ಖ್ಯಾತ ಕಿರುತೆರೆ ನಟಿ ನಿಧನ !

ಕಿರುತೆರೆಯ ಅನುಪಮಾ ಧಾರಾವಾಹಿಯಲ್ಲಿ ರೂಪಾಲಿ ಗಂಗೂಲಿ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದ್ದ ಕಿರುತೆರೆ ನಟಿ ಮಾಧವಿ ಗೋಗಟೆ ( Madhavi Gogate) ಇನ್ನಿಲ್ಲ!

ನಟಿ ಮಾಧವಿ ಗೋಗಟೆ ಅವರು ಕೊರೊನಾ ವೈರಸ್‌ನಿಂದ 58 ನೇ ವಯಸ್ಸಿನಲ್ಲಿ ನಿಧನರಾದರು. ನಟಿ COVID-19 ಪಾಸಿಟಿವ್ ಅನ್ನು ಪರೀಕ್ಷಿಸಿದ್ದಾರೆ ಮತ್ತು ನಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ. ಮತ್ತು ಸೋಂಕಿನಿಂದ ಚೇತರಿಸಿಕೊಳ್ಳಲಾಗದೆ ನಿಧನ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಅವರ ಸಹ ನಟಿ ರೂಪಾಲಿ ಗಾಂಗೂಲಿ ಇನ್ಸ್ಟಾ ಗ್ರಾಂನಲ್ಲಿ “ಇನ್ನು ಹೇಳುವುದಕ್ಕೆ ಏನೂ ಉಳಿದಿಲ್ಲ. ಮಾಧವಿಜಿ ಅವರಿಗೆ ಸದ್ಗತಿ ಸಿಗಲಿ’ ಎಂದು ಬರೆದುಕೊಂಡಿದ್ದಾರೆ. ಮಾಧವಿ ಗೋಗಟೆ, ಏಕ್ತಾ ಕಪೂರ್ ಸೇರಿದಂತೆ ಅನೇಕ ದಿಗ್ಗಜರ ಧಾರಾವಾಹಿಯಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಅವರ ನಿಧನಕ್ಕೆ ಕಿರುತೆರೆ ಕಲಾವಿದರು ಕಂಬನಿ ಮಿಡಿದಿದ್ದಾರೆ.

ಮಾಧವಿ ಅವರು ಕೋಯಿ ಅಪ್ನಾ ಸಾ, ಐಸಾ ಕಭಿ ಸೋಚಾ ನಾ ಥಾ, ಕಹಿನ್ ತೋ ಹೋಗಾ ಮುಂತಾದ ಹಲವಾರು ಹಿಂದಿ ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

Leave a Comment