ಭಾರತ ದೇಶದ ರಾಷ್ಟ್ರಭಾಷೆಯ ಕುರಿತು ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದೆ. ಕನ್ನಡದ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಪ್ರಸಿದ್ಧ ನಟ ಅಜಯ್ ದೇವಗನ್ ಅವರ ನಡುವೆ ರಾಷ್ಟ್ರ ಭಾಷೆಯ ವಿಚಾರವಾಗಿ ದೊಡ್ಡಮಟ್ಟದಲ್ಲಿ ಜಗಳ ನಡೆಯುತ್ತಿದೆ. ಟ್ವಿಟ್ಟರ್ ನಲ್ಲಿ ಅಜಯ್ ದೇವಗನ್ ಅವರು ರಾಷ್ಟ್ರಭಾಷೆಯ ಕುರಿತು ಮಾಡಿದ ಒಂದು ಟ್ವೀಟ್ ಇದೀಗ ಕನ್ನಡಿಗರನ್ನು ರೊಚ್ಚಿಗೇಳಿಸುವಂತೆ ಮಾಡಿದೆ.
ಕೆಲವು ದಿನಗಳ ಹಿಂದೆ ಕಿಚ್ಚ ಸುದೀಪ್ ಅವರು ಸಂದರ್ಶನವೊಂದರಲ್ಲಿ ಹಿಂದಿ ನಮ್ಮ ರಾಷ್ಟ್ರಭಾಷೆ ಅಲ್ಲ ಎಂದು ಹೇಳಿದ್ದರು. ಸುದೀಪ್ ಅವರು ಹೇಳಿದ ಈ ಮಾತಿಗೆ ಅಜಯ್ ದೇವಗನ್ ಅವರು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ. ಅಜಯ್ ದೇವಗನ್ ಅವರು ಟ್ವೀಟ್ ಮಾಡಿರುವುದು ಹೀಗಿದೆ.. ನನ್ನ ಸಹೋದರ ಕಿಚ್ಚ ಸುದೀಪ್ ಅವರೇ, ಹಿಂದಿ ರಾಷ್ಟ್ರಭಾಷೆಯಲ್ಲ ಎನ್ನುವುದಾದರೆ ನೀವು ಯಾಕೆ ನಿಮ್ಮ ಮಾತೃ ಭಾಷೆಯ ಸಿನೆಮಾಗಳನ್ನು ಹಿಂದಿ ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡುತ್ತೀರಾ. ಹಿಂದೆ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರಭಾಷೆಯಾಗಿದೆ. ಹಿಂದೆ ಮುಂದೆ ಎಂದೆಂದಿಗೂ ಹಿಂದಿ ನಮ್ಮ ರಾಷ್ಟ್ರಭಾಷೆ ಆಗಿರುತ್ತೆ ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.
ಅಜಯ್ ದೇವಗನ್ ಮಾಡಿರುವ ಈ ಮೂರ್ಖತನದ ಟ್ವೀಟ್ ಗೆ ಕನ್ನಡಿಗರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಖಮೂತಿ ನೋಡದೆ ಅಜಯ್ ದೇವಗನ್ ಮೇಲೆ ಟೀಕೆ ಮಾಡುತ್ತಿದ್ದಾರೆ. ಹಾಗೆ ಕಿಚ್ಚ ಸುದೀಪ್ ಅವರು ಕೂಡ ಅಜಯ್ ದೇವಗನ್ ಮಾಡಿರುವ ಟ್ವೀಟ್ ಗೆ ಖಡಕ್ ಉತ್ತರ ನೀಡಿದ್ದಾರೆ. ಸುದೀಪ್ ಅವರ ಉತ್ತರ ಹೀಗಿದೆ ನೋಡಿ.. ಅಜಯ್ ದೇವಗನ್ ಅವರೇ ನೀವು ಹಿಂದಿಯಲ್ಲಿ ಕಳುಹಿಸಿದ ಸಂದೇಶ ನನಗೆ ಅರ್ಥವಾಯಿತು. ನಾವೆಲ್ಲರೂ ಹಿಂದಿ ಭಾಷೆಯನ್ನು ಗೌರವಿಸಿದ್ದೇವೆ, ಪ್ರೀತಿಸುತ್ತೇವೆ ಮತ್ತು ಹಿಂದಿಯನ್ನು ಕಲಿತಿದ್ದೇವೆ. ತಪ್ಪೇನಿಲ್ಲ ಸರ್.. ಆದರೆ ಒಂದು ವೇಳೆ ಕೂಡ ಕನ್ನಡ ಭಾಷೆಯಲ್ಲೇ ನಿಮ್ಮ ಜೊತೆ ಮಾತಾಡಿದರೆ ಆ ವೇಳೆ ನಿಮ್ಮ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸುತ್ತಿದ್ದೆ. ಎಂದು ಸುದೀಪ್ ಮರು ಟ್ವೀಟ್ ಮಾಡುವ ಮೂಲಕ ಉತ್ತರಿಸಿದ್ದಾರೆ.
ಕನ್ನಡಿಗರೆಲ್ಲರೂ ಸೇರಿ ಅಜಯ್ ದೇವಗನ್ ಗೆ ಸೋಷಿಯಲ್ ಮೀಡಿಯಾದಲ್ಲಿ ಬೆಂಡೆತ್ತುತ್ತಿದ್ದಾರೆ. ನಮ್ಮ ದೇಶದಲ್ಲಿ ರಾಷ್ಟ್ರಗೀತೆಗೆ ರಾಷ್ಟ್ರಪ್ರಾಣಿ ರಾಷ್ಟ್ರ ಬಾವುಟ ಇದೆ ಆದರೆ ರಾಷ್ಟ್ರ ಭಾಷೆ ಅಂತ ಯಾವುದೂ ಇಲ್ಲ. ನಮ್ಮ ದೇಶದ ಸಂವಿಧಾನದಲ್ಲಿ ಭಾಷೆಗಳನ್ನು ನಿರ್ದಿಷ್ಟಪಡಿಸಲಾಗಿದೆ ಮತ್ತು ಹಿಂದಿ ಭಾಷೆಯನ್ನು ಕೇವಲ ಆಡಳಿತ ಭಾಷೆಯೆಂದು ಮಾತ್ರ ಕರೆಯಲಾಗುತ್ತೆ ಹೊರತು ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲವೇ ಅಲ್ಲ.
ಅಲಹಬಾದ್ ಹೈಕೋರ್ಟ್ ಸಹ ಸ್ಪಷ್ಟವಾಗಿ ಹೇಳಿದೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಅಂತ… ಅಜಯ್ ದೇವಗನ್ ಅವರು ಮಾಡ್ತಿರೋದು ಒಂದು ರೀತೀಲಿ ನ್ಯಾಯಾಂಗ ನಿಂ ದನೆ. ನಿಮ್ಮ ಅಡ್ವರ್ಟೈಸ್ಮೆಂಟ್/ಸಿನಿಮಾಗಳು ಕನ್ನಡಕ್ಕೂ ಡಬ್ಬಿಂಗ್ ಆಗುತ್ತೆ….ಯಾಕೆ ಮಾಡುತ್ತಿರಿ? ಕನ್ನಡಿಗರಿಗೆ ಕನ್ನಡವೇ ಮಾತೃ ಭಾಷೆ ಮತ್ತು ರಾಷ್ಟ್ರ ಭಾಷೆ.ನಿಮ್ಮ ಪ್ರಾಥಮಿಕ ಶಾಲೆಯ ಶಿಕ್ಷಕರ ಕೇಳು ಹಿಂದಿ ರಾಷ್ಟ್ರ ಭಾಷೆಯೇನು ಅಂತ? ನೀವೆಲ್ಲಾ ಸಿನಿಮಾ ನಾಯಕರು…! ಅಂತ ಆಕ್ರೋಶ ವ್ಯಕ್ತಪಡಿಸಿದ ಕನ್ನಡಿಗರು ಅಜಯ್ ದೇವಗನ್ ಗೆ ಸರಿಯಾಗಿ ಬುದ್ಧಿ ಪಾಠ ಕಲಿಸುತ್ತಿದ್ದಾರೆ.