Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಚಿತ್ರರಂಗ ಹಿನ್ನೆಲೆ ಇರುವಂತಹ ಕುಟುಂಬದಿಂದ ಬಂದಿದ್ದವರಾಗಿದ್ದರು ಕೂಡ ಚಿತ್ರರಂಗದಲ್ಲಿ ಅವರು ನಾಯಕರಾಗಲು ಪಟ್ಟಂತಹ ಕಷ್ಟ ಹಾಗೂ ಪರಿಶ್ರಮ ಕೇವಲ ಅವರ ಸ್ವಂತ ಪ್ರತಿಭೆಯ ಮೂಲಕ ಆಗಿದೆ ಎಂಬುದನ್ನು ಪ್ರತಿಯೊಬ್ಬರು ಒಪ್ಪಿಕೊಳ್ಳಲೇಬೇಕು. ದರ್ಶನ್ ಅವರ ಹಾಗೆ ಅಂದಿನ ಕಾಲದಲ್ಲಿ ಕಷ್ಟಪಟ್ಟು ಅವಮಾನಗಳನ್ನು ಮೆಟ್ಟಿನಿಂತು ಕನ್ನಡ ಚಿತ್ರರಂಗದಲ್ಲಿ ಇಂದು ಈ ಮಟ್ಟಕ್ಕೆ ಬೆಳೆದಿರುವ ಮತ್ತೊಬ್ಬ ನಟ ಇಲ್ಲ ಎಂದು ಹೇಳಬಹುದು.
ಚಿಕ್ಕ ವಯಸ್ಸಿನಲ್ಲಿ ಹಾಲು ಮಾರಾಟ ಮಾಡಿ ಜೀವನ ಮಾಡುತ್ತಿದ್ದ ದರ್ಶನ್(Darshan) ರವರು ಇಂದು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ದುಬಾರಿ ಕಾರುಗಳನ್ನು ಹೊಂದಿರುವಂತಹ ನಾಯಕ ನಟರಲ್ಲಿ ಮೊದಲನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ದರ್ಶನ್ ರವರು ತಮ್ಮ ಅಭಿಮಾನಿಗಳನ್ನು ಎಷ್ಟು ಇಷ್ಟಪಡುತ್ತಾರೆ ಎಂದರೆ ಅದಕ್ಕಾಗಿ ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂಬುದಾಗಿ ಕರೆಯುತ್ತಾರೆ.
ಇನ್ನು ಕನ್ನಡ ಚಿತ್ರರಂಗದಲ್ಲಿ ಸೆಲೆಬ್ರಿಟಿಗಳು ಕೂಡ ದರ್ಶನ್ ಅವರ ಅಭಿಮಾನಿಗಳಿದ್ದಾರೆ ಆದರೆ ನಾವು ಇಂದು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಒಬ್ಬ ಖ್ಯಾತ ನಟಿಯ ಮಗಳು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಪ್ಪಟ ಅಭಿಮಾನಿ ಎಂಬುದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ಆ ಹುಡುಗಿ ಯಾರು ಅಥವಾ ಆ ನಟಿ ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹೌದು ಮಿತ್ರ ನಟಿ ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರ ಮಗಳಾಗಿರುವಂತಹ ಶಮಿಕ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಎಂದರೆ ಎಲ್ಲಿಲ್ಲದ ಪ್ರೀತಿ ಎಂಬುದಾಗಿ ಹೇಳಿದ್ದಾರೆ. ಇದನ್ನು ಹೇಳಿರುವುದು ಸ್ವತಃ ರಾಧಿಕಾ ಕುಮಾರಸ್ವಾಮಿ ಅವರೇ ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿದ್ದು ಸಾಕಷ್ಟು ಸಮಯಗಳಿಂದಲೂ ಕೂಡ ದರ್ಶನ್ ಹಾಗೂ ರಾಧಿಕಾ ಕುಮಾರಸ್ವಾಮಿ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.