ಸ್ನೇಹಿತರೆ, ಕಿರುತೆರೆ ಧಾರವಾಹಿಗಳ ಮೂಲಕ ಕನ್ನಡಿಗರ ಮನೆಮಗಳಾಗಿ ಹೋಗಿದ್ದಂತಹ ಆಶಿತಾ ಚಂದ್ರಪ್ಪ(Ashitha Chandrappa) ಅವರು ಆಗಸ್ಟ್ 29ನೇ ತಾರೀಖಿನಂದು ತಮ್ಮ instagram ಹಾಗೂ facebook ಖಾತೆಗಳಲ್ಲಿ ತಮ್ಮ ಸೀಮಂತ ಶಾಸ್ತ್ರದ ಸಾಲು ಸಾಲು ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳಿಂದ ನಟಿ ಆಶಿತ ಚಂದ್ರಪ್ಪ(Ashitha Chandrappa) ಅವರು ಯಾವುದೇ ಸಿನಿಮಾಗಳಲ್ಲಾಗಲಿ ಸೀರಿಯಲ್ಗಳಾಗಲಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಇದೆಲ್ಲವನ್ನು ಗಮನಿಸುತ್ತಿದ್ದಂತಹ ಅಭಿಮಾನಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆಗಳ ಆಗರಾವನ್ನು ಹರಿಸುತ್ತಿದ್ದರು, ಅವರೆಲ್ಲರಿಗೂ ತಮ್ಮ ಮುದ್ದಾದ ಸೀಮಂತ ಶಾಸ್ತ್ರದ ಫೋಟೋಗಳ ಮೂಲಕ ಅಚ್ಚರಿಯ ಜೊತೆಗೆ ಆನಂದವನ್ನು ನೀಡಿದ್ದಾರೆ. ಹೌದು ಗೆಳೆಯರೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ(Jote Joteyali) ಎಂಬ ಧಾರಾವಾಹಿಯ ಮೂಲಕ ಮನೆ ಮಾತಾಗಿದ್ದಂತಹ ನಟಿ ಆಶಿತಾ ಚಂದ್ರಪ್ಪ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ರಾಧಾ ರಮಣ(Radha Ramana), ನೀಲಿ(Neeli) ಹೇಗೆ ಮುಂತಾದ ಸೀರಿಯಲಾಗಳ ಮೂಲಕ ಜನಪ್ರಿಯತೆ ಪಡೆದಿದ್ದಂತಹ ನಟಿ.
ಇದರ ಜೊತೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರ ನೇತೃತ್ವದಲ್ಲಿ ಮೂಡಿ ಬರುವ ಬಿಗ್ ಬಾಸ್ ಸೀಸನ್ 5ರ ಮನೆ ಒಳಗೆ ಪ್ರವೇಶಿಸಿ ತಮ್ಮ ಅದ್ಭುತ ವ್ಯಕ್ತಿತ್ವದ ಮೂಲಕ ಜನರ ಮಾನಸಿಗೆ ಇನ್ನಷ್ಟು ಹತ್ತಿರವಾಗಿದ್ದಂತಹ ಆಶಿತಾ ಅವರಿಗೆ ದೊಡ್ಮನೆಯಿಂದ ಹೊರಬಂದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವಂತಹ ಅವಕಾಶ ದೊರಕುತ್ತದೆ. ಹೀಗೆ ಸಿನಿ ಬದುಕಿನ ಪಯಣದಲ್ಲಿ ಯಶಸ್ಸನ್ನು ಕಂಡಂತಹ ಈ ನಟಿ ಕಳೆದ ಕೆಲವು ವರ್ಷಗಳ ಹಿಂದೆ ರೋಹನ್ ರಾಘವೇಂದ್ರ(Rohan Raghavendra) ಎಂಬ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇದೀಗ ಕುಟುಂಬಕ್ಕೆ ಮತ್ತೋರ್ವ ಅತಿಥಿಯನ್ನು ಬರಮಾಡಿಕೊಳ್ಳಲು ನಟಿ ಆಶಿತಾ ಚಂದ್ರಪ್ಪ(Ashitha Chandrappa) ತುದಿಗಾಲಿನಲ್ಲಿ ಕಾದಿದ್ದು, ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ಶ್ರೀಮಂತ ಶಾಸ್ತ್ರದ ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಬಾರಿ ವೈರಲ್ ಆಗಿದ್ದಾರೆ.