ನಟ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಎಷ್ಟು ಒಲವಿದೆಯೋ ಅಷ್ಟೇ ಒಲವು ಕಾರ್ ಬೈಕ್ ಗಳ ಮೇಲೆ ಕೂಡ ಇದೆ. ಡಿ ಬಾಸ್ ಅವರಿಗೆ ದುಬಾರಿ ಕಾರ್ ಗಳನ್ನು ಖರೀದಿ ಮಾಡುವ ಚಾಳಿ ಇದೆ. ಡಿ ಬಾಸ್ ಅವರ ಬಳಿ ಈಗಾಗಲೇ ಸುಮಾರು ಹತ್ತು ರಿಂದ ಹನ್ನೆರಡು ಲಕ್ಸೂರಿಯಸ್ ಕಾರ್ ಗಳು ಇವೆ. ಇದೀಗ ಇನ್ನೊಂದು ದುಬಾರಿ ರೇಂಜ್ ರೋವರ್ ಕಂಪೆನಿಯ ಕಾರೊಂದನ್ನು ನಟ ದರ್ಶನ್ ಅವರು ಖರೀದಿ ಮಾಡಿದ್ದಾರೆ.
ಪ್ರತಿ ವರ್ಷ ನಟ ದರ್ಶನ್ ಅವರು ಕೋಟಿಗಟ್ಟಲೆ ರೂಪಾಯಿಗಳನ್ನು ಕೇವಲ ಒಂದು ಕಾರು ಖರೀದಿ ಮಾಡೋಕೆ ಬಳಸುತ್ತಾರೆ. ಒಂದು ಕಾಲದಲ್ಲಿ ಸ್ಕೂಟಿ ಓಡಿಸುತ್ತಿದ್ದ ದರ್ಶನ್ ಇದೀಗ ದೇಶದಲ್ಲೇ ಲಕ್ಸೂರಿಯಸ್ ಕಾರ್ ಗಳು ಎನಿಸಿಕೊಂಡಿರುವ ಲ್ಯಾಂಬರ್ಗಿನಿ , ರೇಂಜ್ ರೋವರ್ ಪೊಶ್ ಮತ್ತು ಟೊಯೋಟಾ ಇಂಥ ಕಾರುಗಳನ್ನು ಖರೀದಿ ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು. ತಮ್ಮ ಸ್ವಂತ ದುಡಿಮೆಯಿಂದ ಇಂತಹ ದುಬಾರಿ ಕಾರುಗಳನ್ನು ಖರೀದಿ ಮಾಡಿರುವುದು ದರ್ಶನ್ ಅವರ ಸಾಧನೆ ಮತ್ತು ಶ್ರಮ.
ನಟ ದರ್ಶನ್ ಅವರ ಬಳಿಯಿರುವ ಅತ್ಯಂತ ದುಬಾರಿಯುತ ಕಾರು ಯಾವುದು ಎಂದರೆ ಅದು ಲ್ಯಾಂಬರ್ಗಿನಿ, ಸುಮಾರು ಆರೂವರೆ ಕೋಟಿ ರುಪಾಯಿಗಳನ್ನು ಕೊಟ್ಟು ದರ್ಶನ್ ಅವರು ಲ್ಯಾಂಬೊರ್ಗಿನಿ ಕಾರನ್ನು ಖರೀದಿ ಮಾಡಿದ್ದರು. ಇತ್ತೀಚಿಗಷ್ಟೆ ನಟ ದರ್ಶನ್ ಅವರು ನಲವತ್ತು ಲಕ್ಷ ರೂಪಾಯಿಗಳನ್ನು ಕೊಟ್ಟು ಕಸ್ಟಮೈಸ್ ಆಗಿರುವ ಫೋರ್ಡ್ ಎಂಡೋವೆರ್ ಕಾರೊಂದನ್ನು ಖರೀದಿ ಮಾಡಿದ್ದರು. ಅಷ್ಟೇ ಅಲ್ಲದೆ ಐವತ್ತು ಲಕ್ಷ ರೂಪಾಯಿಗಳನ್ನು ಕೊಟ್ಟು ಬಿಎಂಡಬ್ಲ್ಯು ಕಾರನ್ನು ಖರೀದಿ ಮಾಡಿ.. ಪತ್ನಿ ವಿಜಯಲಕ್ಷ್ಮಿ ಗೆ ಉಡುಗೊರೆಯಾಗಿ ನೀಡಿದ್ದರು.
ಇದೀಗ ದರ್ಶನ್ ಅವರು ರೇಂಜ್ ರೋವರ್ ಡಿಫೆಂಡರ್ ಎನ್ನುವ ಹೊಸ ಮಾರ್ಡನ್ ಕಾರೊಂದನ್ನು ಖರೀದಿ ಮಾಡಿದ್ದಾರೆ ಈಗಾಗಲೇ ದರ್ಶನ್ ಅವರ ಬಳಿ ರೇಂಜ್ ರೋವರ್ ಕಂಪನಿಯ ಕಾರ್ ಇದ್ದು ಇದೀಗ ರೇಂಜ್ ರೋವರ್ ಕಂಪನಿಯ ಎರಡನೇ ಕಾರ್ ಕಲೆಕ್ಷನ್ ಆಗಿದೆ. ಇನ್ನು ಕಾರಿನ ಬೆಲೆಯನ್ನು ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತಿರಾ.. ರೇಂಜ್ ರೋವರ್ ಡಿಫೆಂಡರ್ ಕಾರ್ ಅನ್ನು ದರ್ಶನ್ ಅವರು ಬರೋಬ್ಬರಿ ಒಂದೂವರೆ ಕೋಟಿ ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ಒಂದು ಕೋಟಿ ಇಪ್ಪತ್ತು ಲಕ್ಷ ಆದರೆ ಆನ್ ರೋಡ್ ಪ್ರೈಸ್ ಒಂದೂವರೆ ಕೋಟಿ ಆಗುತ್ತೆ. ಈ ಕಾರಿನ ವಿಶೇಷತೆ ಏನೆಂದರೆ ಈ ಕಾರಿನಲ್ಲಿ ಮಾಡರ್ನ್ ಹಾರ್ಡ್ ವೇರ್ ಗಳನ್ನು ಅಳವಡಿಸಲಾಗಿದೆ ಮತ್ತು ಇದು ಆಫ್ ರೋಡ್ ಡ್ರೈವ್ ಗೆ ಸೂಕ್ತವಾಗಿದೆ. ಅಷ್ಟೇ ಅಲ್ಲದೆ ಈ ಕಾರನ್ನು ನಿಮಗೆ ಇಷ್ಟಬಂದಂತೆ ಕಸ್ಟಮೈಜ್ ಮಾಡಿಸಿಕೊಳ್ಳಬಹುದು.