ಡಿ ಬಾಸ್ ಹೊಸ ಹೇರ್ ಸ್ಟೈಲ್ ನೋಡಿ ಬೆಚ್ಚಿಬಿದ್ದ ಚಿತ್ರರಂಗ! ಹೇಗಿದೆ ನೋಡಿ ಡಿ ಬಾಸ್ ಹೇರ್ ಸ್ಟೈಲ್ ರೂಪಾಂತರ

ಸೆಲೆಬ್ರಿಟಿಗಳು ಸಿನಿಮಾಗೋಸ್ಕರ ಮಾಡುವ ಹೊಸ ಹೊಸ ಅವತಾರ ಅಭಿಮಾನಿಗಳನ್ನು ಆಕರ್ಷಿಸುತ್ತವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಿ ಅವರ ಹೇರ್ ಸ್ಟೈಲ್ ಹಾಗೂ ಬಟ್ಟೆಗಳನ್ನು ಅನುಕರಿಸುತ್ತಾರೆ. ನಟರುಗಳು ಹೊಸ ಹೇರ್ ಸ್ಟೈಲ್ ಮಾಡಿದರೆ ಅದು ಮರು ದಿನವೇ ಟ್ರೆಂಡ್ ಆಗಿ ಬಿಡುತ್ತೆ. ಸುದೀಪ್ ಅವರ ಹೆಬ್ಬುಲಿ ಹೇರ್ ಸ್ಟೈಲ್ ಆಗಿ ಯಶ್ ಅವರ ಕೆಜಿಎಫ್ ಹೇರ್ ಸ್ಟೈಲ್ ಮತ್ತು ಗಡ್ಧ ತುಂಬಾ ಟ್ರೆಂಡ್ ಆಗಿತ್ತು. ಇದೀಗ ದರ್ಶನ್ ಅವರ ಸರದಿ.

ನಟ ದರ್ಶನ್ ಅವರು ತಮ್ಮ ಸಿನಿಮಾಗೋಸ್ಕರ ತಮ್ಮ ಕೂದಲಿನ ಸ್ಟೈಲ್ ಚೇಂಜ್ ಮಾಡಿಕೊಂಡಿದ್ದಾರೆ ಹೊಸ ಹೇರ್ ಸ್ಟೈಲ್ ರೂಪಾಂತರ ಮಾಡಿಸಿಕೊಂಡಿದ್ದಾರೆ. ಡಿ ಬಾಸ್ ಅವರ ಹೊಸ ಅವತಾರ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ ಅಷ್ಟೇ ಅಲ್ಲದೆ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ ಅಂತಲೇ ಹೇಳಬಹುದು. ಡಿಮಾಸ್ ಅವರ ಹೊಸ ಲುಕ್ ನೋಡಿದರೆ ಕಾಲೇಜು ಯುವಕನಂತೆ ಕಾಣುತ್ತಾರೆ. ನಿಜಕ್ಕೂ ಇದು ನಂಬೋಕೆ ಸಾಧ್ಯವಿಲ್ಲ ಅಂಥ ಅಭಿಮಾನಿಗಳೆಲ್ಲಾ ಹೇಳುತ್ತಿದ್ದಾರೆ.

ದರ್ಶನ್ ಅವರು ಇತ್ತೀಚೆಗೆ ಕ್ರಾಂತಿ ಸಿನಿಮಾದ ಶೂಟಿಂಗ್ ಗೋಸ್ಕರ ಪೋಲೆಂಡ್ ದೇಶಕ್ಕೆ ತೆರಳಿದ್ದರು ಇಡೀ ಪೋಲೆಂಡ್ ನಿಂದ ಬಂದ ತಕ್ಷಣವೇ ಡಿ ಬಾಸ್ ಅವರ ಹೇರ್ ಸ್ಟೈಲ್ ಬದಲಾಗಿದೆ. ಪೋಲೆಂಡ್ ದೇಶಕ್ಕೆ ಹೋಗಿ ದರ್ಶನ್ ಅವರು ತಮ್ಮ ಲುಕ್ ಅನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ ಹಲವಾರು ದಿನ ದರ್ಶನ್ ಅವರ ಹೇರ್ ಸ್ಟೈಲ್ ನೋಡಿ ಇದು ನೈಸರ್ಗಿಕ ಹೇರ್ ಸ್ಟೈಲ್ ಅಲ್ಲ. ಇದು ಕೃತಕವಾಗಿ ಮಾಡಿಸಿರುವ ಹೇರ್ ಸ್ಟೈಲ್ ಎಂದು ಹೇಳುತ್ತಿದ್ದಾರೆ. ಅದು ಏನೇ ಇರಲಿ ಒಟ್ಟಿನಲ್ಲಿ ದರ್ಶನ್ ಅವರ ಈ ಹೊಸ ಲುಕ್ ಸೂಪರ್ ಆಗಿ ಕಾಣುತ್ತಿದೆ .

ಇನ್ನೂ ಈ ಹೊಸ ಲುಕ್ ನ ಹಿಂದಿನ ಕಾರಣವೇನು ಎಂಬುದು ಹಲವರಿಗೆ ಕುತೂಹಲ ಮೂಡಿದೆ. ದರ್ಶನ್ ಅವರ ಈ ಹೊಸ ಲುಕ್ ಅವರ ಸಿನಿಮಾದ ಶೂಟಿಂಗ್ ಗೆ ಮಾಡಿಸಿದ್ದಾರೆ ಎನ್ನುವುದು ತಿಳಿದುಬಂದಿದೆ ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಅವರು ಕಾಲೇಜು ಹುಡುಗನ ಪಾತ್ರವನ್ನು ಕೂಡ ಮಾಡಲಿದ್ದಾರೆ ಈ ಕಾರಣಕ್ಕೆ ದರ್ಶನ್ ಅವರ ಲುಕ್ ಮತ್ತು ಹೇರ್ ಸ್ಟೈಲ್ ಅನ್ನು ಬದಲಾಯಿಸಲಾಗಿದೆ ಎಂದು ಸಿನಿಮಾ ತಂಡದವರಿಂದ ಮಾಹಿತಿ ಬಂದಿದೆ.

ದರ್ಶನ್ ಅವರ ಹೊಸ ಚಿತ್ರ ಕ್ರಾಂತಿ ಇದೇ ವರ್ಷದ ಕೊನೆಯಲ್ಲಿ ಬಿಡುಗಡೆ ಕಾಣುವ ಸಾಧ್ಯತೆ ಇದೆ ದರ್ಶನ್ ಅವರ ಈ ಹೊಸ ಲುಕ್ ಅನ್ನು ನೋಡಲು ಅಭಿಮಾನಿಗಳೆಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ ಅಷ್ಟೇ ಅಲ್ಲದೆ ಕ್ರಾಂತಿ ಚಿತ್ರದ ಕ್ರೇಜ್ ಕೂಡಾ ಹೆಚ್ಚಾಗುತ್ತಿದೆ. ಕ್ರಾಂತಿ ಚಿತ್ರದ ಕತೆ ವಿದ್ಯೆ ಮತ್ತು ಶಿಕ್ಷಣದ ಕುರಿತಾಗಿ ವಿವರಿಸಲಾಗಿದೆ. ದರ್ಶನ್ ಅವರ ಹೊಸ ಲುಕ್ ಲೀಕ್ ಆಗಿದ್ದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅವರ ವಿಡಿಯೋ ಹರಿದಾಡುತ್ತಿದೆ.

ಮನೆ ಮುಂದೆ ನೆರೆದಿದ್ದ ಅಭಿಮಾನಿಗಳನ್ನು ಭೇಟಿ ಮಾಡುವಾಗ ದರ್ಶನ್ ಅವರ ಹೊಸ ಲುಕ್ ರಿವಿಲ್ ಆಗಿದೆ. ದರ್ಶನ್ ಅವರ ಹೊಸ ಲುಕ್ ಅಭಿಮಾನಿಗಳು ದರ್ಶನ್ ಅವರ ಮನೆ ಮುಂದೆ ಗುಂಪು ಕಟ್ಟುತ್ತಿದ್ದಾರೆ. ಯಾವುದೇ ಮೀಡಿಯಾಗಳಲ್ಲೂ ಪ್ರಸಾರವಾಗದ ಇದ್ದರೂ ಕೂಡ ದರ್ಶನ್ ಅವರ ಹೊಸ ಹೇರ್ ಸ್ಟೈಲ್ ಇದೀಗ ಇಂಟರ್ನೆಟ್ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Leave a Comment