Anushree ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ನಿರೂಪಕಿಯಾಗಿರುವ ಅನುಶ್ರೀ(Anchor Anushree) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ವರ್ಷಗಳಿಂದ ಸರಿಗಮಪ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಟಾಪ್ ನಿರೂಪಕರಲ್ಲಿ ಅನುಶ್ರೀ ಅವರ ಹೆಸರು ಮೊದಲನೇದಾಗಿ ಕಾಣಿಸಿಕೊಳ್ಳುತ್ತದೆ. ಖಂಡಿತವಾಗಿ ಅವರಷ್ಟು ನಿರರ್ಗಳವಾಗಿ ನಿರೂಪಣೆ ಮಾಡುವಂತಹ ಮತ್ತೊಬ್ಬ ನಿರೂಪಕಿ ಅಥವಾ ನಿರೂಪಕರನ್ನು ಕನ್ನಡ ಚಿತ್ರರಂಗದಲ್ಲಿ ನೀವು ಕಾಣಲು ಸಾಧ್ಯವಿಲ್ಲ.
ಎಲ್ಲಕ್ಕಿಂತ ಪ್ರಮುಖವಾಗಿ ನಿರೂಪಕಿ ಅನುಶ್ರೀ ಅವರು ಕೇವಲ ಜನಪ್ರಿಯತೆ ಹಾಗೂ ಬೇಡಿಕೆ ವಿಚಾರದಲ್ಲಿ ಮಾತ್ರವಲ್ಲದೆ ಸಂಭವನ ವಿಚಾರದಲ್ಲಿ ಕೂಡ ಕನ್ನಡದ ಕೆಲವೊಂದು ನಟಿಯರನ್ನು ಮೀರಿಸುವ ರೀತಿಯಲ್ಲಿ ತಮ್ಮ ನಿರೂಪಣೆಗಾಗಿ ಸಂಭಾವನೆಯನ್ನು ಪಡೆಯುತ್ತಾರೆ. ಕೆಲವು ಮಾಹಿತಿಗಳ ಪ್ರಕಾರ ಅನುಶ್ರೀ ಅವರು ಈಗ ಮೂರರಿಂದ ಐದು ಲಕ್ಷ ರೂಪಾಯಿ ಪ್ರತಿ ಎಪಿಸೋಡಿಗೆ ನಿರೂಪಣೆ ಮಾಡಲು ಸಂಭಾವನೆ ಪಡೆದುಕೊಳ್ಳುತ್ತಾರೆ ಎಂಬುದಾಗಿ ಸುದ್ದಿ ಇದೆ.
ಇನ್ನು ಅನುಶ್ರೀ ಅವರು ವಯಸ್ಸು 36 ಆಗಿದ್ದರೂ ಕೂಡ ಇನ್ನು ಯಾಕೆ ಮದುವೆ ಆಗಿಲ್ಲ ಎನ್ನುವುದಾಗಿ ಅವರ ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ. ಇತ್ತೀಚಿಗೆ ಕಾರ್ಯಕ್ರಮದಲ್ಲಿ ಕೂಡ ಮದುವೆ ಬಗ್ಗೆ ಮಾತನಾಡಿದಾಗ ಅನುಶ್ರೀ(Anushree) ಹೇಳಿದ್ದೇನು ತಿಳಿಯೋಣ ಬನ್ನಿ.
ಒಬ್ಬ ಸ್ಪರ್ಧಿ ಈ ಕುರಿತಂತೆ ಮಾತನಾಡುತ್ತಾ ನಿಮ್ಮ ರೀತಿ ಪಟಪಟ ಅಂತ ಮಾತನಾಡುಹಾಗೆ ಲವಲವಿಕೆಯಿಂದ ನೀವು ಮದುವೆಯಾಗೋ ಹುಡುಗ ಇರಬೇಕು ಎಂದಾಗ ಅದಕ್ಕಿಂತ ಹೆಚ್ಚಾಗಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಪ್ರೀತಿಯ ಭಾವನೆ ಆತನಲ್ಲಿ ಇರಬೇಕು ಎಂಬುದಾಗಿ ಅನುಶ್ರೀ ಅವರು ಹೇಳಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಆದರೆ ಯಾವಾಗ ಮದುವೆ ಆಗುತ್ತಾರೆ ಎಂಬುದನ್ನು ಮಾತ್ರ ಈ ಸಂದರ್ಭದಲ್ಲಿ ಅವರು ಹೇಳಿಕೊಂಡಿಲ್ಲ. ಅನುಶ್ರೀ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.