Dorector Harsha Family: ಸ್ನೇಹಿತರೆ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರೊಂದಿಗೆ ಕಾಶಿ(Kashi) ಸಿನಿಮಾದಲ್ಲಿ ಅವರ ತಮ್ಮನಾಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಪಡೆದಂತಹ ಹರ್ಷ ಅವರು ಅನಂತರ ಕನ್ನಡ ಸಿನಿಮಾ ರಂಗದಲ್ಲಿ ಪ್ರಖ್ಯಾತ ನಿರ್ದೇಶಕರಾಗಿ, ಸಂಗೀತ ಸಂಯೋಜಕರಾಗಿ, ದೃಶ್ಯ ಸಂಯೋಜಕರಾಗಿ, ಕೆಲಸ ಮಾಡುವ ಮೂಲಕ ತಮ್ಮದೇ ಆದ ವಿಶೇಷ ಹೆಸರನ್ನು ಸಂಪಾದಿಸಿಕೊಂಡಿದ್ದಾರೆ.
ಹೌದು ಗೆಳೆಯರೇ ಈವರೆಗೂ ಹರ್ಷ ಅವರು ರಂಗ ಎಸ್ ಎಲ್ ಸಿ, ಮೆರವಣಿಗೆ, ಮೊಗ್ಗಿನ ಮನಸ್ಸು, ರಿಷಿ, ತಾಜ್ಮಹಲ್, ಓನ್ಲಿ ವಿಷ್ಣುವರ್ಧನ ಹೀಗೆ ಬರೋಬ್ಬರಿ 300 ಡಾನ್ಸ್ ಸೀಕ್ವೆಲ್ ಗಳನ್ನು ಕನ್ನಡ ಕೊಡುಗೆಯನ್ನಾಗಿ ನೀಡಿದ್ದಾರೆ. ನಿರ್ದೇಶಕರಾಗಿಯೂ ಅತಿ ಅದ್ಭುತ ಯಶಸ್ಸನ್ನು ಕಂಡಿರುವ ಹರ್ಷ ಅವರು 2007ರಲ್ಲಿ ಪ್ರಜ್ವಲ್ ದೇವರಾಜ್(Prajwal Devraj) ಅವರ ಹರ್ಷ ಎಂಬ ಸಿನಿಮಾದ ಮೂಲಕ ನಿರ್ದೇಶಕನ ಕ್ಯಾಪ್ ಹಾಕಿ ತಮ್ಮ ಅದ್ಭುತ ಮೇಕಿಂಗ್ ನಿಂದ ಸದ್ದು ಮಾಡಿದರು.
ಇದಾದ ಬಳಿಕ ನಟ ಚೇತನ್ (Chethan) ಅಭಿನಯದ ಬಿರುಗಾಳಿ(Birugali) ಸಿನಿಮಾದ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿರುವಾಗಲೇ ಅದೇ ಸಿನಿಮಾದ ನಾಯಕ ನಟಿ ಸಿತಾರ ವೈದ್ಯ(Sithara Vaidya) ಅವರೊಂದಿಗೆ ಹರ್ಷ ಪ್ರೀತಿಯಲ್ಲಿ ಬೀಳುತ್ತಾರೆ. ಹಲವು ವರ್ಷಗಳ ಕಾಲ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗಳು ಇಂದಿಗೂ ತಮ್ಮ ಎರಡು ಮುದ್ದಾದ ಮಕ್ಕಳೊಂದಿಗೆ ಸುಖ ಸಂಸಾರ ಜೀವನವನ್ನು ನಡೆಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮುದ್ದಾದ ಫೋಟೋಗಳ ಮೂಲಕ ಸದಾ ಸದ್ದು ಮಾಡುವಂತಹ ಹರ್ಷ ಮತ್ತು ಸಿತಾರ ದಂಪತಿಗಳು ಆಗಾಗ ಫಾರಿನ್ ಪ್ರವಾಸಕ್ಕೆ ಹಾರುತ್ತ ಅಲ್ಲಿನ ರಮಣೀಯವಾದ ಸ್ಥಳಗಳನ್ನು ಎಂಜಾಯ್ ಮಾಡುವ ಕೆಲ ಫೋಟೋಗಳನ್ನು ತಮ್ಮ ಇನ್ಸ್ತಗ್ರಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಮದುವೆಯಾದ ಬಳಿಕ ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದ ಸಿತಾರಾ ಈಗಲೂ ಬಣ್ಣದ ಬದುಕಿಗೆ ಕಂಬ್ಯಾಕ್ ಮಾಡಿದರೆ ನಾವಂತೂ ನೋಡಲು ರೆಡಿ ಎಂದು ಫ್ಯಾನ್ಸ್ ಹೇಳುತ್ತಿರುತ್ತಾರೆ.