Duniya Film: ದುನಿಯಾ ವಿಜಯ್ ನಾಯಕನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ದುನಿಯಾ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ ಗಳಿಕೆ ಎಷ್ಟು ಗೊತ್ತಾ?

Duniya Film ಕನ್ನಡ ಚಿತ್ರರಂಗದ ಕರಿ ಚರಿತೆ ಒಂಟಿ ಸಲಗ ಎಂಬುದಾಗಿ ಬಿರುದನ್ನು ಪಡೆದುಕೊಂಡಿರುವಂತಹ ನಟ ಹಾಗೂ ಸಲಗ ಸಿನಿಮಾದ ಮೂಲಕ ನಿರ್ದೇಶಕನಾಗಿರುವ ದುನಿಯಾ ವಿಜಯ್(Duniya Vijay) ರವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆರಂಭದ ದಿನಗಳಿಂದಲೂ ಕೂಡ ಸಾಕಷ್ಟು ಕಷ್ಟದ ದಿನಗಳನ್ನು ಕಂಡುಬಂದರು ಅವರ ಪರಿಶ್ರಮಕ್ಕೆ ತಕ್ಕ ಫಲ ಚಿತ್ರರಂಗದಲ್ಲಿ ದೊರಕಿದೆ.

ದುನಿಯಾ ಸಿನಿಮಾಗೂ(Duniya Film) ಮುನ್ನ ಅವರು ಸಾಕಷ್ಟು ಸಿನಿಮಾಗಳಲ್ಲಿ ವಿಲನ್ ಹಾಗೂ ಸೈಡ್ ರೋಲ್ಗಳಲ್ಲಿ ಕಾಣಿಸಿಕೊಂಡಿದ್ದರು‌. ಆದರೆ ಒಮ್ಮೆ ದುನಿಯಾ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಪಡೆದಂತ ಯಶಸ್ಸು ಅವರನ್ನು ಮತ್ತೆ ಕನ್ನಡ ಚಿತ್ರರಂಗದಲ್ಲಿ ಹಿಂದಿರುಗಿ ನೋಡುವಂತೆ ಮಾಡಲಿಲ್ಲ.

ದುನಿಯಾ ಸಿನಿಮಾ 2007ರಲ್ಲಿ ರಾಜ್ಯದಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು ಈ ಸಿನಿಮಾದ ಮೂಲಕ ಪ್ರತಿಬಿಂಬ ಹೊಂದಿದ್ದರೆ ಸಾಕು, ಕಲರ್ ಬೇಕಾಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದರು. ಇಷ್ಟಕ್ಕೂ ದುನಿಯಾ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿತ್ತು ಎಂಬುದನ್ನು ತಿಳಿಯೋಣ ಬನ್ನಿ.

ಅಂದಿನ ಕಾಲದಲ್ಲಿ ಯಾವುದೇ ಸ್ಟಾರ್ ನಟರ ಪಾತ್ರ ಇಲ್ಲದಿದ್ದರೂ ಕೂಡ ದುನಿಯಾ ವಿಜಯ್ ರವರ ಈ ಮೊದಲ ಸಿನಿಮಾ ಭರ್ಜರಿ ಆರು ಕೋಟಿ ರೂಪಾಯಿ ಹಣವನ್ನು ಅಂದಿನ ಕಾಲದಲ್ಲಿ ಸಂಪಾದಿಸಿತು ಎಂಬುದಾಗಿ ಗಾಂಧಿನಗರದ ಬಾಕ್ಸ್ ಆಫೀಸ್ ಮೂಲಗಳು ಹೇಳುತ್ತವೆ. ಅಂದು ಯಶಸ್ಸನ್ನು ಪಡೆದಂತಹ ದುನಿಯಾ ವಿಜಯ್(Duniya Vijay) ಮತ್ತೆ ಕನ್ನಡ ಚಿತ್ರರಂಗದಲ್ಲಿ ಹಿಂದಿರುಗಿ ನೋಡಲೇ ಇಲ್ಲ.

Leave a Comment