Avinash malavika: ಕನ್ನಡ ಸಿನಿಮಾ ರಂಗದ ಪ್ರಖ್ಯಾತ ಪೋಷಕ ನಟರಾದ ಅವಿನಾಶ್ ಮತ್ತು ಮಾಳವಿಕಾ ಮದುವೆ ಫೋಟೋಸ್!

Avinash malavika marriage photos: ತಮ್ಮ ಅಮೋಘ ಅಭಿನಯ ಹಾಗೂ ಮಾತುಗಾರಿಕೆಯ ಶೈಲಿಯಿಂದಲೇ ತಮಿಳು ಹಾಗೂ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ಸಿನಿಮಾ ಇಂಡಸ್ಟ್ರಿಯ ಕ್ಯೂಟ್ ಜೋಡಿಹಕ್ಕಿಗಳಾದ ಅವಿನಾಶ್ ಮತ್ತು ಮಾಳವಿಕಾ (Avinash & Malavika) ಪ್ರತಿಯೊಬ್ಬ ಸಿನಿ ಪ್ರೇಕ್ಷಕರಿಗೂ ಚಿರಪರಿಚಿತರು. ಹಲವಾರು ದಶಕಗಳಿಂದ ಪೋಷಕ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್(entertainment) ನೀಡುತ್ತಿರುವಂತಹ ಈ ಕಲಾವಿದರು ಒಬ್ಬರ ಸಿನಿಮಾ ಕೆಲಸಗಳಿಗೆ ಮತ್ತೊಬ್ಬರು ಪ್ರೋತ್ಸಾಹಿಸುತ್ತಾ ಇತರರಿಗೆ ಆದರ್ಶವಾಗುವಂತೆ ಬದುಕುತ್ತಿದ್ದಾರೆ.

ಹೌದು ಸ್ನೇಹಿತರೆ ಮಾಯಾಮೃಗ (Mayamruga) ಎಂಬ ಧಾರಾವಾಹಿಯ ಮೂಲಕ ಒಂದಾದಂತಹ ಅವಿನಾಶ್ ಮತ್ತು ಮಾಳವಿಕ ನಡುವೆ ಅದ್ಭುತವಾದ ಬಾಂಧವ್ಯ ಬೆಸೆದುಕೊಂಡಿರುತ್ತದೆ. ಹೀಗೆ ಒಬ್ಬರ ಮನೆಗೆ ಮತ್ತೊಬ್ಬರು ಹೋಗಿ ಬರುವಷ್ಟು ಸಲಗೆ ಸಹ ಮೂಡಿತ್ತು. ಹೀಗೊಂದು ದಿನ ಅವಿನಾಶ್ ಅವರು ಮಾಳವಿಕಾ ಅವರನ್ನು ನೋಡುವ ಸಲುವಾಗಿ ಆಕೆಯ ಮನೆಗೆ ಹೋಗಿದ್ದಾಗ ಅವರ ತಾಯಿ ಸಾವಿತ್ರಿ ಅವಿನಾಶ್ ಅವರನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ನನ್ನ ಮಗಳನ್ನು ಮದುವೆಯಾಗುತ್ತೀರಾ ಎಂದು ಕೇಳುತ್ತಾರೆ.

ಏನೆಂದು ಉತ್ತರಿಸಬೇಕೆಂಬುದು ಅಂದು ಅವಿನಾಶ್ ಅವರಿಗೆ ತಿಳಿಯದೆ ಅಲ್ಲಿಂದ ಹೊರಟು ಮನೆಗೆ ಬಂದುಬಿಡುತ್ತಾರೆ. ಇದಾದ ಕೆಲ ದಿನಗಳ ನಂತರ ಅವಿನಾಶ್ ಅವರ ವತಿಯಿಂದ ಗ್ರೀನ್ ಸಿಗ್ನಲ್ ದೊರೆತ ನಂತರ ಮಾಳವಿಕ ಅವರಿಗೂ ಕೂಡ ಅವಿನಾಶ್ ಅವರ ಮೇಲೆ ಮನಸ್ಸು ಇರುವುದು ಗೊತ್ತಾಗುತ್ತದೆ. ಹೀಗೆ ಕೆಲ ತಿಂಗಳುಗಳ ಕಾಲ ಪ್ರೀತಿಸಿ ಆನಂತರ ಗುರು ಹಿರಿಯರ ಸಾಕ್ಷಿಯಾಗಿ ಫೆಬ್ರವರಿ 26 ನೇ ತಾರೀಕು 2001ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ದಂಪತಿಗಳ ಮದುವೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ಹಿರಿಯ ನಟರಾದ ಡಾಕ್ಟರ್ ವಿಷ್ಣುವರ್ಧನ್ ಶಶಿಕುಮಾರ್ ಪ್ರಕಾಶ್ ರೈ ದೇವರಾಜ್ ಹೇಗೆ ಮುಂತಾದ ಸ್ಟಾರ್ ಕಲಾವಿದರು ಆಗಮಿಸಿ ನವ ವಧು ವರರನ್ನು ಹರಸಿ, ಆಶೀರ್ವದಿಸಿದರು. ಹೀಗೆ ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಮಾಳವಿಕಾ(Malavika) ಅವಿನಾಶ್ ಅವರು ನಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆನಿವರ್ಸರಿಯ ಅಂಗವಾಗಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸದ್ಯ ಈ ಫೋಟೋ ನೆಟ್ಟಿಗರು (Netizens) ಗಮನ ಸೆಳೆಯುತ್ತಿದ್ದು, ಬರೋಬ್ಬರಿ 22 ವರ್ಷದ ಹಿಂದಿನ ಫೋಟೋಗಳನ್ನು ಕಣ್ತುಂಬಿಕೊಂಡಂತಹ ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ ಇದನ್ನೂ ಓದಿ ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯ ದಿನಾಚರಣೆಯನ್ನು ಆಚರಿಸಿದ ರಿಷಬ್ ಶೆಟ್ಟಿ!

Leave a Comment