ಕ್ರಾಂತಿ ಸಿನಿಮಾದ ನಂತ ಪ್ಯಾನ್ ಇಂಡಿಯನ್ ಸಿನಿಮಾ ಮಾಡಲು ರೆಡಿಯಾದ ಡಿ ಬಾಸ್. ಡಿ ಬಾಸ್ ಅವರ ಪ್ಯಾನ್ ಇಂಡಿಯನ್ ಸಿನಿಮಾ ಮಾಹಿತಿ ಇಲ್ಲಿದೆ ನೋಡಿ

ಇತ್ತೀಚೆಗೆ ಅದರಲ್ಲೂ ಕೆಜಿಎಫ್ ಚಿತ್ರದ ನಂತರ ಕನ್ನಡ ಸಿನಿಮಾರಂಗದಲ್ಲಿ ದೊಡ್ಡ ಬದಲಾವಣೆಯಾಗಿದೆ. ಭಾಷೆಗಳ ತಾರತಮ್ಯವಿಲ್ಲದೆ ಎಲ್ಲಾ ಭಾಷೆಗಳಲ್ಲೂ ಸಿನಿಮಾಗಳು ಬಿಡುಗಡೆಯಾಗಬೇಕೆಂಬ ತತ್ತ್ವ ಹುಟ್ಟಿಕೊಂಡಿದೆ. ಬಾಹುಬಲಿ ಮತ್ತು ಕೆಜಿಎಫ್ ಚಿತ್ರ ಹಿಟ್ ಆಗುತ್ತಿದ್ದಂತೆ ದಕ್ಷಿಣ ಭಾರತದ ದೊಡ್ಡ ದೊಡ್ಡ ಸ್ಟಾರ್ ನಟರೆಲ್ಲರೂ ಪ್ಯಾನ್ ಇಂಡಿಯಾ ಸಿನಿಮಾ ಮಾಡೋಕೆ ಮುಂದಾಗ್ತಾ ಇದ್ದಾರೆ. ನಮ್ಮ ಕರ್ನಾಟಕದಲ್ಲಿ ಯಶ್ ಅವರು ಈಗಾಗಲೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಯಶ್ ಅವರ ಹಿಂದೆ ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಶ್ ಮತ್ತು ಸುದೀಪ್ ಅವರು ಪ್ಯಾನ್ ಇಂಡಿಯನ್ ಸಿನಿಮಾಗಳಲ್ಲಿ ನರ್ತಿಸುತ್ತಿದ್ದಂತೆಯೇ ದರ್ಶನ್ ಅವರ ಅಭಿಮಾನಿಗಳಲ್ಲಿ ದರ್ಶನ್ ಅವರು ಯಾವಾಗ ಪ್ಯಾನ್ ಇಂಡಿಯನ್ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿತ್ತು ಇದೀಗ ದರ್ಶನ್ ಅಭಿಮಾನಿಗಳಿಗೆ ಖುಷಿ ಸುದ್ದಿ ಸಿಕ್ಕಿದೆ. ಹೌದು ಗೆಳೆಯರೇ ಡಿ ಬಾಸ್ ಅವರು ಇದೀಗ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.

ಸದ್ಯಕ್ಕೆ ದರ್ಶನ್ ಅವರು ಕ್ರಾಂತಿ ಎಂಬ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಕ್ರಾಂತಿ ಸಿನಿಮಾದ ಚಿತ್ರೀಕರಣ ಮುಗಿಯುತ್ತೆ ಇದಾದ ನಂತರ ತಕ್ಷಣವೇ ದರ್ಶನ್ ಅವರು ತಮ್ಮ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಕೆಲಸವನ್ನು ಪ್ರಾರಂಭಿಸಲಿದ್ದಾರೆ. ಹಾಗಾದರೆ ದರ್ಶನ್ ಅವರ ಈ ಪ್ಯಾನ್ ಇಂಡಿಯಾ ಸಿನಿಮಾದ ಹೆಸರೇನು ನಿರ್ದೇಶಕರು ಯಾರು ಮತ್ತು ಸಿನೆಮಾ ಶೂಟಿಂಗ್ ಯಾವಾಗ ಶುರುವಾಗುತ್ತೆ ಎಂಬುದರ ಮಾಹಿತಿ ತಿಳಿಸಿಕೊಡುತ್ತೇವೆ ಮುಂದೆ ಓದಿ.

ದರ್ಶನ್ ಅವರ ಮುಂದಿನ ಪ್ಯಾನ್ ಇಂಡಿಯಾ ಸಿನೆಮಾದ ನಿರ್ದೇಶಕರು ದುನಿಯಾ ಮತ್ತು ಟಗರು ಸಿನಿಮಾ ಖ್ಯಾತಿಯ ಸುಕ್ಕಾ ಸೂರಿ. ಸೂರಿಯವರ ಜೊತೆ ಕೈಜೋಡಿಸೋಕೆ ಡಿ ಬಾಸ್ ಅವರು ಗ್ರೀನ್ ಸಿಗ್ನಲ್ ನೀಡಿದ್ದಾ. ಡಿ ಬಾಸ್ ಮತ್ತು ಸೂರಿ ಅವರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಹೊಸ ಚಿತ್ರಕ್ಕೆ ಕದನ ವೀರ ಎಂಬ ನಾಮಕರಣ ಮಾಡಲಾಗಿದೆ. ದರ್ಶನ್ ಅವರಿಗೆ ಈ ಚಿತ್ರದ ಸ್ಕ್ರಿಪ್ಟ್ ತುಂಬಾ ಇಷ್ಟವಾಗಿದೆಯಂತೆ. ಕ್ರಾಂತಿ ಸಿನಿಮಾ ಮುಗಿಯುತ್ತಿದ್ದಂತೆ ಕದನ ವೀರ ಚಿತ್ರದ ಶೂಟಿಂಗ್ ಶುರುವಾಗುವ ಲಕ್ಷಣಗಳಿವೆ.

ಕದನ ವೀರ ಎಂಬ ಈ ಪ್ಯಾನ್ ಇಂಡಿಯನ್ ಚಿತ್ರ ದರ್ಶನ್ ಅವರ 56 ನೇ ಚಿತ್ರವಾಗಲಿದೆಯೆಂಬ ಸುದ್ದಿ ಹರಿದಾಡುತ್ತಿದೆ. ಆದರೆ ತರುಣ್ ಸುಧೀರ್ ಅವರು ಈಗಾಗಲೇ ದರ್ಶನ್ ಅವರ ಜೊತೆ 56 ನೇ ಚಿತ್ರ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ರಾಜಾ ಮದಕರಿ ನಾಯಕ ಎಂಬ ಐತಿಹಾಸಿಕ ಚಿತ್ರದಲ್ಲಿ ಕೂಡ ದರ್ಶನ್ ಅವರು ಅಭಿನಯ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ದರ್ಶನ್ ಅವರು ತರುಣ್ ಸುಧೀರ್ ಅವರ ಜೊತೆ ಕೈಜೋಡಿಸುತ್ತಾರೋ ಅಥವಾ ದುನಿಯಾ ಸೂರಿಯವರ ಜೊತೆ ಕೈ ಜೋಡಿಸುತ್ತಾರೋ ಎಂದು ಕಾದು ನೋಡಬೇಕಾಗಿದೆ. ಆದರೆ ಒಟ್ಟಿನಲ್ಲಿ ದರ್ಶನ್ ಮತ್ತು ಸುಕ್ಕಾ ಸೂರಿ ಅವರ ಜುಗಲ್ ಬಂದಿಯಲ್ಲಿ ಮೂಡಿ ಬರಲಿರುವ ಹೊಸ ಪ್ಯಾನ್ ಇಂಡಿಯನ್ ಚಿತ್ರ ಕ್ಕಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

Leave a Comment