Ambareesh ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಅದ್ಭುತ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದಾರೆ. ಅವರು ಸಿನಿಮಾದ ನಟನಿಗಿಂತ ಹೆಚ್ಚಾಗಿ ಚಿತ್ರರಂಗದಲ್ಲಿ ಮಾಡಿರುವಂತಹ ಕೆಲವೊಂದು ಕಾರ್ಯಗಳಿಗಾಗಿ ಹೆಸರುವಾಸಿಯಾಗಿದ್ದಾರೆ.
ಅಂಬರೀಶ್ ಅವರು ಯಾವುದೇ ಕಾರಣಕ್ಕೂ ಕೂಡ ಯಾರಿಗೂ ತಲೆಬಾಗಿದವರಲ್ಲ ಅದಕ್ಕಾಗಿ ಅವರನ್ನು ರೆಬೆಲ್ ಸ್ಟಾರ್ ಎಂಬುದಾಗಿ ಇಡೀ ಕನ್ನಡ ಚಿತ್ರರಂಗವೇ ಕರೆಯುತ್ತಿತ್ತು. ಅಷ್ಟರಮಟ್ಟಿಗೆ ಅಂಬರೀಶ್ ಅವರು ನೇರ ನಡೆ ಹಾಗೂ ನುಡಿಯವರಾಗಿದ್ದರು.
ಎಲ್ಲಕ್ಕಿಂತ ಪ್ರಮುಖವಾಗಿ ಚಿತ್ರರಂಗ ಹಾಗೂ ಎಲ್ಲರೂ ಕೂಡ ಅವರನ್ನು ಇಷ್ಟಪಡುತ್ತಿದ್ದಿದ್ದು ಅವರ ಸ್ನೇಹ ಭಾವನೆಯ ವಿಚಾರಕ್ಕಾಗಿ. ಅವರ ಸಹಾಯದಿಂದಲೇ ಜಗ್ಗೇಶ್(Jaggesh) ಅವರಂಥವರು ನಾಯಕ ನಟರಾಗುತ್ತಾರೆ ಹಾಗೂ ನಿರ್ಮಾಪಕರು ಕೂಡ ಆಗುತ್ತಾರೆ. ಚಿತ್ರರಂಗದ ಲೀಡರ್ ಆಗಿ ಸಾಕಷ್ಟು ವರ್ಷಗಳ ಕಾಲ ಚಿತ್ರರಂಗವನ್ನು ಮುನ್ನಡೆಸಿಕೊಂಡು ಹೋಗಿರುವಂತಹದ್ದು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ನೀವೇ ಗಮನಿಸಿರುತ್ತೀರಿ.
ಕೇವಲ ಎಷ್ಟು ಮಾತಾಡದೆ ಸಾಕಷ್ಟು ಜನ ಕಲಾವಿದರಿಗೂ ಕೂಡ ಅಂಬರೀಶ್(Ambareesh) ಅವರು ಆರ್ಥಿಕ ಸಹಾಯ ಮಾಡುವ ಮೂಲಕ ಅವರ ಕಷ್ಟಕ್ಕೆ ನೆರವಾಗಿರುವುದು ಕೂಡ ಕನ್ನಡ ಚಿತ್ರರಂಗದಲ್ಲಿ ಉದಾಹರಣೆಗಳಿವೆ.