Dr Rajkumar family: ರಾಜ್ ಕುಟುಂಬ ಶಬರಿಮಲೆಗೆ ಭೇಟಿ ನೀಡಿದ ಅಪರೂಪದ ಫೋಟೋಸ್ ಮತ್ತೆ ಹಂಚಿಕೊಂಡ ಅಭಿಮಾನಿಗಳು

Dr Rajkumar family: ಸ್ನೇಹಿತರೆ, ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಡಾಕ್ಟರ್ ರಾಜಕುಮಾರ್(Dr.Raj Kumar) ಅಪಾರ ದೈವ ಭಕ್ತಿಯನ್ನು ಹೊಂದಿದ್ದವರು. ಅಲ್ಲದೆ ಅವರ ಎಷ್ಟು ಸಿನಿಮಾಗಳಲ್ಲಿಯೂ ಕೂಡ ಶ್ರೀ ಗುರು ರಾಘವೇಂದ್ರ, ಶ್ರೀಕೃಷ್ಣ ವೆಂಕಟೇಶ್ವರ, ಸ್ವಾಮಿ ಅಯ್ಯಪ್ಪ ಸಾಕಷ್ಟು ಭಕ್ತಿ ಪ್ರಧಾನ ಪಾತ್ರಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ದೈವದ ಮಹತ್ವ ಎಂತದ್ದು ಎಂಬುದನ್ನು ಪರಿಚಯಿಸಿದಂತಹ ಡಾಕ್ಟರ್ ರಾಜಕುಮಾರ್

ತಮ್ಮ ಮೂವರು ಮಕ್ಕಳಲ್ಲಿಯೂ ದೇವರ ಮೇಲೆ ಅಪಾರವಾದ ಭಕ್ತಿ ಹಾಗೂ ಪ್ರೀತಿ ಮೂಡುವಂತೆ ಬೆಳೆಸಿದವರು. ಹೀಗಾಗಿ ಅಪ್ಪು ಆರು ಎಂಟು ವರ್ಷದ ಬಾಲಕನಾಗಿರುವಾಗಲೇ ತಮ್ಮ ತಂದೆಯೊಂದಿಗೆ ಪುಟ್ಟದಾದ ಇಡುಮುರಿ ಕಟ್ಟಿಕೊಂಡು ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತಾ ಶಬರಿಮಲೆ ಬೆಟ್ಟವನ್ನು ಏರಿದಂತಹ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಇಂದಿಗೂ ಬಹಳ ಅಪರೂಪವಾಗಿದೆ.

ಇನ್ನು ಅಣ್ಣಾವ್ರು ಬದುಕಿದ್ದಷ್ಟು ದಿನ ಹಾಗೂ ಅವರ ಅಗಲಿಕೆಯ ನಂತರವೂ ತಮ್ಮ ಅಯ್ಯಪ್ಪ ಸ್ವಾಮಿ ವ್ರತವನ್ನು ಬಹಳನೇ ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದ ಶಿವಣ್ಣ, ರಾಘಣ್ಣ ಹಾಗೂ ಪುನೀತ್ ರಾಜಕುಮಾರ್ ಹರಕೆ ಮುಗಿದ ನಂತರ ದೇವಸ್ಥಾನಕ್ಕೆ ಹೋಗುವುದನ್ನು ಕಡಿಮೆ ಮಾಡಿದ್ದಾರೆ.

ಅವರ್ಯಾರ ಮನಸ್ಸಿನಲ್ಲಿಯೂ ದೇವರ ಮೇಲಿನ ಭಾವನೆ ಕಿಂಚಿತ್ತು ಕಡಿಮೆಯಾಗಿಲ್ಲ ಹೀಗೆ ಅಣ್ಣಾವ್ರು ಬಹಳ ಕಟ್ಟು ನಿಟ್ಟಿನಿಂದ ಅಯ್ಯಪ್ಪ ಸ್ವಾಮಿ ವ್ರತವನ್ನು ಮಾಡುತ್ತಿದ್ದರು. ಅಲ್ಲದೆ ತಮ್ಮ ಮಕ್ಕಳಾದ ಶಿವಣ್ಣ ರಾಘಣ್ಣ ಹಾಗೂ ಅಪ್ಪು ಮಾಡುವಂತೆ ಸಲಹೆಯನ್ನು ನೀಡುತ್ತಿದ್ದರು.

ಈ ಕಾರಣದಿಂದ ಮೂವರು ಸ್ಟಾರ್ ನಟರು ಸಿನಿಮಾ ಕೆಲಸಗಳಿಂದ ಕೊಂಚ ಬ್ರೇಕ್ ಪಡೆದು ಮೂರು ದಿನಗಳ ಕಾಲ ಅಚ್ಚುಕಟ್ಟಾಗಿ ವ್ರತ ಅನುಷ್ಠಾನಗಳನ್ನೆಲ್ಲ ಮಾಡಿ ಉಪವಾಸ(Fasting) ಸ್ನಾನ ಮಾಡಿ ಹೀಗೆ ಕಿತ್ತಳೆ ಬಣ್ಣದ ವಸ್ತ್ರವನ್ನು ಧರಿಸಿ ತಲೆ ಮೇಲೆ ಇಡುಮುಡಿ ಇಟ್ಟುಕೊಂಡು ಅಯ್ಯಪ್ಪ ಸ್ವಾಮಿ(Ayyappa swamy) ದರ್ಶನ ಪಡೆಯಲು ಶಬರಿಮಲೆಗೆ ಪ್ರತಿ ವರ್ಷವೂ ತೆರಳುತ್ತಿದ್ದರಂತೆ. ಆಗ ತೆಗೆದಂತಹ ಕೆಲವು ಫೋಟೋಗಳು ಹೇಗಿತ್ತು ಎಂಬುದನ್ನು ಕಂಡುಕೊಳ್ಳಬಹುದಾಗಿದೆ.

ಇದನ್ನೂ ಓದಿ ಅವಿನಾಶ್ ಮಾಳವಿಕಾ ಮನೆಗೆ ಗುದ್ದಲಿ ಪೂಜೆ ಮಾಡಿದ ಸಾಹಸ ಸಿಂಹ ಡಾಕ್ಟರ್ ವಿಷ್ಣುವರ್ಧನ್! 15 ವರ್ಷಗಳ ಹಿಂದಿನ ನೆನಪನ್ನು ಮತ್ತೆ ಸ್ಮರಿಸಿದ ಮಾಳವಿಕಾ ದಂಪತಿ

Leave a Comment