Chiranjeevi ಅಭಿಷೇಕ್ ಅಂಬರೀಶ್(Abhishek Ambareesh) ಅವರ ರಿಸೆಪ್ಶನ್ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ದೊಡ್ಡ ಮಟ್ಟದ ಗಣ್ಯರು ಕೂಡ ಆಗಮಿಸಿದ್ದರು ಎನ್ನುವುದನ್ನು ನೀವೆಲ್ಲರೂ ಮಾಧ್ಯಮಗಳಲ್ಲಿ ತೋರಿಸಿರುವಂತಹ ವಿಡಿಯೋ ಹಾಗೂ ಫೋಟೋ ಕ್ಲಿಪ್ ಮುಖಾಂತರ ನೋಡಿರಬಹುದು. ಇದಲ್ಲದಕ್ಕೂ ಕಾರಣ ಅಂಬರೀಶ್(Ambareesh) ಎನ್ನುವಂತಹ ಒಂದು ಹೆಸರು ಎನ್ನಬಹುದಾಗಿದೆ.
ಹೌದು ಬಾಲಿವುಡ್ ಚಿತ್ರರಂಗದಿಂದ ಹಿಡಿದು ತಮಿಳು ತೆಲುಗು ಚಿತ್ರರಂಗಗಳವರೆಗೂ ಕೂಡ ಅಂಬರೀಶ್ ಅವರ ಸ್ನೇಹಿತರ ಬಳಗ ಸಾಕಷ್ಟು ಸೂಪರ್ ಸ್ಟಾರ್ಗಳಲ್ಲಿ ಕೂಡ ಇದ್ದು ಅವರೆಲ್ಲರೂ ಕೂಡ ಅಂಬರೀಶ್ ಅವರ ಮೇಲಿನ ಗೌರವ ಹಾಗೂ ಪ್ರೀತಿಗಾಗಿ ಅಭಿಷೇಕ್ ಅಂಬರೀಶ್ ಅವರ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇದನ್ನು ಸ್ವತಹ ಅಭಿಷೇಕ್ ಅಂಬರೀಶ್ ಅವರೇ ಹೇಳಿದ್ದಾರೆ.
ಹೌದು ಗೆಳೆಯರೇ ಇನ್ನು ಈ ರಿಸೆಪ್ಶನ್ ಕಾರ್ಯಕ್ರಮಕ್ಕೆ ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಆಗಿರುವಂತಹ ಚಿರಂಜೀವಿ(Megastar Chiranjeevi) ಅವರು ಕೂಡ ಆಗಮಿಸಿದ್ದು ಸಾಕಷ್ಟು ವಿಶೇಷವಾಗಿತ್ತು. ಅಂಬರೀಶ್ ಅವರ ಅತ್ಯಂತ ಆಪ್ತಮಿತ್ರರಲ್ಲಿ ಮೆಗಾಸ್ಟಾರ್ ಚಿರಂಜೀವಿ ಕೂಡ ಒಬ್ಬರಾಗಿದ್ದು ಅವರು ಕೂಡ ಈ ರಿಸೆಪ್ಶನ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಇನ್ನು ವೇದಿಕೆ ಮೇಲೆ ಬಂದಂತಹ ಮೆಗಾಸ್ಟಾರ್ ಚಿರಂಜೀವಿ ಅವರು ತಮ್ಮ ಪತ್ನಿಯ ಜೊತೆಗೆ ಬಂದು ನವ ವಧು ವರರನ್ನು ಆಶೀರ್ವದಿಸಿ ಅಭಿಷೇಕ್ ಅಂಬರೀಶ್ ಅವರನ್ನು ನೋಡಿ ಹೇಳಿದ್ದರಂತೆ. ಇದು ಹೊಸ ಜೋಡಿಗಳ ಮುಖದಲ್ಲಿ ಸಂತೋಷ ಮೂಡಿಸಲು ಕಾರಣವಾಗಿತ್ತು ಎಂದರೆ ತಪ್ಪಾಗಲಾರದು.