Anchor Anushree: ರಾಜ್ ಬಿ ಶೆಟ್ಟಿ ಮತ್ತು ಅನುಶ್ರೀಯವರ ಈ ಫೋಟೋಸ್ ನೋಡಿದ ಅಭಿಮಾನಿಗಳು ಏನ್ ಹೇಳ್ತಿದಾರೆ ಗೊತ್ತಾ?

Anchor Anushree: ಸ್ನೇಹಿತರೆ ಒಬ್ಬರು ತಮ್ಮ ಚಿಟಪಟ ಮಾತಿನ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಹಲವಾರು ದಶಕಗಳಿಂದ ನಿರೂಪಕಿಯಾಗಿ ನಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತೊಬ್ಬರು ತಮ್ಮ ಅಮೋಘ ನಿರ್ದೇಶನ ಹಾಗೂ ನಟನೆಯಿಂದ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡುಕೊಂಡಿದ್ದಾರೆ. ಮೂಲತಃ ಮಂಗಳೂರಿನವರಾದ ರಾಜ್ ಬೀ ಶೆಟ್ಟಿ(Raj B Shetty) ಹಾಗೂ ಅನುಶ್ರೀ (Anushree)ಅವರು ದೇಸಿ ಕಲೆಯಿಂದಾಗಿ ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಹೆಸರನ್ನು ಸಂಪಾದಿಸಿಕೊಂಡಿದ್ದು ಯಶಸ್ವಿ ಸಿನಿಮಾಗಳ

ಮೂಲಕ ಕನ್ನಡ ಸಿನಿಮಾ ರಂಗದಲ್ಲಿ ಇಂದಿಗೂ ಅಷ್ಟೇ ಬೇಡಿಕೆಯನ್ನು ಪಡೆದು ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆಂಕರ್ ಅನುಶ್ರೀ ಮತ್ತು ರಾಜ್ ಬಿ ಶೆಟ್ಟಿ ಯಾವುದೇ ವೇದಿಕೆ ಮೇಲೆ ಒಟ್ಟಾಗಿ ಕಾಣಿಸಿಕೊಂಡರೆ ತಮ್ಮ ತರ್ಲೆ ತಮಾಷೆ ಹಾಗೂ ತುಂಟಾಟದ ಮೂಲಕ ಪ್ರೇಕ್ಷಕರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಒಂದೇ ಊರಿನ ಆತ್ಮೀಯ ಸ್ನೇಹಿತರಾಗಿರುವ ಇಬ್ಬರು ಸಿನಿ ಬದುಕನ್ನು ಆಯ್ಕೆ ಮಾಡಿಕೊಂಡು ಊರನ್ನು ಬಿಟ್ಟು ಬೆಂಗಳೂರಿಗೆ ಬಂದು ತಮ್ಮ ಬದುಕನ್ನು ಕಟ್ಟಿಕೊಂಡವರು.

ಹೀಗೆ ಹಲವಾರು ವರ್ಷಗಳಿಂದ ಒಳ್ಳೆಯ ಭಾಂದವ್ಯವನ್ನು ಹಾಗೆ ಉಳಿಸಿಕೊಂಡು ಬಂದಿರುವ ಅನುಶ್ರೀ ಹಾಗೂ ರಾಜ ಬಿ ಶೆಟ್ಟಿಯವರು ಕನ್ನಡ ಸಿನಿಮಾ ರಂಗ ಕಂಡಂತಹ ಆತ್ಮಿಯ ಸ್ನೇಹಿತರಲ್ಲಿ ಒಬ್ಬರಾಗಿದ್ದಾರೆ. ಯಾವಾಗ ಭೇಟಿ ಮಾಡಿದರು ಒಬ್ಬರನ್ನೊಬ್ಬರು ಪರಸ್ಪರ ಅಪ್ಪಿಕೊಂಡು ಆತ್ಮೀಯತೆಯನ್ನು ತೋಡಿಕೊಂಡ ನಂತರ ತಮ್ಮ ಮಾತನ್ನು ಮುಂದುವರಿಸುವ ಇವರು ಯೂಟ್ಯೂಬ್ ಸಂದರ್ಶನಗಳಲ್ಲಿ ತರ್ಲೆ ತಮಾಷೆಯುತವಾದ ಸಂಭಾಷಣೆಯ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದರು.

ಅದರಂತೆ ಕಳೆದ ಕೆಲವು ದಿನಗಳ ಹಿಂದಷ್ಟೇ ನಟ ರಾಜ್ ಬಿ ಶೆಟ್ಟಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು ಆಗ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅನು(Anu), ರಾಜ್ ಬಿ ಶೆಟ್ಟಿ(Raj B Shetty) ಅವರೊಂದಿಗಿನ ಕೆಲ ಫೋಟೋಗಳನ್ನು ಹಂಚಿಕೊಂಡು ವಿಶೇಷವಾಗಿ ಹುಟ್ಟು ಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾ(social media)ದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ಮುಂದಿನ ದಿನಗಳಲ್ಲಿ ಒಂದೇ ಸಿನಿಮಾದಲ್ಲಿ ಅಭಿನಯಿಸಿ ಎಂದು ಕೇಳಿಕೊಂಡರು. ಟೋಬಿ(Toby) ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಅನುಶ್ರೀ ಸಿನಿಮಾ ತಂಡಕ್ಕೆ ತಮ್ಮದೇ ದಾಟಿಯಲ್ಲಿ ಶುಭ ಹಾರೈಸಿದರು.

ಇದನ್ನೂ ಓದಿ Dr Rajkumar Family: ರಾಜ್ ಕುಟುಂಬ ಶಬರಿಮಲೆಗೆ ಭೇಟಿ ನೀಡಿದ ಅಪರೂಪದ ಫೋಟೋಸ್ ಮತ್ತೆ ಹಂಚಿಕೊಂಡ ಅಭಿಮಾನಿಗಳು

Leave a Comment