ಅತ್ತಿಗೆ ಮೇಘನಾ ಅಸೆ ಈಡೇರಿಸಿದ ದ್ರುವಸರ್ಜಾ ವಿಡಿಯೋ

ಮೇಘನಾ ರಾಜ್ ಅವರನ್ನು ತಮ್ಮ ಸ್ವಂತ ಮನೆ ಮಗಳಂತೆ ನೋಡಿಕೊಳ್ಳುತ್ತಿರುವ ಸಿನಿಪ್ರೇಮಿಗಳು ಹಾಗೂ ಕಲಾ ಬಂಧುಗಳು. ಮೇಘನಾ ಅವರಿಗೆ ಅವರ ತವರು ಮನೆಯಲ್ಲಿ ಅಕ್ಟೋಬರ್ 2ರಂದು ಜೆಪಿನಗರದ ನಿವಾಸದಲ್ಲಿ ಸರಳ ಸೀಮಂತ ಕಾರ್ಯಕ್ರಮವನ್ನು ಮಾಡಿದ್ದರು. ಆನಂತರ ಸರ್ಜಾ ಕುಟುಂಬದವರು ಅಕ್ಟೋಬರ್ ಐದರಂದು ಮೇಘನ ಅವರಿಗಾಗಿ ವಿಶೇಷವಾದ ಬೇಬಿ ಶವರ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮೇಘನ ರಾಜ್ ಅವರ ಎರಡನೇ ಸೀಮಂತ ಶಾಸ್ತ್ರ ಹೇಗಿತ್ತು ಅನ್ನೋದರ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ.

ನಟ ಚಿರಂಜೀವಿ ಸರ್ಜಾ ಅವರಿಗೆ ಪತ್ನಿ ಮೇಘನಾ ಅವರಿಗೆ ಸೀಮಂತ ಶಾಸ್ತ್ರದ ನಂತರ ಬೇಬಿ ಶವರ್ ಮಾಡಿಸಬೇಕು ಎನ್ನುವ ಆಸೆ ಇತ್ತಂತೆ. ಆದರೆ ದುರದೃಷ್ಟವಶಾತ್ ನಟ ಚಿರಂಜೀವಿ ಸರ್ಜಾ ಅವರು ಅಕಾಲಿಕ ಮರಣ ಹೊಂದಿದ್ದಾರೆ. ಹಾಗಾಗಿ ಚಿರಂಜೀವಿ ಸರ್ಜಾ ಅವರ ಆಸೆಯನ್ನು ಅವರ ತಮ್ಮ ಧ್ರುವ ಸರ್ಜಾ ಅವರು ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಕಲರ್ಫುಲ್ ಗುಲಾಬಿ ಹೂವಿನ ಎಸಳುಗಳನ್ನು ಹೊಂದಿರುವ ಬ್ಯಾಗ್ರೌಂಡ್ ನಡುವೆ ಚಿರಂಜೀವಿ ಸರ್ಜಾ ಅವರ ಫೋಟೋವನ್ನು ಇರಿಸಿ ಅಲಂಕಾರ ಮಾಡಲಾಗಿತ್ತು. ಬಣ್ಣ ಬಣ್ಣದ ಉಡುಗೆಯಲ್ಲಿ ಮೇಘನಾ ರಾಜ್ ಖುಷಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಅಕ್ಟೋಬರ್ 6ರಂದು ಧ್ರುವ ಸರ್ಜಾ ಅವರ ಹುಟ್ಟುಹಬ್ಬ ಇರುವುದರಿಂದ ಅದರ ವಿಶೇಷವಾಗಿಯೂ ಕೂಡ ಮುಂಚಿತವಾಗಿಯೇ ಅಲ್ಲಿ ಕೇಕ್ ಕೂಡಾ ಕಟ್ ಮಾಡಿಸಲಾಗಿತ್ತು.

ಮೇಘನಾ ರಾಜ್ ಅವರ ಬೇಬಿ ಶವರ್ ಕಾರ್ಯಕ್ರಮದಲ್ಲಿ ಸುಂದರ್ ರಾಜ್ ಅವರ ಕುಟುಂಬ, ಸರ್ಜಾ ಕುಟುಂಬ ಹಾಗೂ ಅವರ ಆಪ್ತ ಸ್ನೇಹಿತರು ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಧ್ರುವ ಹಾಗೂ ಮೇಘನಾ ಇಬ್ಬರೂ ಒಟ್ಟಾಗಿ ನಿಂತಿರುವ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ. ಪ್ರೀತಿಸಿ ಮದುವೆಯಾದ ತನ್ನ ಪತಿಯನ್ನು ಕಳೆದುಕೊಂಡಿರುವ ಮೇಘನ ಮಗುವಿನ ರೂಪದಲ್ಲಿ ಮತ್ತೆ ಚಿರು ತನ್ನ ಬಳಿ ಬರುತ್ತಾರೆ ಎನ್ನುವ ಆಸೆಯಲ್ಲಿದ್ದಾರೆ. ಎಲ್ಲರೂ ಆಶಿಸುತ್ತಿರುವುದು ಕೂಡ ಅದೇ ಚಿರು ಮತ್ತೆ ಮೇಘನಾ ಅವರ ಮಗುವಾಗಿ ಹುಟ್ಟಿ ಬರಲಿ ಎನ್ನುವುದು ಎಲ್ಲರ ಆಶಯವಾಗಿದೆ.

Leave a Comment