Darshan: ಸರಳತೆಯ ಸಾಹುಕಾರ ಡಿ ಬಾಸ್ ದರ್ಶನ್ ಮತ್ತು ಅಭಿಮಾನಿಯ ಅವರ ಅಪರೂಪದ ಫೋಟೋಸ್ ವೈರಲ್

Darshan thoogudeepa: ಸ್ನೇಹಿತರೆ, ನಮ್ಮ ಸ್ಯಾಂಡಲ್ ವುಡ್ನ ಸರಳತೆಯ ಸಾಹುಕಾರ ಅಭಿಮಾನಿಗಳ ಪಾಲಿನ ಡಿ ಬಾಸ್ ದಾಸಾ ದರ್ಶನ್ ಪ್ರತಿನಿತ್ಯ ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಅಭಿಮಾನಿಗಳೂ ತಮ್ಮ ನೆಚ್ಚಿನ ನಟನನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಹಾಡಿ ಹೊಗಳುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ ಅದರಂತೆ ದರ್ಶನ್ (Darshan) ಕೂಡ ನಾಲ್ಕು ಜನರಿಗೆ ಒಳ್ಳೆಯದಾಗುವಂತಹ ಕೆಲಸಗಳನ್ನು ಮಾಡುತ್ತಾ ತಮ್ ಅಭಿಮಾನಿಗಳಿಗೂ ಕೂಡ ಅದೇ ದಾರಿಯಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿರುತ್ತಾರೆ.

ಈ ಕಾರಣದಿಂದ ಇಂದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಂಸ್ಕೃತಿಕ ರಾಯಬಾರಿ, ವನ್ಯಜೀವಿ ಸಂರಕ್ಷಣೆಯ ರಾಯಭಾರಿಯಾಗಿ ಆಯ್ಕೆಯಾಗಿರುವುದು. ಬಿಡುವು ಸಿಕ್ಕಾಗಲಿಲ್ಲ ತಮ್ಮ ಸ್ನೇಹಿತರೊಂದಿಗೆ ಪ್ರಾಣಿ-ಪಕ್ಷಿಗಳ ಚಲನ ವಲನವನ್ನು ಕ್ಯಾಪ್ಚರ್ ಮಾಡಲು ಸಫಾರಿಗೆ ತೆರಳುವ ದರ್ಶನ್ ತಮ್ಮದೇ ಫಾರ್ಮ ಹೌಸ್ನಲ್ಲಿ ಎಲ್ಲಾ ರೀತಿಯಾದಂತಹ ಸಾಕು ಪ್ರಾಣಿಗಳನ್ನು ಸಾಕಿ ಅವುಗಳ ಆರೈಕೆಯಲ್ಲಿ

ಮಗ್ನರಾಗಿರುತ್ತಾರೆ. ವರ್ಷ ಒಂದರಲ್ಲಿ ಒಂದೆರಡು ಸಿನಿಮಾಗಳನ್ನು ಬಿಡುಗಡೆ ಮಾಡುತ್ತಾ ಎಂಟರ್ಟೈನ್ಮೆಂಟ್ ವಿಚಾರವಾಗಿಯೂ ಪ್ರೇಕ್ಷಕರಿಗೆ ಜಬರ್ದಸ್ತ್ ಮನೋರಂಜನೆ ನೀಡುವ ದರ್ಶನ್ ಯಾವುದೇ ಸಿನಿಮಾ ಬಿಡುಗಡೆಗೊಂಡರು ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸುವುದು ಪಕ್ಕ. ಹೌದು ಸ್ನೇಹಿತರೆ ಬಾಕ್ಸಾಫೀಸ್ ಸುಲ್ತಾನೆಂದೆ ಕರೆಯಲ್ಪಡುವ ದರ್ಶನ್ ಅವರ ಎಲ್ಲ ಸಿನಿಮಾಗಳನ್ನು ಅಭಿಮಾನಿಗಳು ತುಂಬು ಹೃದಯದ ಪ್ರೀತಿಯಿಂದ ಬರಮಾಡಿಕೊಂಡು ಗೆಲ್ಲಿಸಿ

ಕೊಡುತ್ತಾರೆ ಅದರಂತೆ ದರ್ಶನ್ ಕೂಡ ಎಂದಿಗೂ ಅಭಿಮಾನಿಗಳ ಮನಸ್ಸನ್ನು ನೋಯಿಸದೆ ಎಲ್ಲೇ ಅವರನ್ನು ಭೇಟಿ ಮಾಡಿದರು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದು ಆಟೋಗ್ರಾಫ್ ಕೊಡುವುದು, ಪ್ರೀತಿಯಿಂದ ಅಪ್ಪಿಕೊಳ್ಳುವುದನ್ನು ಎಂದಿಗೂ ಮರೆಯುವುದಿಲ್ಲ. ಹೀಗೆ ದರ್ಶನ್ ತಮ್ಮ ಮನೆ ಬಳಿ ಬಂದಂತಹ ವಿಕಲಚೇತನ ಅಭಿಮಾನಿ ಒಬ್ಬರ ಜೊತೆ ಫೋಟೋ ತೆಗೆಸಿಕೊಳ್ಳುವ ಸಲುವಾಗಿ ನೆಲದ ಮೇಲೆ ಮಂಡಿ ಊರಿ ಕುಳಿತಿರುವ ಚಿತ್ರ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ಅಭಿಮಾನಿಗಳು ಸರಳತೆಯ ಸಾಹುಕಾರ ನಮ್ಮೆಲ್ಲರ ಪ್ರೀತಿಯ ದಾಸ ಎಂದು ದರ್ಶನವರನ್ನು ಪದಗಳಲ್ಲಿ ವರ್ಣನೆ ಮಾಡುವ ಮೂಲಕ ಕಮೆಂಟ್ಗಳ ಮಳೆಯನ್ನೇ ಹರಿಸುತ್ತಿದ್ದಾರೆ. ಇದನ್ನೂ ಓದಿ Darshan Thoogudeepa: ಸದ್ದಿಲ್ಲದ ಸ್ನೇಹಿತರೊಂದಿಗೆ ಫಾರಿನ್ ಟ್ರಿಪ್ಗೆ ಹಾರಿದ ಡಿ ಬಾಸ್!

Leave a Comment