Chandan Kavitha: ಪತ್ನಿ ಹಾಗೂ ತಾಯಂದಿರ ಜೊತೆಗೆ ದುಬೈಗೆ ಹರಿದ ಕಿರುತೆರೆ ನಟ ಚಂದನ್ ಕುಮಾರ್!

Chandan Kavitha: ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಒಂದಾದಂತಹ ಜೋಡಿ ನಿಜ ಜೀವನದಲ್ಲಿಯೂ ಒಟ್ಟಿಗೆ ಸಮಯ ಕಳೆಯಬೇಕೆಂದು ನಿರ್ಧರಿಸಿ ಹಲವಾರು ವರ್ಷಗಳ ಕಾಲ ಪ್ರೀತಿಸಿ ಆನಂತರ ಮನೆಯವರೆಲ್ಲರ ಒಪ್ಪಿಗೆ ಪಡೆದು ಗುರು ಹಿರಿಯರ ಸಾಕ್ಷಿಯಾಗಿ ಸಪ್ತಪದಿ ತುಳಿದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹಲವು ವರ್ಷಗಳಾದರು ಇಂದಿಗೂ ನವಜೋಡಿಗಳಂತೆ ವಿದೇಶ ಪ್ರವಾಸವನ್ನು ಮಾಡುತ್ತಲೇ ಇರುವ ಚಂದನ್ ಹಾಗೂ ಕವಿತಾ ಗೌಡ(Chandan Kavitha) ಆಗಾಗ ತಮ್ಮ ಕ್ಯೂಟ್

ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ. ಸದ್ಯ ಚಂದನ್ ತಮ್ಮ ಪತ್ನಿ ಹಾಗು ತಾಯಿಯರೊಂದಿಗೆ ದುಬೈಗೆ ಹಾರಿರುವ ಫೋಟೋಗಳನ್ನು ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಕಳೆದ ಬಾರಿ ಹೆಂಡತಿಯ ಹುಟ್ಟುಹಬ್ಬವನ್ನು ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಬಹಳ ಅದ್ದೂರಿಯಾಗಿ ಆಚರಿಸಿದ್ದ ಚಂದನ್ ಈ ಬಾರಿ ತಮ್ಮ ಇಬ್ಬರು ತಾಯಿಯರನ್ನು ಕರೆದುಕೊಂಡು ಪತ್ನಿಯ ಬರ್ತಡೇಯನ್ನು ದುಬೈನಲ್ಲಿ ಮತ್ತಷ್ಟು ಅದ್ದೂರಿಯಾಗಿ ಆಚರಿಸಿದ್ದಾರೆ.

ಹೌದು ಗೆಳೆಯರೇ 26 ನೇ ತಾರೀಕು ಜುಲೈ ತಮ್ಮ 31ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಬಹಳನೇ ಅದ್ದೂರಿಯಾಗಿ ಕವಿತ ಗೌಡ ಮಾಡಿಕೊಂಡಿದ್ದು, ಆ ಕೆಲ ಫೋಟೋಗಳನ್ನು ಅಭಿಮಾನಿಗಳು ಒಟ್ಟಿಗೆ ಶೇರ್ ಮಾಡಿದ್ದಾರೆ. ಮದುವೆಯಾದ ಬಳಿಕ ನಟನೆಗೆ ಸಂಪೂರ್ಣ ಗುಡ್ ಬೈ ಹೇಳಿರುವ ಕವಿತ ಗೌಡ ತಮ್ಮ ವೈಯಕ್ತಿಕ ಬದುಕಿನತ್ತ ಗಮನಹರಿಸುತ್ತ ಹಾಯಾಗಿದ್ದು, ಚಂದನ್ ಕೂಡ ತೆಲುಗಿನ ಕಿರುತೆರೆಯಲ್ಲಿ ಅಭಿನಯಿಸುತ್ತ ವಿಶೇಷ ಹೆಸರನ್ನು ಸಂಪಾದಿಸಿದ್ದರು.

ಆದರೆ ಕೆಲ ಕಿರಿಕಿರಿ ಉಂಟಾದ ಕಾರಣ ಸೀರಿಯಲ್ ತೊರೆದು ಪರಭಾಷೆಯ ಧಾರಾವಾಹಿಗಳಲ್ಲಿ ಕೆಲಸ ಮಾಡುವುದಿಲ್ಲ ಎಂದಿದ್ದರು. ಸದ್ಯ ನಟನ ಬದುಕಿನತ್ತ ಅಂತರ ಕಾಯ್ದುಕೊಂಡಿರುವ ಚಂದನ್ ಉದ್ಯಮಕ್ಕೆ ಕಾಲಿಟ್ಟಿದ್ದು, ಬೆಂಗಳೂರು ಹಾಗೂ ಮೈಸೂರು ಹೆದ್ದಾರಿಯಲ್ಲಿ ಹಾಗೂ ವಿಜಯನಗರದಲ್ಲಿಯೂ ಮಂಡಿಪೇಟೆ ಪಲಾವ್ನ ಬ್ರಾಂಚ್ ಪ್ರಾರಂಭ ಮಾಡಿದ್ದಾರೆ. ಇದಲ್ಲದೆ ಪ್ರೋಟೀನ್ ಬಾರ್(Protein Bar) ಎಂಬ ಕೆಫೆಯನ್ನು ಚಂದನ್ ಹಾಗೂ ಕವಿತಾ ಗೌಡ(Kavitha Gowda) ಹೊಂದಿದ್ದು ನಟರಾಗಿದ್ದಂತಹ ಕಲಾವಿದರು ಸದ್ಯ ಉದ್ಯಮಿಗಳಾಗಿ ಯಶಸ್ಸನ್ನು ಗಳಿಸುತ್ತಿದ್ದಾರೆ.

ಹೀಗೆ ತಮ್ಮ ಕೆಲಸಗಳ ನಡುವೆ ಮನೆಯವರಿಗೋಸ್ಕರ ಬಿಡುವು ಮಾಡಿಕೊಂಡು ತಮ್ಮ ತಾಯಿ ಹಾಗೂ ಕವಿತಾ ಗೌಡ ಅವರ ತಾಯಿಯನ್ನು ಕರೆದುಕೊಂಡು ದುಬೈಗೆ ಹಾರಿರುವ ಚಂದನ್ ಕವಿತಾ ಜೋಡಿ ತಮ್ಮ ಕ್ಯೂಟ್ ಫೋಟೋಗಳ ಮೂಲಕ ನೆಟ್ಟಿಗರ ಮನಸ್ಸನ್ನು ಗೆದ್ದಿದ್ದಾರೆ. ಇದನ್ನೂ ಓದಿ Latha Rao: ಅವಕಾಶಕ್ಕಾಗಿ ಮಂಚ ಹಂಚಿಕೊಳ್ಳುವಂತೆ ಒತ್ತಾಯ! ಚಿತ್ರರಂಗದ ಮತ್ತೊಂದು ಕರಾಳ ಸತ್ಯ ಬಯಲು ಮಾಡಿದ ಲತಾ ರಾವ್

Leave a Comment