Cauvery water dispute: ಕಾವೇರಿಯನ್ನು ರಕ್ಷಿಸಲು ಒಂದಾದ ಸ್ಯಾಂಡಲ್ವುಡ್ ಕಲಾವಿದರು!

cauvery water dispute: ಸ್ನೇಹಿತರೆ, ರೈತರ ಜೀವನಾಡಿಯಾಗಿರುವಂತಹ ಕಾವೇರಿಯನ್ನು ತಮಿಳುನಾಡಿಗೆ ಬಿಡದಂತೆ ತಡೆಯುವ ಸಲುವಾಗಿ ನೆನ್ನೆ ಅಖಂಡ ಕರ್ನಾಟಕ ಬಂದ್ ಮಾಡಲಾಗಿತ್ತು. ಈ ಒಂದು ಹೋರಾಟಕ್ಕೆ ಬಹುತೇಕ ಎಲ್ಲಾ ಸಂಘಟನೆಗಳಿಂದ ಬೆಂಬಲ ದೊರಕಿದ್ದು, ಅದರಲ್ಲೂ ನಮ್ಮ ಕನ್ನಡ ಸಿನಿಮಾರಂಗದ ಸ್ಟಾರ್ ಸೆಲೆಬ್ರಿಟಿಗಳು ರಸ್ತೆಗಿಳಿದು ಘೋಷಣೆ ಕೂಗುತ್ತಾ ಕಾವೇರಿಯನ್ನು(Cauvery) ಬಿಟ್ಟುಕೊಡುವ ಮಾತೇ ಇಲ್ಲ ಎಂದು ಒಗ್ಗಟ್ಟಿನಲ್ಲಿ ಹೋರಾಟ ನಡೆಸಿದರು.

ಈ ಒಂದು ಹೋರಾಟಕ್ಕೆ ಕನ್ನಡ ಸಿನಿಮಾರಂಗ(Kannada Film industry) ಕರೆ ನೀಡಿದ ಬೆನ್ನಲ್ಲೇ ಶಿವರಾಜಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಹಿರಿಯ ನಟ ಶ್ರೀನಾಥ್, ಧ್ರುವ ಸರ್ಜಾ, ಶ್ರೀಮುರಳಿ, ವಿಜಯ ರಾಘವೇಂದ್ರ, ಚಿಕ್ಕಣ್ಣ, ಪ್ರಥಮ್, ಹಂಸಲೇಖ, ಪೂಜಾ ಗಾಂಧಿ, ಶ್ರುತಿ, ಭವನ, ಅನುಪ್ರಭಾಕರ್, ರಘು ಮುಖರ್ಜಿ, ಉಮಾಶ್ರೀ ಸೇರಿದಂತೆ ಮುಂತಾದ ನಟ ನಟಿಯರು ರಸ್ತೆಗಳಿದು ಪ್ರತಿಭಟನೆ ಮಾಡುವ ಮೂಲಕ ಕಾವೇರಿಯನ್ನು ರಕ್ಷಿಸಲು ಕೈಜೋಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದಂತಹ ಹಿರಿಯ ನಟ ಶ್ರೀನಾಥ್(Srinath) ಅವರು ” ನಮಗೆ ನೀರಿಲ್ಲ ತಮಿಳುನಾಡಿಗೆ ನೀರು ಬಿಡುವುದು ಹೇಗೆ? ರೈತರು ಇಲ್ಲದೆ ಹೋದರೆ ನಾವಿಲ್ಲ. ಆ ರೈತರನ್ನು ಉಳಿಸುವುದಕ್ಕಾಗಿ ಹೋರಾಟ ಮಾಡಬೇಕು ಇವತ್ತು ಕಾವೇರಿ ನದಿ ಉತ್ತರ ಕರ್ನಾಟಕದಲ್ಲಿ ಇಲ್ಲದೆ ಹೋದರು ತುಂಬು ಮನಸ್ಸಿನಿಂದ ಈ ಹೋರಾಟಕ್ಕೆ ಅವರೆಲ್ಲರೂ ಸಾಥ್ ನೀಡಿದ್ದಾರೆ. ಈ ಸಮಯದಲ್ಲಿ ಡಾ. ರಾಜಕುಮಾರ್ ಅವರನ್ನು ಸ್ಮರಿಸುತ್ತೇನೆ. ಅಂದು ಕಾವೇರಿ ಸಮಸ್ಯೆ ಇದ್ದಾಗ ಮುನ್ನುಗ್ಗಿ ಡಾಕ್ಟರ್ ರಾಜ್ ಸಾತ್ ನೀಡಿದರು” ಎಂದರು.

ಅದರಂತೆ ನಟಿ ಶ್ರುತಿ(Shruthi) ಕೂಡ ಮಾತನಾಡುತ್ತಾ ಕಾವೇರಿ ನಮ್ಮವಳು ನಮ್ಮ ರೈತರ ಕಷ್ಟಕ್ಕೆ ನಾವೆಲ್ಲ ಹೋರಾಡೋಣ. ನಾವೆಲ್ಲ ಕನ್ನಡಿಗರು ಕನ್ನಡಕ್ಕಾಗಿ ಬದುಕಿದ್ದೇವೆ ನಾವೆಲ್ಲರೂ ಪ್ರಕೃತಿಯನ್ನು ಜವಾಬ್ದಾರಿಯಿಂದ ನೋಡಿಕೊಂಡರೆ ಈ ಸಮಸ್ಯೆ ಬರುವುದಿಲ್ಲ. ಇವತ್ತಿನ ಪ್ರತಿಭಟನೆ ಒಗ್ಗಟ್ಟನ್ನು ಪ್ರತಿಭಟನೆ, ರಾಜ್ಯದಲ್ಲಿ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಲೇಬೇಕು ಎಂದು ಕೇಳಿಕೊಂಡರು.

ಹೀಗೆ ಶಿವರಾಜಕುಮಾರ್, ಪೂಜಾ ಗಾಂಧಿ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಧ್ರುವ ಸರ್ಜಾ ಸೇರಿದಂತೆ ಮುಂತಾದ ಕಲಾವಿದರು ಮಾಧ್ಯಮದೊಟ್ಟಿಗೆ ಮಾತನಾಡಿ ಕಾವೇರಿ ಹೋರಾಟಕ್ಕಾಗಿ ಯಾವ ನಿಲುವನ್ನು ತೆಗೆದುಕೊಂಡರೆ, ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ ಆಕೆಯ ಜೊತೆ ನಾನು ರೋ-ಮ್ಯಾನ್ಸ್ ಮಾಡಲಾರೆ, ಬೇರೆ ಹೀರೋಯಿನ್ ಬೇಕು ಎಂದು ಕರ್ನಾಟಕದ ನಟಿಯನ್ನು ರಿಜೆಕ್ಟ್ ಮಾಡಿದ ವಿಜಯ್ ಸೇತುಪತಿ! ಅಷ್ಟಕ್ಕೂ ಆ ನಟಿ ಯಾರು ಗೊತ್ತೇ..

Leave a Comment