ಟೆಕ್ನಾಲಜಿ ಗಳು ಹಾಗೂ ವರ್ತಮಾನಗಳು ಬದಲಾದಂತೆ ಸಿನಿಮಾಗಳು ಹಾಗೂ ಸಿನಿಮಾ ಮೇಕಿಂಗ್ ಗಳಲ್ಲೂ ಕೂಡ ಬದಲಾವಣೆ ಕಾಣುತ್ತಿದೆ. ಇತ್ತೀಚೆಗೆ ಸಿನಿಮಾ ರಂಗದತ್ತ ಕೇಳಿಬರುತ್ತಿರುವ ಶಬ್ದ ಪ್ಯಾನ್ ಇಂಡಿಯಾ. ಪ್ಯಾನ್ ಇಂಡಿಯಾ ಸಿನಿಮಾ ಅಂದರೆ ಒಂದು ಸಿನಿಮಾ ಕೇವಲ ಒಂದು ಭಾಷೆಗೆ ಅಥವಾ ಒಂದು ಗಡಿಗೆ ಸೀಮಿತವಾಗಿರುವುದಿಲ್ಲ. ಇಡೀ ದೇಶಕ್ಕೆ ಆ ಸಿನೆಮಾವು ಸೀಮಿತವಾಗಿರುತ್ತವೆ. ಪ್ಯಾನ್ ಇಂಡಿಯಾ ಎಂಬ ಈ ಒಂದು ಪರಿಕಲ್ಪನೆಯನ್ನು ಬಾಹುಬಲಿ ಮತ್ತು ಕೆಜಿಎಫ್ ಚಿತ್ರಗಳ ಮೂಲಕ ನಮಗೆಲ್ಲ ಅರಿವಾಗಿದೆ.
ಪ್ಯಾನ್ ಇಂಡಿಯಾ ಎಂಬ ಪರಿಕಲ್ಪನೆಯನ್ನು ಮೊದಲು ಬಾಹುಬಲಿ ಚಿತ್ರ ವು ಹುಟ್ಟುಹಾಕಿದ್ದು ಎಂದು ನಾವೆಲ್ಲ ನಂಬಿದ್ದೆವು. ಆದರೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಮೊದಲು ಹುಟ್ಟಿಕೊಂಡಿದ್ದು ಅರುವತ್ತು ವರ್ಷಗಳ ಹಿಂದೆ. ಅದರಲ್ಲೂ ವಿಶೇಷವೇನೆಂದರೆ ಮೊದಲು ಪ್ಯಾನ್ ಇಂಡಿಯಾ ಪರಿಕಲ್ಪನೆಯನ್ನು ಮೊದಲು ಪರಿಚಯ ಮಾಡಿತ್ತು ನಮ್ಮ ರಾಜ್ಯದ ಕರ್ನಾಟಕ ರತ್ನ ಡಾಕ್ಟರ್ ರಾಜ್ ಕುಮಾರ್ ಅವರು. ಹೌದು ಗೆಳೆಯರೆ ಮೊದಲ ಪ್ಯಾನ್ ಇಂಡಿಯಾ ಸಿನೆಮಾದಲ್ಲಿ ನಟನೆ ಮಾಡಿ ಪಾನ್ ಇಂಡಿಯಾ ಸ್ಟಾರ್ಮಾ ಆಗಿದ್ದು ಅಣ್ಣಾವ್ರು.
1959 ರಲ್ಲಿಯೇ ರಾಜ್ ಕುಮಾರ್ ಅವರು ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಿದ್ದರು. ಆದರೆ ಆಗಿನ ಯುಗದಲ್ಲಿ ಇಂಟರ್ನೆಟ್ ಹಾಗೂ ಮೊಬೈಲ್ ಗಳ ಬಳಕೆ ಇರಲಿಲ್ಲ . ಪ್ಯಾನ್ ಇಂಡಿಯಾ ಎಂಬ ಪರಿಕಲ್ಪನೆಯ ಅರಿವು ಜನರಿಗೆ ಮುಟ್ಟಬೇಕೆಂದರೆ ಯಾವುದೇ ಮಾಧ್ಯಮಗಳಿರಲಿಲ್ಲ. ಮೊದಲ ಪ್ಯಾನ್ ಇಂಡಿಯಾ ಸಿನಿಮಾ ನಮ್ಮ ನಾಡಿನಲ್ಲೇ ಹುಟ್ಟಿದ್ದರೂ ಕೂಡ ನಮಗೆಲ್ಲ ಈ ವಿಷಯ ತಿಳಿದಿಲ್ಲ.
1959 ರಲ್ಲಿ ರಾಜ್ ಕುಮಾರ್ ಅವರ ನಟನೆಯ ಮಹಿಷಾಸುರ ಮರ್ದಿನಿ ಎಂಬ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರ ಸುಮಾರು ಏಳು ಭಾಷೆಗಳಲ್ಲಿ ಡಬ್ ಆಗಿ ರಿಲೀಸ್ ಆಗಿತ್ತು. ಮಹಿಷಾಸುರ ಮರ್ದಿನಿ ಸಿನಿಮಾವನ್ನು ಮೊದಲ ಪ್ರಮುಖ ಪ್ಯಾನ್ ಇಂಡಿಯನ್ ಸಿನೆಮಾ ಎಂದು ಪರಿಗಣಿಸಲಾಗಿದೆ. ರಾಜಕುಮಾರ್ ಉದಯಕುಮಾರ್ ನಾಗಯ್ಯ ಮತ್ತು ನರಸಿಂಹರಾಜು ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ಚಿತ್ರದ ನಿರ್ದೇಶನ ನಿರ್ಮಾಣವನ್ನು ಬಿ ಎಸ್ ರಂಗಾ ಅವರು ಮಾಡಿದ್ದಾರೆ. ಈ ಚಿತ್ರ ಹಿಂದಿ ಭಾಷೆಯಲ್ಲಿ ದುರ್ಗಾಮಾತಾ ಎಂಬ ಹೆಸರಿನಲ್ಲಿ ಬಿಡುಗಡೆಯಾಗಿತ್ತು.
ಆಗಿನ ಕಾಲದಲ್ಲಿ ಪ್ರಥಮ ಬಾರಿಗೆ ಮದ್ರಾಸ್ ನ ವಿಕ್ರಂ ಸ್ಟುಡಿಯೊಸ್ ನಲ್ಲಿ ಈ ಸಿನೆಮಾ ಶೂಟ್ ಮಾಡಲಾಗಿತ್ತು. ಹಾಗೆ ರಾಜ್ ಕುಮಾರ್ ಅವರು ಈ ಚಿತ್ರಕ್ಕೆ ತುಂಬಿತು ಮಾನವಾ ಎಂಬ ಹಾಡನ್ನು ಹಾಡುವ ಮೂಲಕ ಮೊದಲ ಬಾರಿಗೆ ಪ್ಲೇಬ್ಯಾಕ್ ಸಿಂಗರ್ ಆಗಿ ಮಿಂಚಿದ್ದರು. ನೋಡಿ ಬಂಧುಗಳೇ, ಆಗಿನ ಕಾಲದಲ್ಲೆಲ್ಲ ಪ್ಯಾನ್ ಇಂಡಿಯಾ ಸಿನಿಮಾ ಗಳನ್ನು ಕೇವಲ 5-6 ತಿಂಗಳುಗಳಲ್ಲಿ ಮುಗಿಸುತ್ತಿದ್ದರು. ಆದರೆ ಈಗಿನ ಕಾಲದಲ್ಲಿ ಪ್ಯಾನ್ ಇಂಡಿಯನ್ ಸಿನಿಮಾಗಳನ್ನು ಮಾಡಲು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದಾರೆ. ಏನೇ ಹೇಳಿ ನಮ್ಮ ಅಣ್ಣಾವ್ರು ಮಾಡಿದ ರೆಕಾರ್ಡ್ ಗಳನ್ನು ಬ್ರೇಕ್ ಯಾವ ನಟನಿಂದಲೂ ಸಾಧ್ಯವಿಲ್ಲ