Dboss ಕನ್ನಡ ಚಿತ್ರರಂಗ ಒಂದು ಕುಟುಂಬ ಎಂಬುದಾಗಿ ಮೊದಲಿನಿಂದಲೂ ಕೂಡ ರಾಜಕುಮಾರ್(Rajkumar) ಅವರು ಹೇಳಿಕೊಂಡು ಬರುತ್ತಿದ್ದರು ಈಗ ಅದು ಪದೇಪದೇ ಮತ್ತೊಮ್ಮೆ ಸಾಬೀತಾಗುವಂತಹ ಹಲವಾರು ಘಟನೆಗಳು ಕಾರ್ಯಕ್ರಮಗಳು ನಡೆಯುತ್ತಿರುವುದು ನಿಜಕ್ಕೂ ಕೂಡ ಕನ್ನಡ ಸಿನಿಮಾದ ಅಭಿಮಾನಿಗಳಾಗಿರುವ ನಮಗೆ ಸಂತೋಷವನ್ನು ತರುತ್ತದೆ.
ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಭಿಷೇಕ್ ಅಂಬರೀಶ್(Abhishek Ambareesh) ಹಾಗೂ ಅವಿವಾ ಇಬ್ಬರು ಕೂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಕಷ್ಟು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಜೂನ್ ಏಳರಂದು ರಿಸೆಪ್ಶನ್ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನಡೆದಿದೆ.
ಇದರ ನಡುವಲ್ಲಿಯೇ ಮತ್ತೊಂದು ವಿಶೇಷವಾದ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿದ್ದು ಅತ್ಯಂತ ಆತ್ಮೀಯ ಸಿನಿಮಾ ಸ್ನೇಹಿತರನ್ನು ಈ ಕಾರ್ಯಕ್ರಮಕ್ಕೆ ಅಂಬರೀಶ್ ಅವರ ಕುಟುಂಬ ಆಹ್ವಾನಿಸಿತ್ತು. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜ ನಟರು ಕನ್ನಡ ಚಿತ್ರರಂಗದ ಜೋಡೆತ್ತುಗಳು ಒಂದೇ ವೇದಿಕೆಯಲ್ಲಿ ಅಭಿಷೇಕ್ ಅಂಬರೀಶ್ ಅವರ ಜೊತೆಗೆ ಕಾಣಿಸಿಕೊಳ್ಳುತ್ತಾರೆ.
ಹೌದು ಗೆಳೆಯರೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ರಾಕಿಂಗ್ ಸ್ಟಾರ್ ಯಶ್(Rocking Star Yash) ಇಬ್ಬರು ಕೂಡ ಒಂದೇ ವೇದಿಕೆಯ ಮೇಲೆ ಸ್ಟೆಪ್ ಹಾಕುತ್ತಿರುವುದು ಕ್ಯಾಮೆರಾ ಕಣ್ಣಿಗೆ ಕಂಡು ಬಂದಿದ್ದು ಈ ವಿಶೇಷ ಘಳಿಗೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಈ ದೃಶ್ಯದ ಫೋಟೋ ತುಣುಕುಗಳನ್ನು ಕೂಡ ನೀವು ಈ ಮೇಲೆ ನೋಡಬಹುದಾಗಿದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.