Dboss ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರ ಮುಂದಿನ ಸಿನಿಮಾದ ಬಗ್ಗೆ ಈಗಾಗಲೇ ಅವರ ಅಭಿಮಾನಿಗಳಿಗೆ ತಿಳಿದಿದ್ದು ಅದು ಕಾಟೇರ ಆಗಿದೆ. ಈಗಾಗಲೇ ಕಾಟೇರ ಸಿನಿಮಾದ ಚಿತ್ರಿಕರಣವೂ ಕೂಡ ಭರದಿಂದ ಸಾಗುತ್ತಿದೆ. ಇತ್ತೀಚಿಗಷ್ಟೇ ಕಾಟೇರ(Kaatera) ಸಿನಿಮಾದ ಚಿತ್ರೀಕರಣದ ನಡುವೆ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿಷೇಕ್ ಅಂಬರೀಶ್ ಅವರ ರಿಸೆಪ್ಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಟೇರ ಸಿನಿಮಾ ನೈಜ ಘಟನೆ ಆಧಾರಿತ ಸಿನಿಮಾ ಆಗಿದೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದ್ದು ಅದಕ್ಕಾಗಿ ಈ ಸಿನಿಮಾದ ಕುರಿತಂತೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಗಳಿವೆ. ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು ರಾಕ್ಲೈನ್ ವೆಂಕಟೇಶ್(Rockline Venkatesh) ನಿರ್ಮಾಣ ಮಾಡುತ್ತಿದ್ದಾರೆ.
ಸದ್ಯಕ್ಕೆ ಅವರ ಮುಂದಿನ ಸಿನಿಮಾ ಕಾಟೇರ ಎನ್ನುವುದು ಎಲ್ಲರಿಗೂ ಗೊತ್ತು ಆದರೆ ಅದಾದ ನಂತರ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವುದರ ಬಗ್ಗೆ ಸಾಕಷ್ಟು ಜನರಿಗೆ ತಿಳಿಯದೆ ಇರಬಹುದು ಆ ವಿವರವನ್ನು ನೀಡಲು ನಾವು ನಿಮಗೆ ಹೊರಟಿದ್ದೇವೆ. ಹಾಗಿದ್ದರೆ ಕಾಟೇರ ಸಿನಿಮಾದ ನಂತರ ದರ್ಶನ್(Darshan) ರವರು ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.
ಹೌದು ಮಿಲನ ಪ್ರಕಾಶ್ ರವರ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹೊಸ ಸಿನಿಮಾದಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಸಿನಿಮಾ ಈಗಾಗಲೇ ಕನ್ಫರ್ಮ್ ಆಗಿರುವುದು ಅಧಿಕೃತವಾಗಿ ಸುದ್ದಿ ಮೂಲಗಳಿಂದ ತಿಳಿದು ಬಂದಿರುವುದು ಆದರೆ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.