Haripriya: ಹಲವು ವರ್ಷಗಳಿಂದ ಪ್ರೀತಿಸಿ ಯಾರಿಗೂ ಗೊತ್ತಾಗದ ಹಾಗೆ ಗುಟ್ಟಾಗಿ ಎಂಗೇಜ್ಮೆಂಟ್ ಮಾಡಿಕೊಂಡು ಆನಂತರ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ಬಾರಿ ಸದ್ದು ಮಾಡಿದಂತಹ ನಟ ವಸಿಷ್ಠ ಸಿಂಹ(Vasishta Simha) ಹಾಗೂ ಹರಿಪ್ರಿಯಾ(Haripriya) ಜೋಡಿಗಳು ಕಳೆದ ಕೆಲ ತಿಂಗಳುಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಬ್ಬರ ಸಿನಿಮಾಗಳಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಬಹಳ ಅನ್ಯೋನ್ಯವಾಗಿ ಆದರ್ಶ ದಂಪತಿಗಳಂತೆ ಬದುಕುತ್ತಿದ್ದಾರೆ.
ಯಾವುದೇ ಹಬ್ಬ ಹರಿದಿನಗಳು ಒಟ್ಟಿಗೆ ಸೇರಿ ಆಚರಿಸುತ್ತಾ ಅದರ ಕೆಲ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಈ ಜೋಡಿಗಳು ಈ ಬಾರಿ ತಮ್ಮ ಮನೆಯಲ್ಲಿ ಆಚರಿಸಲಾದಂತಹ ವರಮಹಾಲಕ್ಷ್ಮಿ ಹಬ್ಬದ (Varamahalakshmi festival) ಕೆಲ ಫೋಟೋಸ್ಗಳನ್ನು ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಸ್ನೇಹಿತರೆ ಪತಿ-ಪತ್ನಿಯರಿಬ್ಬರೂ ಒಂದೇ ಬಣ್ಣದ ಉಡುಪನ್ನು ಧರಿಸಿ ಫೋಟೋಗೆ ಪೋಸ್ ನೀಡಿದ್ದು,
ನಟಿ ಹರಿಪ್ರಿಯ ಮರುಣ್ ಬಣ್ಣದ ಸೀರೆ ಉಟ್ಟು ಕೈಗಳಿಗೆ ಬಳೆ ಧರಿಸಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡರೆ, ಅತ್ತ ವಸಿಷ್ಠ ಸಿಂಹ(Vasishta Simha) ಕೂಡ ಶರ್ಟ್ ಪಂಚೆ ಹಾಗೂ ಶಲ್ಯದಲ್ಲಿ ಫೋಟೋಗೆ ಪೋಸ್ಟ್ ನೀಡಿದ್ದಾರೆ. ಹೌದು ಗೆಳೆಯರೇ ನಟ ವಸಿಷ್ಠ ಸಿಂಹ(Vasishta Simha) ಅವರ ಬೃಹತ್ ಬಂಗಲೆಯಲ್ಲಿ ಈ ಒಂದು ಅದ್ದೂರಿ ಸಮಾರಂಭವನ್ನು ಮಾಡಲಾಗಿದ್ದು, ಅವರ ಮನೆಯ ದೇವರ ಮನೆಯ ಮುಂದೆಯೇ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ಹೂ ಮಾಲೆ,
ಹಣ್ಣು ಹಂಪಲು ಗಳಿಂದ ದೇವಿಯನ್ನು ಅಲಂಕಾರ ಗೊಳಿಸಿ ರಂಗವಲ್ಲಿ ಬಿಟ್ಟು ಬಹಳ ಭಕ್ತಿ ಗೌರವದಿಂದ ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ. ಈ ಫೋಟೋಗಳನ್ನು instagram ಖಾತೆಯಲ್ಲಿ ಪೋಸ್ಟ್ ಮಾಡಿ ನಮ್ಮನೆ ವರಮಹಾಲಕ್ಷ್ಮಿ ದೇವಿ ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಾಳೆ ಎಂಬ ಕ್ಯಾಪ್ಶನ್ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ. ಈ ಫೋಟೋಗೆ ಎಲ್ಲರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇತರೆ ವಿಷಯಗಳು:
Actress Amulya: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ಜೊತೆ ನಟಿ ಅಮೂಲ್ಯ ಅವರ ಕ್ಯುಟೆಸ್ಟ್ ಫೋಟೋಸ್!
Actress Prajwal Devaraj: ಪ್ರಜ್ವಲ್ ದೇವರಾಜ್ ಮತ್ತು ರಾಗಿಣಿ ದಂಪತಿಗಳ ಫೋಟೋಸ್!