ಸ್ನೇಹಿತರೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸೇರಿದಂತೆ ಸಾಕಷ್ಟು ವೇದಿಕೆಗಳ ಮೇಲೆ ಅವಿನಾಶ್ ಮತ್ತು ಮಾಳವಿಕಾ (Avinash-Malavika) ದಂಪತಿಗಳು ವಿಷ್ಣುವರ್ಧನ್ (Vishnuvardhan) ಅವರ ಗುಣಗಾನ ಮಾಡುವುದನ್ನು ನಾವು ಹಲವಾರು ಬಾರಿ ವೀಕ್ಷಿಸಿರುತ್ತೇವೆ. ಈ ದಂಪತಿಗಳು ಎಲ್ಲೇ ಹೋದರು ವಿಷ್ಣುವರ್ಧನ್ ಅವರ ಕುರಿತಾದ ಮಾತನ್ನು ಹೇಳದೆ ತಮ್ಮ ಭಾಷಣವನ್ನು ಮುಗಿಸುವುದಿಲ್ಲ.
ಅಷ್ಟರಮಟ್ಟಿಗೆ ಸಾಹಸ ಸಿಂಹ ವಿಷ್ಣು ದಾದಾನಿಗೆ ಇವರಿಬ್ಬರ ಜೀವನದಲ್ಲಿ ಮುಖ್ಯ ಪ್ರಾಧಾನ್ಯತೆ ಇದೆ. ಹೀಗಿರುವಾಗ ಮದುವೆಯಾದ ಕೆಲ ವರ್ಷಗಳಲ್ಲೇ ಸೈಟ್ ಒಂದನ್ನು ಕರಗಿಸಿ ಮನೆ ಕಟ್ಟುವ ಯೋಜನೆ ಹಾಕಿದ ಮಾಳವಿಕಾ ಹಾಗೂ ಅವಿನಾಶ್ ದಂಪತಿಗಳು ವಿಷ್ಣುವರ್ಧನ್ ಅವರು ತಮ್ಮ ಮನೆಗೆ ಬಂದು ಪೂಜೆ ಮಾಡಬೇಕು ಎಂದು ಬಯಸುತ್ತಾರೆ.
ಮನೆಗೆ ಹೋಗಿ ಆಹ್ವಾನ ನೀಡಿದ ಬೆನ್ನಲ್ಲೇ ವಿಷ್ಣುವರ್ಧನ್ ತಮ್ಮ ಸಿನಿ ಕೆಲಸಗಳ ನಡುವೆ ಹಾಜರಾಗಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಆ ಕೆಲ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಸ್ಟಾರ್ ಸೆಲೆಬ್ರಿಟಿಯಾದರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಹಳದಿ ಬಣ್ಣದ ಟೀ ಶರ್ಟ್ ಹಾಗೂ ಪ್ಯಾಂಟ್ ಒಂದನ್ನು ಧರಿಸಿ ವಿಷ್ಣು ದಾದಾ ಕೆಸರಿನ ಮಣ್ಣಿನೊಳಗಿಳಿದು ಅವಿನಾಶ್ ಹಾಗೂ ಮಾಳವಿಕ ದಂಪತಿಗಳ ಆಸೆಯನ್ನು ಈಡೇರಿಸಿದ್ದಾರೆ.
ಅಲ್ಲದೆ ತಮ್ಮ ಅಮೃತ ಹಸ್ತದಿಂದ ಭೂಮಿಯನ್ನು ಅರಿದು ಗುದ್ದಲಿ ಪೂಜೆಯನ್ನು ಮಾಡಿ ಮನೆಗೆ ಹಾಗೂ ಮನೆಯಲ್ಲಿ ವಾಸಿಸುವಂತಹ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರಂತೆ. ಆ ಸುಮಧುರ ಕ್ಷಣದ ಫೋಟೋವನ್ನು ನಟಿ ಮಾಳವಿಕಾ ಅವಿನಾಶ್ ತಮ್ಮ (instagram) ಖಾತೆಯಲ್ಲಿ ಹಂಚಿಕೊಂಡಿದ್ದು ವಿಷ್ಣು ದಾದಾ ಅವರ ಅಮೃತ ಹಸ್ತದಿಂದ ಗುದ್ದಲಿ ಪೂಜೆ ನೆರವೇರಿದ ಈ ಮನೆಯಲ್ಲಿ ನಾವು 15 ವರ್ಷಗಳಿಂದ ಆರಾಮದಾಯಕವಾಗಿ ಜೀವನ ನಡೆಸುತ್ತಿದ್ದೇವೆ.
ಎಂಬಂತ ಕ್ಯಾಪ್ಷನ್ ಬರೆದು ಆ ಕೆಲ ಫೋಟೋಗಳನ್ನು ಅಭಿಮಾನಿಗಳು ಒಟ್ಟಿಗೆ ಹಂಚಿಕೊಂಡಿದ್ದಾರೆ. ಈ ಫೋಟೋಸ್ಗೆ ಸೋಶಿಯಲ್ ಮೀಡಿಯಾದಲ್ಲಿ(social media) ಬಾರಿ ವೈರಲ್ ಆಗುತ್ತಿದ್ದು ವಿಷ್ಣುವರ್ಧನ್(Vishnuvardhan) ಅವರನ್ನು ಮತ್ತೊಂದು ವಿಶೇಷ ಚಿತ್ರಣದ ಮೂಲಕ ಕಂಡು ತುಂಬಿಕೊಂಡ ನೆಟ್ಟಿಗರು ಲೈಕ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ Rishab Shetty: ಪಾನ್ ಇಂಡಿಯಾ ಸ್ಟಾರ್ ನಟ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರ ಲೇಟೆಸ್ಟ್ ಫೋಟೋಸ್!