂದಿನ ದಿನ ತಮ್ಮ ಲವ್ ಸ್ಟೋರಿ ಯಾ ಕುರಿತು ಮಾಹಿತಿ ಹಂಚಿಕೊಂಡ ಭುವನ್ ನಾವಿಬ್ಬರೂ ಕಳೆದ 12 ವರ್ಷಗಳಿಂದ

ಪ್ರೀತಿಸುತ್ತಿದ್ದೇವೆ. ನಮ್ಮ ಪ್ರೀತಿಯ ಮೇಲೆ ಯಾರದ್ದಾದರೂ ಕೆಟ್ಟ ದೃಷ್ಟಿ ಬೀಳುತ್ತದೆ ಎಂಬ ಕಾರಣಕ್ಕೆ ಇದನ್ನು ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಮನೆಯವರೆಲ್ಲರ ಒಪ್ಪಿಗೆ ದೊರೆತ ನಂತರ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿ ಇಲ್ಲಿಯವರೆಗೂ ಬಂದಿದ್ದೇವೆ. ನಮ್ಮಿಬ್ಬರ ಮೇಲೆ ನಿಮ್ಮ ಪ್ರೀತಿ ಆಶೀರ್ವಾದ ಸದಾ ಇರಲಿ ಎಂದು ಕೇಳಿಕೊಂಡಿದ್ದರು. ಅದರಂತೆ ಆಗಸ್ಟ್ 23 ಹಾಗೂ 24ನೇ ತಾರೀಕಿನಂದು ಗುರು ಹಿರಿಯರ

ಸಾಕ್ಷಿಯಾಗಿ ಕೊಡವ ಸಂಪ್ರದಾಯದಂತೆ ಕೊಡಗಿನ ವಿರಾಜಪೇಟೆಯ ಬಹುದೊಡ್ಡ ಕಲ್ಯಾಣ ಮಂಟಪ ಒಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹರ್ಷಿಕ ಮತ್ತು ಭುವನ್ ಅವರ ಹಲವಾರು ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ನವ ದಂಪತಿಗಳಿಗೆ ಅಭಿಮಾನಿಗಳು ಶುಭಾಶಯಗಳು ಮಹಾಪೂರವನ್ನು ಹರಿಸುತ್ತಿದ್ದಾರೆ. ಹೌದು ಗೆಳೆಯರೇ ಮದುವೆಯ ಉಡುಪಿನಲ್ಲಿ ನಟಿ ಪುನಚ್ಚ(Harshika Poonacha)

ಬಹಳನೇ ಸುಂದರವಾಗಿ ಕಂಗೊಳಿಸುತ್ತಿದ್ದು ಕೆಂಪು ಬಣ್ಣದ ಸೀರೆ ಧರಿಸಿ, ಕಿವಿಯೋಲೆ, ಕೈ ಬಳೆ ಮುಂತಾದ ಎಲ್ಲಾ ಒಡವೆಗಳನ್ನು ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಇತ್ತ ಭುವನ್(Bhuvan) ಕೂಡ ಕೊಡುವ ಸಂಪ್ರದಾಯದ ಆಚರಣೆಗಳನ್ನೆಲ್ಲ ಪಾಲನೆ ಮಾಡುತ್ತಾ ಬಿಳಿ ಬಣ್ಣದ ಉಡುಪಿನಲ್ಲಿ ಮದುಮಗನಾಗಿ ಮಿಂಚಿದ್ದಾರೆ. ಬಿಕನಿ ಧರಿಸಿ ಸ್ನೇಹಿತೆಯೊಂದಿಗೆ ಓಡಾಡುತ್ತಿರುವ ಮೋಹಕ ತಾರೆ ರಮ್ಯಾ ಅವರ ಹಾಟ್ ಮೈ ಮಾಟಕ್ಕೆ ಪಡ್ಡೆ ಹುಡುಗರು ಕ್ಲೀನ್ ಬೋಲ್ಡ್!

Leave a Comment