ಅಪ್ಪು ಶಿವಣ್ಣ ಹಾಗೂ ರಾಜ್ ಕುಟುಂಬದೊಂದಿಗೆ ಅಂಬರೀಷ್ ಇರುವ ಅಪರೂಪದ ದೃಶ್ಯ ನೋಡಿ

ಸರಳತೆಗೆ ಹೆಸರಾಗಿರುವ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಕುಟುಂಬ ಕನ್ನಡ ಚಿತ್ರರಂಗದಲ್ಲಿ ತನ್ನದೆ ಆದ ಛಾಪು ಮೂಡಿಸಿದೆ. ಪುನೀತ್ ಅವರ ಸಾವಿನಿಂದ ರಾಜಕುಮಾರ್ ಕುಟುಂಬದಲ್ಲಿ ಖಾಲಿ ಖಾಲಿ ಎನಿಸುತ್ತದೆ. ಪುನೀತ್ ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕೋಟಿಗಟ್ಟಲೆ ಆಸ್ತಿ ಹೊಂದಿದ್ದರೂ ಡಾಕ್ಟರ್ ರಾಜಕುಮಾರ್ ಅವರ ಕುಟುಂಬದವರು ಬಹಳ ಸರಳತೆಯಿಂದ ಇರುತ್ತಾರೆ. ಅವರ ಸರಳತೆಗೆ ಅಭಿಮಾನಿಗಳಾದವರು ಅದೆಷ್ಟೊ ಜನ. ರಾಘಣ್ಣ, ಪುನೀತ ರಾಜಕುಮಾರ್, ಶಿವಣ್ಣ ಇವರಿಗೆ ಕರ್ನಾಟಕದ ಜನತೆ ಅಪಾರ ಗೌರವವನ್ನು ಕೊಡುತ್ತಾರೆ. ತಂದೆಯ ಹೆಸರನ್ನು ಬಳಸದೆ ರಾಜಕುಮಾರ್ ಅವರ ಹೆಸರನ್ನು ಅವರ ಮಕ್ಕಳು ಉಳಿಸಿದ್ದಾರೆ, ಬೆಳೆಸಿದ್ದಾರೆ. ಪುನೀತ್ ರಾಜಕುಮಾರ್, ಶಿವಣ್ಣ ಹಾಗೂ ರಾಘಣ್ಣ ಇವರು ಸರಳವಾಗಿ ಜೀವನ ನಡೆಸುತ್ತಾರೆ. ಅಭಿಮಾನಿಗಳ ಬಗ್ಗೆ ಹೆಚ್ಚಿನ ಪ್ರೀತಿಯನ್ನು ಹೊಂದಿದ್ದಾರೆ.

ಸಂತಸದಿಂದ ಜೀವನ ನಡೆಸುತ್ತಿದ್ದ ರಾಜಕುಮಾರ್ ಅವರ ಕುಟುಂಬದವರಿಗೆ ಪುನೀತ್ ಅವರ ಸಾವು ಶಾಕ್ ನೀಡಿದೆ. ಇದ್ದಕಿದ್ದಂತೆ ಅಕ್ಟೋಬರ್ 29, 2021 ರಂದು ಪುನೀತ್ ಅವರು ಹೃದಯಾಘಾತದಿಂದ ನಿಧನರಾದರು. ಪುನೀತ್ ಅವರ ಸಾವಿನ ಸುದ್ದಿಯನ್ನು ನಂಬಲು ಈಗಲೂ ಕಷ್ಟವಾಗುತ್ತಿದೆ. ಪುನೀತ್ ಅವರ ಅಂತಿಮ ದರ್ಶನ ಪಡೆಯಲು 25 ಲಕ್ಷಕ್ಕೂ ಅಧಿಕ ಜನರು ಕಂಠೀರವ ಸ್ಟುಡಿಯೋಕ್ಕೆ ಬಂದಿದ್ದರು. ಮಹಾತ್ಮ ಗಾಂಧೀಜಿ ಅವರನ್ನು ಬಿಟ್ಟರೆ ಅಷ್ಟು ಜನರು ಸೇರಿರುವುದು ಪುನೀತ್ ಅವರ ಅಂತಿಮ ದರ್ಶನಕ್ಕೆ ಇದರಿಂದ ಪುನೀತ್ ಅವರ ಅಭಿಮಾನಿ ಬಳಗ ಎಷ್ಟಿದೆ ಎಂಬುದು ತಿಳಿಯುತ್ತದೆ.

ಪುನೀತ್ ಅವರ ಹಿರಿಯ ಮಗಳು ಧೃತಿ ಅಮೆರಿಕಾದಲ್ಲಿ ಓದುತ್ತಿದ್ದು ತಂದೆಯ ಸಾವಿನ ಸುದ್ದಿಯನ್ನು ಕೇಳುತ್ತಿದ್ದಂತೆ ಅವರು ಅಮೆರಿಕಾದಿಂದ ಭಾರತಕ್ಕೆ ಬರುತ್ತಾಳೆ. ಕಂಠೀರವ ಸ್ಟುಡಿಯೋದಲ್ಲಿ ತಂದೆಯನ್ನು ಕಳೆದುಕೊಂಡ ಇಬ್ಬರು ಮಕ್ಕಳು ಹಾಗೂ ಪತ್ನಿ ಅಶ್ವಿನಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಅಳುತ್ತಾ ಸಮಾಧಾನ ಮಾಡಿಕೊಳ್ಳುತ್ತಿದ್ದರು. ಈ ದೃಶ್ಯವನ್ನು ನೋಡಲು ಎಂತಹವರಿಗೂ ಕರುಳು ಚುರ್ ಎನ್ನುತ್ತಿತ್ತು. ಪುನೀತ್ ಅವರು ಕಳೆದ ಕೆಲವು ಸುಂದರ ಕ್ಷಣಗಳ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಪುನೀತ್ ಅವರ ಕುಟುಂಬದವರಿಗೆ ಹೆಚ್ಚಿನ ಶಕ್ತಿ, ಧೈರ್ಯವನ್ನು ದೇವರು ಕರುಣಿಸಲಿ ಎಂದು ಆಶಿಸೋಣ.

Leave a Comment