Darshan thoogudeepa Celebrating Rakshabandan: ಇಂದು ರಕ್ಷಾ ಬಂಧನದ ವಿಶೇಷ ದಿನವಾಗಿದ್ದು, ಸಾಕಷ್ಟು ಸಹೋದರ ಸಹೋದರಿಯರು ಹಬ್ಬವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ, ಮನೆಯ ಹೆಣ್ಣು ಮಗಳು ತನ್ನೆಲ್ಲ ಸಹೋದರರ ಕೈಗೆ ರಕ್ಷೆಯ ಸ್ವರೂಪವಾದಂತಹ ರಾಕಿಯನ್ನು ಕಟ್ಟಿ, ಆರತಿ ಬೆಳಗೆ ತಿಲಕ ಇಟ್ಟು ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದರಂತೆ ಸಹೋದರರು ತಮ್ಮ ಪುಟ್ಟ ತಂಗಿಯ ಬಾಯಿಗೆ ಸಿಹಿ ತಿಂಡಿಯನ್ನು ತಿನ್ನಿಸಿ ಶುಭ ಹಾರೈಸುತ್ತಾರೆ.
ಅಣ್ಣ ತಂಗಿಯರ ಮಧುರವಾದ ಬಾಂಧವ್ಯಕ್ಕೆ ವಿಶೇಷ ದಿನ ಇದಾಗಿದ್ದು, ಸ್ಯಾಂಡಲ್ ವುಡ್ನ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಈ ಒಂದು ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾ ಆ ಕೆಲವು ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡ ತೊಡಗಿದ್ದಾರೆ. ಹೀಗಿರುವಾಗ ಅದಾಗಲೇ ಕೈಗೆ ಹತ್ತಾರು ರಾಕಿಗಳನ್ನು ನಮ್ಮ ಪ್ರೀತಿಯ ತಂಗಿಯರಿಂದ ಕಟ್ಟಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಶೇರ್
ಮಾಡಿ ಪ್ರೀತಿಯಿಂದ ಬಂದು ಹರಸಿದ ಹಾಗೂ ಎಲ್ಲಾ ನನ್ನ ಅಕ್ಕ ತಂಗಿಯರಿಗೆ ರಕ್ಷಾಬಂಧನದ ಶುಭಾಶಯಗಳು ಎಂದು ಡಿ ಬಾಸ್(D boss) ತಮ್ಮ instagram ಹಾಗೂ facebook ಖಾತೆಯಲ್ಲಿ ಪೋಸ್ಟ್ಗಳನ್ನು ಶೇರ್ ಮಾಡಿದ್ದಾರೆ. ಅದರಂತೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮರೆಯದೆ ದರ್ಶನವರ ಮನೆಗೆ ತೆರಳಿ ನಟಿ ಸೋನಲ್ ಮಾಂಟೆರೊ(Sonal Monteiro) ಪ್ರೀತಿಯಿಂದ ರಾಖಿ ಕಟ್ಟಿ ಆಶೀರ್ವಾದ ಪಡೆದುಕೊಂಡಿರುವ ವಿಡಿಯೋ ಒಂದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು
“ಹ್ಯಾಪಿ ರಕ್ಷಾ ಬಂಧನ ಮಮತೆಯ ಸೌಗಂಧವಿದು, ಸವಿ ಮನಸುಗಳ ಸಂಭ್ರಮವಿದು, ಅಣ್ಣ ತಂಗಿಯರ ಹಬ್ಬ ಇದು, ಬಿಡಿಸಲಾಗದ ಸಂಬಂಧವಿದು, ನಿಮ್ಮ ಸಂತೋಷವೇ ನನ್ನ ಪ್ರಪಂಚ, ನಿಮ್ಮಿಂದಲೇ ನನ್ನ ಬದುಕು ಇಷ್ಟೊಂದು ಸುಂದರ. ಸದಾ ನಿಮ್ಮ ಖುಷಿಯನ್ನೇ ಬಯಸುತ್ತಾ ಪ್ರೀತಿಯ ಅಣ್ಣನಿಗೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು” ಎಂಬ ಪೋಸ್ಟ್ ಶೇರ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ(Social Media) ಬಾರಿ ವೈರಲಾಗುತ್ತಿದ್ದು ನೆಟ್ಟಿಗರ ಆಕರ್ಷಣೆಗೆ ಗುಡಿಯಾಗಿದೆ.
ಇದನ್ನೂ ಓದಿ ಸಾಂಪ್ರದಾಯಿಕ ಉಡುಗೆಯಲ್ಲಿ ತಂಗಿ ಮತ್ತು ತಾಯಿಯೊಂದಿಗೆ ಫೋಟೋಗೆ ಪೋಸ್ ನೀಡಿದ ಸಪ್ತಮಿ ಗೌಡ!