Anveshi Jain: ಸ್ನೇಹಿತರೆ, ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Dhruva Sarja) ಸದ್ಯ ಎರಡೆರಡು ಸಿನಿಮಾ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬಿಜಿಯಿದ್ದು, ಆಗಾಗ ತಮ್ಮ ಮುಂದಿನ ಸಿನಿಮಾ ಕುರಿತಾದ ಅಪ್ಡೇಟ್ಸ್ ಗಳನ್ನು ಸೋಶಿಯಲ್ ಮೀಡಿಯಾಗಳ ಮೂಲಕ ನೀಡುತ್ತಾ ಸದ್ದು ಮಾಡುತ್ತಿರುತ್ತಾರೆ. ಅದರಂತೆ ಧ್ರುವ ಸರ್ಜಾ ತಮ್ಮ ಮಾರ್ಟಿನ್(Martin) ಸಿನಿಮಾದ ನಾಯಕಿಯ ಹೆಸರನ್ನು ಘೋಷಿಸಿದ ಬೆನ್ನಲ್ಲೇ ನಟಿ ಅನ್ವೇಶಿ ಜೈನ್(Anveshi Jain) ಅವರ ಸುಂದರ ಮೈ ಮಟ್ಟಕ್ಕೆ ಅಪಾರ ಅಭಿಮಾನಿಗಳು ಹುಟ್ಟಿಕೊಂಡಿದ್ದರು.
ಕನ್ನಡ ಹಾಗೂ ತೆಲುಗು ಭಾಷೆಯ ವೆಬ್ ಸೀರೀಸ್(Web series) ಗಳಲ್ಲಿ ಅಭಿನಯಿಸುತ್ತ ಹೆಸರುವಾಸಿಯಾಗಿದಂತಹ ಅನ್ವೇಶಿ ಜೈನ್(Anveshi Jain) ಪ್ರಪ್ರಥಮ ಬಾರಿಗೆ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮೊದಲ ಚಿತ್ರದಲ್ಲಿಯೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಂತಹ ಸ್ಟಾರ್ ನಟನೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ಒದಗಿ ಬಂದಿದೆ.
ಇದರ ಬೆನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವಂತಹ ನಟಿ ಅನ್ವೇಶಿ ಜೈನ್(Anveshi Jain) ಆಗಾಗ ತಮ್ಮ ಬೋಲ್ಡ್ ಫೋಟೋಗಳ ಮೂಲಕ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿರುತ್ತಾರೆ. ಹಳದಿ ಬಣ್ಣದ ಶಾರ್ಟ್ಸ್ ಮತ್ತು ಕ್ರಾಪ್ ಟಾಪ್ ಹಾಗೂ ಕಪ್ಪು ಬಣ್ಣದ ಜಾಕೆಟ್ ಧರಿಸಿ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡು ಅದನ್ನು ತಮ್ಮ instagram ನಲ್ಲಿ ಹಂಚಿಕೊಂಡಿರುವ ಅನ್ವೇಶಿ ಅವರ ಹಾಟ್ ಮೈ ಮಟ್ಟಕ್ಕೆ ಅಭಿಮಾನಿಗಳು ಫಿದಾ ಆಗಿ ಒಂದುವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ಹೌದು ಗೆಳೆಯರೇ ವರ್ಕೌಟ್ ಮಾಡುವಂತಹ ಸಾಮಗ್ರಿಯ ಮೇಲೆ ಕುಳಿತು ತಮ್ಮ ಕೂದಲನ್ನು ಎತ್ತಿಡಿದು ಕಿವಿಗೆ ಇಯರ್ ಪಾಡ್ಸ್ ಹಾಕಿ ತಮ್ಮ ಮುಂದಿನ ಇರುವಂತಹ ಕನ್ನಡಿಯನ್ನು ನೋಡುತ್ತಾ ಫೋಟೋಗೆ ಬಹಳ ಮಾದಕವಾದ ಫೋರ್ಸ್ ನೀಡಿದ್ದಾರೆ. ಧ್ರುವ ಸರ್ಜಾರ(Dhruva Sarja) ಮಾರ್ಟಿನ್ ನಟಿಯ ಈ ಅವತಾರಕ್ಕೆ ಅಭಿಮಾನಿಗಳು ಮನಸೋತು ಹೋಗಿದ್ದು, ಜಿಮ್ನಲ್ಲೇ ಹೀಗೆ ಇನ್ನು ತೆರೆಯ ಮೇಲೆ ಹೇಗೆಲ್ಲ ಕಾಣಿಸಿಕೊಳ್ಳಬಹುದೆಂಬುದರ ಲೆಕ್ಕಾಚಾರ ಆಗುತ್ತಿದ್ದಾರೆ.
ಇನ್ನೂ ಮಾರ್ಟಿನ್ ಸಿನಿಮಾದ ಬಹುತೇಕ ಎರಡನೇ ಹಂತದ ಶೂಟಿಂಗ್ ಕೆಲಸಗಳು ಕೂಡ ಕಂಪ್ಲೀಟ್ ಆಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಇದೇ ವರ್ಷ ಅಂತ್ಯದೊಳಗೆ ಸಿನಿಮಾ ತೆರೆ ಕಾಣಲಿದೆ ಎಂಬ ಮಾಹಿತಿಯನ್ನು ಚಿತ್ರತಂಡ ಹೊರ ಹಾಕಿದ್ದಾರೆ. ಇದನ್ನೂ ಓದಿ ಮಕ್ಕಳೊಂದಿಗೆ ಬೀಚ್ ಬಳಿ ಯಶ್ ಹಾಗೂ ರಾಧಿಕಾ ಇಲ್ಲಿವೆ ತುಂಟಾಟದ ಕ್ಯೂಟೆಸ್ಟ್ ಫೋಟೋಸ್