Darshan thoogudeepa ಸ್ನೇಹಿತರೆ, ಮೆಜೆಸ್ಟಿಕ್ ಸಿನಿಮಾದಿಂದ ಹಿಡಿದು ಇಂದಿನ ಕ್ರಾಂತಿ (Kranthi) ಸಿನಿಮಾದವರೆಗೂ ಜನರಿಗೆ ಮಸ್ತ್ ಮನೋರಂಜನೆ ನೀಡುತ್ತಾ ತಮ್ಮದೇ ದಾಟಿಯಲ್ಲಿ ಎಂಟರ್ಟೈನ್ಮೆಂಟ್ ನೀಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಕನ್ನಡದಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ಸ್ಟಾರ್ ನಟ. ಸಿನಿಮಾಗಳ ಮೇಲೆ ದರ್ಶನ್ನವರಿಗೆ ಪ್ರೀತಿ ಒಲವು ಎಷ್ಟು ಹೇರಳವಾಗಿದೆಯೋ ಅದರಂತೆ ಪ್ರಾಣಿ ಪಕ್ಷಿ ಹಾಗೂ ವನ್ಯಜೀವಿಗಳ ಮೇಲೆ ವಿಶೇಷವಾದ ಭಾಂದವ್ಯವನ್ನು ದರ್ಶನ ಹೊಂದಿದ್ದಾರೆ.
ಹೀಗಾಗಿ ಬಿಡುವು ಸಿಕ್ಕಾಗಲೆಲ್ಲ ತಮ್ಮ ಸ್ನೇಹಿತರೊಂದಿಗೆ ಸಫಾರಿಗೆ ತೆರಳುವ ದರ್ಶನ್ ಇದೀಗ ಇದ್ದಕ್ಕಿದ್ದ ಹಾಗೆ ಫಾರಿನ್ ಟ್ರಿಪ್ಗೆ ಹಾರಿದ್ದಾರೆ. ಹೌದು ಸ್ನೇಹಿತರೆ ದರ್ಶನ್ನವರು ಮಾಲಾಶ್ರೀ ಅವರ ಪುತ್ರಿ ರಾಧನಾ ರಾಮ್ ಅವರೊಂದಿಗೆ ಕಾಟೇರ ಎಂಬ ಮುಂದಿನ ಸಿನಿಮಾದ ಶೂಟಿಂಗ್ ಕೆಲಸಗಳಲ್ಲಿ ಸಕತ್ ಬ್ಯುಸಿಯಾಗಿದ್ದು ಅದರ ನಡುವೆಯೂ ಕೊಂಚ ಬ್ರೇಕ್ ಪಡೆದು ಸ್ನೇಹಿತರೊಂದಿಗೆ ಸಮಯ ಕಳೆಯುವ ಸಲುವಾಗಿ ಫಾರಿನ್ಗೆ ಹಾರಿದ್ದಾರೆ.
ಸಿನಿಮಾಗಾಗಿ ತಮ್ಮ ದೇಹವನ್ನು ದಂಡಿಸಿ ಬಹಳನೇ ಫಿಟ್ ಆಗಿ ಕಾಣುತ್ತಿರುವ ದರ್ಶನ್ ಬಿಳಿ ಬಣ್ಣದ ಟೀ ಶರ್ಟ್ ಧರಿಸಿ, ಕಣ್ಣಿಗೆ ಗಾಗಲ್ಸ್ ಹಾಕಿಕೊಂಡು ಫೋಟೋಗೆ ಮಾಸ್ ಆಗಿ ಫೊಸ್ ನೀಡಿದ್ದಾರೆ. ಸ್ನೇಹಿತರೊಂದಿಗಿನ ಈ ಫೋಟೋಸ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ಅಭಿಮಾನಿಗಳು ಡಿ ಬಾಸ್ ಅವರ ಮುಂದಿನ ಸಿನಿಮಾದ ಶೂಟಿಂಗ್ ಫಾರಿನ್ ಲೊಕೇಶನ್ ಳಲ್ಲಿ ಚಿತ್ರಿಕರಣವಾಗಲಿದೆ. ಈ ಕಾರಣದಿಂದ ದಚ್ಚು ಪ್ರವಾಸಕ್ಕೆ ಹೋಗಿರಬಹುದು ಎಂದೆಲ್ಲ ಅಂದಾಜು ಹಾಕುತ್ತಿದ್ದಾರೆ.
ಇನ್ನು ತರುಣ್ ಸುದೀರ್ ಅವರ ನಿರ್ದೇಶನದಲ್ಲಿ, ರಾಕ್ಲೈನ್ ಎಂಟರ್ಟೈನ್ಮೆಂಟ್ (Rockline entertainment) ನಿರ್ಮಾಣದಲ್ಲಿ ತಯಾರಾಗುತ್ತಿರುವ ದರ್ಶನ್ನವರ 56ನೇ ಸಿನಿಮಾ ಇದಾಗಲೇ ಫಸ್ಟ್ ಲುಕ್ ಮೋಶನ್ ಪೋಸ್ಟರ್ ಮೂಲಕ ಬಾರಿ ಗಮನ ಸೆಳೆದಿದ್ದು, ಸಿನಿಮಾ ಆದಷ್ಟು ಬೇಗ ಬಿಡುಗಡೆಯಾಗಲಿ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.
ಈಗಾಗಲೇ ಮೊದಲ ಹಂತದ ಶೂಟಿಂಗ್ ಸಂಪೂರ್ಣ ಮುಗಿದು, ಎರಡನೇ ಹಂತದ ಶೂಟಿಂಗ್ ಕೆಲಸಗಳಲ್ಲಿ ತೊಡಗಿಕೊಂಡಿರುವ ದರ್ಶನ್ನವರ ಕಾಟೇರ(Katera) ಸಿನಿಮಾ ಇದೇ ವರ್ಷದಲ್ಲಿ ತೆರೆಗಪ್ಪಳಿಸಲಿದ್ಯ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ Bc Patil: ಕನ್ನಡದ ಕೌರವ ಬಿಸಿ ಪಾಟೀಲ್ ಅವರ ಮಗಳು ಹಾಗೂ ಪತ್ನಿ ಜೊತೆಗಿನ ಸುಂದರ ಕ್ಷಣಗಳು