Duniya vijay daughter: ಸ್ನೇಹಿತರೆ ಖಳ ನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಂತಹ ದುನಿಯಾ ವಿಜಯ್ ಇಂದು ಬಹು ಬೇಡಿಕೆಯ ನಾಯಕನಟ. ಹೌದು ಗೆಳೆಯರೇ 2007ರಲ್ಲಿ ತೆರೆಗೆ ಬಂದ ದುನಿಯಾ ಸಿನಿಮಾ ನಟ ವಿಜಯ್(vijay) ಅವರ ಬದುಕನ್ನು ಸಂಪೂರ್ಣ ಬದಲಿಸಿ ಬಿಡ್ತು ಎಂದರೆ ತಪ್ಪಾಗಲಾರದು. ಈ ಒಂದು ಚಿತ್ರದ ಮೂಲಕ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ಪಡೆದಂತಹ ದುನಿಯಾ ವಿಜಯ್ ಇಂದಿಗೂ ತಮ್ಮ ಯಶಸ್ವಿ ಚಿತ್ರಗಳ ಮೂಲಕ ಬರೋಬ್ಬರಿ 20 ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ.
ಹೌದು ಸ್ನೇಹಿತರೆ ನಟ ಕಿಚ್ಚ ಸುದೀಪ್ (Kiccha Sudeep) ಅಭಿನಯದ ರಂಗ ಎಸ್‌ಎಸ್‌ಎಲ್‌ಸಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೋಗಿ ಸಿನಿಮಾದಲ್ಲಿ ಖಳ ನಟನಾಗಿ ಕಾಣಿಸಿಕೊಂಡಿದ್ದ ವಿಜಯ್ಯವರಿಗೆ ನಿರ್ದೇಶಕ ಸೂರ್ಯ ಅವರ ಆಕ್ಷನ್ ಕಟ್ನಲ್ಲಿ ತೆರೆಗೆ ಬಂದ ಚೊಚ್ಚಲ ದುನಿಯಾ(Duniya) ಸಿನಿಮಾ ದೊಡ್ಡ ಬ್ರೇಕ್ ತಂದುಕೊಡುತ್ತದೆ.
ಹೀಗೆ ಭೂಗತ ಲೋಕದ ಗುಂಡಾಟಿಕೆಗಳ ಮೇಲೆ ತೆರೆಯಲಾದಂತಹ ಈ ಸಿನಿಮಾದ ಮೂಲಕ ಮಾಸ್ ಆಗಿ ಆಕ್ಷನ್ ಹೀರೋ ಆಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ದುನಿಯಾ ವಿಜಯ್ ಅವರು ಆನಂತರ ರಾಕ್ಷಸ, ಅಂಬಿ, ಶ್ರೀ, ಸ್ಲಂ ಬಾಲ, ಜಂಗ್ಲಿ, ದೇವ್ರು, ಶಂಕರ್ ಐಪಿಎಸ್, ವೀರಬಾಹು, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಜರಾಸಂಧ, ಮಾಸ್ತಿಗುಡಿ, ಸಲಗದಂತಹ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿ ತಮ್ಮದೇ ಆದ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು.
ಹೀಗೆ ಸಿನಿಮಾ ರಂಗದ ಅವಕಾಶಗಳ ಶಿಖರದಲ್ಲಿರುವಾಗಲೇ ತಮ್ಮ ಮೊದಲ ಪತ್ನಿ ನಾಗರತ್ನ ಅವರಿಗೆ ಬರೋಬರಿ 12 ವರ್ಷದ ಸಾಂಸಾರಿಕ ಜೀವನದ ನಂತರ ವಿಚ್ಛೇದನ ನೀಡಿ ಕೀರ್ತಿ ಪಟ್ಟಾಡಿ ಎಂಬುವರನ್ನು ಪ್ರೀತಿಸಿ ಹೊಸ ಬದುಕಿಗೆ ಕಾಲಿಡುತ್ತಾರೆ. ದುನಿಯಾ ವಿಜಯ್(Duniya Vijay) ಅವರಿಗೆ ಮೂವರು ಮಕ್ಕಳಿದ್ದು, ತಮ್ಮ ಮುದ್ದಿನ ಮಗಳು ಮೋನಿಕಾ ವಿಜಯ್ (Monica Vijay) ಅವರನ್ನು ಅಪ್ಪಿ ಕಾರು ಒಂದರ ಮುಂದೆ ನಿಂತಿರುವ
ದುನಿಯಾ ವಿಜಯ್ ಅವರ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದೆ. ಮುಂದಿನ ದಿನಗಳಲ್ಲಿ ದುನಿಯಾ ವಿಜಯ್ ಮಗಳು ಕೂಡ ಅಪ್ಪನಂತೆ ಸಿನಿಮಾದಲ್ಲಿ ಸಕ್ರಿಯರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ ಯುವ ರಾಜಕಾರಣಿ ಹಾಗೂ ಸಿನಿಮಾ ನಟ ಆಗಿದ್ರು ನಿಖಿಲ್ ಕುಮಾರಸ್ವಾಮಿ ಎಷ್ಟು ಸಿಂಪಲ್ ಆಗಿ ಇರ್ತಾರೆ ಗೊತ್ತಾ