ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಫೋಟೋ ವೈರಲ್ ಹೊಸದಾದ ಜರ್ನಿಯನ್ನು ಪ್ರಾರಂಭಿಸಿದ ಅಶ್ವಿನಿ

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪುನೀತ್ ರಾಜ್ ಕುಮಾರ್ ಅವರ ಹಾಗೆ ತುಂಬಾ ಸರಳ ಹಾಗೂ ಸೃಜನಶೀಲ ವ್ಯಕ್ತಿತ್ವವನ್ನು ಹೊಂದಿರುವ ಮಹಿಳೆ. ನಟಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಅಶ್ವಿನಿಯವರಿಗೆ ಆಡಂಬರ ಮತ್ತು ಐಷಾರಾಮಿ ಜೀವನದ ಮೇಲೆ ಆಸಕ್ತಿ ಇಲ್ಲ. ಅಶ್ವಿನಿ ಅವರು ಧರಿಸುವ ಉಡುಪು ಗಳನ್ನು ನೋಡಿದ್ರೆ ಗೊತ್ತಾಗುತ್ತೆ ಇವರು ತುಂಬಾ ಸರಳ ಜೀವನವನ್ನು ಇಷ್ಟಪಡುತ್ತಾರೆ ಅನ್ನೋದು. ಈ ಗುಣ ಅಪ್ಪು ಮತ್ತು ಅಶ್ವಿನಿ ಇಬ್ಬರಲ್ಲೂ ಕಾಮನ್ ಆಗಿತ್ತು.

ಅಶ್ವಿನಿ ಅವರು ಪುನೀತ್ ಅವರನ್ನು ಕಳೆದುಕೊಂಡು 8 ತಿಂಗಳುಗಳು ಕಳೆದಿವೆ. ಈ ಒಂದು ಶಾಕ್ ನಿಂದ ಮತ್ತು ಆಘಾತದಿಂದ ಹೊರಬರಲು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಹಲವಾರು ತಿಂಗಳುಗಳು ಬೇಕಾಯಿತು. ಆದರೆ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಏನೇ ಆದರೂ ಅಶ್ವಿನಿ ಅವರು ಅಪ್ಪು ಅವರನ್ನು ಮರೆತು ಹೊಸದಾದ ಜೀವನವನ್ನು ಪ್ರಾರಂಭ ಮಾಡಲೇಬೇಕು. ಇದೀಗ ಅಶ್ವಿನಿಯವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಹೊಸದಾದ ಕಾರ್ಯವನ್ನು ಕೈಗೆಟ್ಟುಕೊಳ್ಳುವ ಮೂಲಕ ಹೊಸ ಜೀವನವನ್ನು ಪ್ರಾರಂಭಿಸಲಿಕ್ಕೆ ಹೆಜ್ಜೆ ಇಟ್ಟಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ಬದುಕಿದ್ದಾಗ ಹಲವಾರು ಯುವ ಯುವ ಪ್ರತಿಭೆಗಳನ್ನು ಬೆಳೆಸುತ್ತಿದ್ದರು. ತಮ್ಮದೇ ಆದ ಸಂಸ್ಥೆಯನ್ನು ಪ್ರಾರಂಭಿಸಿ ಯುವ ಪ್ರತಿಭೆಗಳಿಗೆ ವೇದಿಕೆಯನ್ನು ಮಾಡಿಕೊಟ್ಟಿದ್ದರು. ಯುವ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಟ್ಟು ಚಿತ್ರರಂಗವನ್ನು ದೊಡ್ಡ ಮಟ್ಟಕ್ಕೆ ಬೆಳೆಸಬೇಕೆನ್ನುವುದು ಪುನೀತ್ ಅವರ ಆಸೆಯಾಗಿತ್ತು. ಈ ಆಸೆಯನ್ನು ಪುನೀತ್ ಅವರು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ ಇದೀಗ ಪುನೀತ್ ಅವರ ಮಹದಾಸೆ ಅಶ್ವಿನಿ ಪುನೀತ್ ನೆರವೇರಿಸಲು ಹೊರಟಿದ್ದಾರೆ.

ಹೌದು ಪುನೀತ್ ರಾಜ್ ಕುಮಾರ್ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದು ಪಿಆರ್ ಕೆ ಸಂಸ್ಥೆ ಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇನ್ಮೇಲೆ ಮೊದಲಿನಂತೆ ಪ್ರತಿವರ್ಷ ಪಿ ಆರ್ ಕೆ ಸಂಸ್ಥೆಯಿಂದ ಹಲವಾರು ಯುವ ಪ್ರತಿಭೆಗಳು ಹೊರ ಬರುತ್ತಾರೆ. ಮತ್ತು ಪಿ ಆರ್ ಕೆ ಸಂಸ್ಥೆಯಿಂದ ಇನ್ನೂ ಹೊಸ ಹೊಸ ಚಿತ್ರಗಳು ನಿರ್ಮಾಣವಾಗುತ್ತವೆ. ಪಿಆರ್ ಕೆ ಸಂಸ್ಥೆ ಎಲ್ಲಾ ವ್ಯವಹಾರಿಕ ಮತ್ತು ಆರ್ಥಿಕ ಜವಾಬ್ದಾರಿಯನ್ನು ಅಶ್ವಿನಿಯವರೇ ಹೊತ್ತುಕೊಳ್ಳಲಿದ್ದಾರೆ. ಪ್ರತಿದಿನ ಅಶ್ವಿನಿಯವರು ಗಾಂಧಿನಗರದಲ್ಲಿರುವ ತಮ್ಮ ಆಫೀಸಿಗೆ ಹೋಗಿ ಪ್ರತಿದಿನ ತಪ್ಪದೇ ಕೆಲಸ ಮಾಡುತ್ತಿದ್ದಾರೆ.

ಅಶ್ವಿನಿ ಅವರು ಆಫೀಸಿನಲ್ಲಿ ಲ್ಯಾಪ್ ಟಾಪ್ ಮುಂದಗಡೆ ಕೂತುಕೊಂಡು ಕೆಲಸ ಮಾಡುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಪ್ಪು ಅವರ ಅಭಿಮಾನಿಗಳು ಈ ಫೋಟೋವನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಪಿಆರ್ ಕೆ ಸಂಸ್ಥೆ ನಿರ್ವಹಣೆಯ ಹೊಣೆಗಾರಿಕೆ ಹೊತ್ತುಕೊಂಡಿರುವ ಅಶ್ವಿನಿ ಅವರು ಹಗಲು ರಾತ್ರಿ ಪುನೀತ್ ಅವರ ಕನಸನ್ನು ನನಸು ಮಾಡಲು ದುಡಿಯುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಈ ಕನಸು ನನಸಾಗಿ ಮಾಡಲು ಪುನೀತ್ ಅವರ ಅಭಿಮಾನಿಗಳ ಬೆಂಬಲ ಇದೆ. ಮತ್ತು ಕನ್ನಡಿಗರ ಆಶೀರ್ವಾದ ಇದೆ.

Leave a Comment