ದರ್ಶನ್ ಅವರನ್ನು ಹಾಕಿಕೊಂಡು 1600 ಕೋಟಿಗೂ ಹೆಚ್ಚು ಕಲೆಕ್ಷನ್ ಆಗುವಂತಹ ಸಿನಿಮಾ ಮಾಡುತ್ತೇನೆ ಎಂದು ಶಪಥ ಮಾಡಿದ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವಿಂಗ್ ಇದೆ ಎಂಬ ವಿಷಯ ಎಲ್ಲರಿಗೂ ತಿಳಿದಿದೆ. ದರ್ಶನ್ ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಯುತ್ತಾರೆ. ಕರ್ನಾಟಕದಲ್ಲಿ ಕೂಡ ಮಾಸ್ ಸಿನಿಮಾದಿಂದ ಇಷ್ಟೊಂದು ಕಲೆಕ್ಷನ್ ಮಾಡಬಹುದು ಎಂದು ಮೊದಲಿಗೆ ತೋರಿಸಿತು ನಟ ದರ್ಶನ್. ನಟ ದರ್ಶನ್ ಈಗ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ಬೇರೆ ರಾಜ್ಯಗಳಲ್ಲೂ ಕೂಡ ಅಭಿಮಾನಿಗಳು ಇರುವುದು ನಿಜ. ಹಿಂದೆ ದರ್ಶನ್ ಅವರ ಕುರುಕ್ಷೇತ್ರ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕೂಡ ನಟನೆ ಮಾಡಿದ್ದರು.

ಕನ್ನಡದ ಮೊಟ್ಟ ಮೊದಲ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ ಎನಿಸಿಕೊಂಡಿರುವ ಕೆಜಿಎಫ್ ಚಿತ್ರ 1500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ ಕನ್ನಡದಲ್ಲಿ ಕೆಜಿಎಫ್ ಸಿನಿಮಾದ ದಾಖಲೆಯನ್ನು ಬ್ರೇಕ್ ಮಾಡೋಕೆ ಹಲವಾರು ನಿರ್ದೇಶಕರು ಯೋಚನೆ ಮಾಡುತ್ತಿದ್ದಾರೆ. ಕನ್ನಡದ ಸುಪ್ರಸಿದ್ಧ ಹಿರಿಯ ನಿರ್ದೇಶಕರಾಗಿರುವ ರಾಜೇಂದ್ರ ಸಿಂಗ್ ಬಾಬು ಅವರು ಕೂಡ ಕೆಜಿಎಫ್ ಚಿತ್ರದ ಕಲೆಕ್ಷನ್ ದಾಖಲೆಯನ್ನ ಉಡೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಡಿ ಬಾಸ್ ಅವರಿಗೆ ಸಿನಿಮಾ ಮಾಡಿ ರೆಕಾರ್ಡ್ ಕ್ರಿಯೇಟ್ ಮಾಡುತ್ತೇನೆ ಎಂಬ ಆಶ್ವಾಸನೆ ನೀಡಿದ್ದಾರೆ.

ಬಂಧನ ,ಮುತ್ತಿನಹಾರ, ಅಂತ,ಮುಂಗಾರಿನ ಮಿಂಚು ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ತೊಂಭತ್ತರ ದಶಕದಲ್ಲಿ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡಿದ್ದರು. ಆದರೆ ಇದೀಗ ಹೊಸ ಯುಗಕ್ಕೆ ತಕ್ಕಂತೆ ಹೈ ಕ್ವಾಲಿಟಿ ಸಿನಿಮಾ ನಿರ್ದೇಶನ ಮಾಡೋಕೆ ರೆಡಿಯಾಗಿದ್ದಾರೆ. ಮತ್ತು ಈ ಸಿನಿಮಾಕ್ಕೆ ಡಿ ಬಾಸ್ ಅವರನ್ನು ನಟನಾಗಿ ಆಯ್ಕೆ ಮಾಡಿದ್ದಾರೆ. ಗಂಡುಗಲಿ ಮದಕರಿ ನಾಯಕ ಎಂಬ ಐತಿಹಾಸಿಕ ಚಿತ್ರವೊಂದನ್ನು ನಿರ್ಮಾಣ ಮಾಡೋಕೆ ರಾಜೇಂದ್ರ ಸಿಂಗ್ ಬಾಬು ಅವರು ರೆಡಿಯಾಗಿದ್ದಾರೆ.

ಇದು ಕನ್ನಡ ಸಿನೆಮಾ ಇತಿಹಾಸದಲ್ಲೇ ಅತಿ ಹೆಚ್ಚು ಬಜೆಟ್ ಸಿನಿಮಾವಾಗಲಿದೆ. ಈ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ಹಾಗೆ ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮೂಡಿಬರಲಿದೆ. ಎಲ್ಲಾ ಭಾಷೆಗಳಲ್ಲೂ ಈ ಚಿತ್ರ ಬಿಡುಗಡೆಯಾಗುತ್ತೆ. ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ ರಷ್ಯಾ ಜಪಾನ್ ನೇಪಾಳ ಲಂಡನ್ ಹೀಗೆ ವಿದೇಶಗಳಲ್ಲೂ ಕೂಡ ಈ ಚಿತ್ರ ಏಕಕಾಲದಲ್ಲಿ ರಿಲೀಸ್ ಆಗುತ್ತೆ ಅಂತ ರಾಜೇಂದ್ರ ಸಿಂಗ್ ಬಾಬು ಅವರು ಸಂದರ್ಶನದಲ್ಲಿ ಹೇಳಿದ್ದಾರೆ.1750-1780 ರ ಕಾಲದಲ್ಲಿ ಚಿತ್ರದುರ್ಗವನ್ನು ಆಳುತ್ತಿದ್ದ ಒಂಟಿ ಸಲಗ ಮದಕರಿ ನಾಯಕನ ಜೀವನದ ಆಧಾರಿತ ಚಿತ್ರ ಇದಾಗಲಿದೆ. ಮದಕರಿ ನಾಯಕನ ಪಾತ್ರವನ್ನು ದರ್ಶನ್ ಅವರು ನಿರ್ವಹಿಸಲಿದ್ದಾರೆ.

ಹಾಗೆ ರಾಜೇಂದ್ರ ಸಿಂಗ್ ಬಾಬು ಅವರು ಇನ್ನೊಂದು ಇಂಟರೆಸ್ಟಿಂಗ್ ಮಾಹಿತಿಯನ್ನು ಹೊರಹಾಕಿದ್ದಾರೆ. ಡಿ ಬಾಸ್ ಅವರನ್ನು ಹಾಕಿಕೊಂಡು ತೆಗೆಯುವ ಈ ಚಿತ್ರ 1600 ಕೋಟಿಗೂ ಅಧಿಕ ಕಲೆಕ್ಷನ್ ಮಾಡುತ್ತೆ ಎಂಬ ಭರವಸೆಯನ್ನು ರಾಜೇಂದ್ರ ಸಿಂಗ್ ಬಾಬು ಅವರು ನೀಡಿದ್ದಾರೆ. ಸಿನಿಮಾ ಶೂಟಿಂಗ್ ಕೂಡ ಇನ್ನೂ ಪ್ರಾರಂಭವಾಗಿಲ್ಲ ಆದರೆ ಈಗಲೇ ನಿರ್ದೇಶಕರು ರಾಜೇಂದ್ರ ಸಿಂಗ್ ಬಾಬು ಅವರು ಡಿ ಬಾಸ್ ಅವರ ಚಿತ್ರ 1600 ಕೋಟಿ ರುಪಾಯಿಗಳ ಕಲೆಕ್ಷನ್ ಮಾಡುತ್ತೆ ಆತ್ಮವಿಶ್ವಾಸದಲ್ಲಿದ್ದಾರೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಹೈ ಬಜೆಟ್ ಸಿನಿಮಾಗಳು ಹೆಚ್ಚೆಚ್ಚು ಬಂದು ಭಾರತದೆಲ್ಲೆಡೆ ಸದ್ದು ಮಾಡಲಿ ಎನ್ನುವುದು ಪ್ರೇಕ್ಷಕರ ಮಹದಾಸೆ.

Leave a Comment