ಕನ್ನಡ ಸಿನಿಮಾ ರಂಗದ ಸಲಗ, ಬ್ಲಾಕ್ ಕೋಬ್ರಾ ಎಂಬೆಲ್ಲ ಬಿರುದು ಪಡೆದು ಹಲವಾರು ವರ್ಷಗಳಿಂದ ತಮ್ಮದೇ ಆದ ವಿಶೇಷ ಕೊಡುಗೆಯನ್ನು ಯಶಸ್ವಿ ಸಿನೆಮಾಗಳ ಮೂಲಕ ನೀಡುತ್ತಾ ಬಂದಿರುವ ದುನಿಯಾ ವಿಜಯ್(Duniya Vijay) 2007ರಲ್ಲಿ ತೆರೆಗೆ ಬಂದ ದುನಿಯಾ(Duniya) ಎಂಬ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಾರೆ. ಆನಂತರ ತೆರೆಗೆ ಬಂದ ಚಂದ, ಜಂಗ್ಲಿ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಶಂಕರ್
ಐಪಿಎಸ್, ಕರಿ ಚಿರತೆ, ಕಂಠೀರವ, ದೇವ್ರು, ಜರಾಸಂಧ, ಜಾಕ್ಸನ್, ಆರ್ಎಕ್ಸ್ ಸೂರಿ, ದನ ಕಾಯೋನು, ಮಾಸ್ತಿಗುಡಿ ಕನಕ ಸೇರಿದಂತೆ ಮುಂತಾದ ಯಶಸ್ವಿ ಸಿನಿಮಾಗಳ ಮೂಲಕ ಎಂದು ಕನ್ನಡ ಸಿನಿಮಾ ರಂಗದ ಬಹು ಬೇಡಿಕೆಯ ನಟನಾಗಿ ಹೊರಹೊಮ್ಮಿದ್ದಾರೆ. ಹೀಗೆ ವೃತ್ತಿ ಬದುಕಿನಲ್ಲಿ ಮಹತ್ತರವಾದ ಯಶಸ್ಸನ್ನು ಕಂಡಿರುವ ದುನಿಯಾ ವಿಜಯ್(Duniya Vijay) ನಾಗರತ್ನ ಎಂಬುವರನ್ನು ಮದುವೆಯಾಗಿ ಕೆಲ ವರ್ಷಗಳ ನಂತರ ಕೀರ್ತಿ ಎಂಬುವರೊಟ್ಟಿಗೆ ಪ್ರೀತಿಯಲ್ಲಿ ಬೀಳುತ್ತಾರೆ.
ಮೊದಲ ಪತ್ನಿಯಿಂದ ದೂರಾಗಿ ಸದ್ಯ ಎರಡನೇ ಹೆಂಡತಿಯೊಂದಿಗೆ ಸುಂದರವಾಗಿ ಸಾಂಸಾರಿಕ ಜೀವನವನ್ನು ನಡೆಸಿಕೊಂಡು ಹೋಗುತ್ತಿರುವ ದುನಿಯಾ ವಿಜಯ್(Duniya Vijay) ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನಿದ್ದು ಸಾಮ್ರಾಟ್ ತಮ್ಮ ತಂದೆಯಂತೆಯೇ ಸಿನಿಮಾ ರಂಗಕ್ಕೆ ಕುಸ್ತಿ ಎಂಬ ಚಿತ್ರದ ಮೂಲಕ ಬಾಲ ನಟನಾಗಿ ಪ್ರವೇಶ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ತಂದೆಯಂತೆ ಹೇಳಿಕೊಳ್ಳುವಂತಹ ಯಶಸ್ಸು ಮಗ ಸಾಮ್ರಾಟ್ಗೂ(Samrat) ದೊರಕಲಿದೆಯೇ ಎಂಬುದನ್ನು ಕಾದು ಬೇಕಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದುನಿಯಾ ವಿಜಯ್(Duniya Vijay) ಮತ್ತು ಮಗನ ಫೋಟೋ ಬಾರಿ ವೈರಲ್ ಆಗುತ್ತಿದ್ದು ಮಗನ ಹುಟ್ಟುಹಬ್ಬದ ಸಂಭ್ರಮದಂದು ಆತನಿಗೆ ಹಾರ ಹಾಕಿ ಕೇಕ್ ತಿನ್ನಿಸಿ ಮುತ್ತಿಟ್ಟು ಶುಭಾಶಯಗಳು ಕೋರಿರುವ ಫೋಟೋ ಇದಾಗಿದ್ದು ಇದನ್ನು ಸಾಮ್ರಾಟ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ Darshan Thoogudeepa: ಸದ್ದಿಲ್ಲದ ಸ್ನೇಹಿತರೊಂದಿಗೆ ಫಾರಿನ್ ಟ್ರಿಪ್ಗೆ ಹಾರಿದ ಡಿ ಬಾಸ್!