ಕೆಜಿಎಫ್ ಚಿತ್ರ ಇಡೀ ದೇಶವೇ ತಿರುಗಿ ನೋಡುವಂತಹ ಯಶಸ್ಸಿನ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ ಚಿತ್ರ ಒಳ್ಳೆ ಕಲೆಕ್ಷನ್ ಪಡೆದುಕೊಳ್ಳುತ್ತಿದೆ. ಭಾರತದಲ್ಲಿಯೇ ಒಟ್ಟಾರೆ ಐದು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕೆಜಿಎಫ್ ಚಿತ್ರ ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಲೆವಲ್ ನಲ್ಲಿ ಸದ್ದು ಮಾಡುತ್ತಿದೆ. ಇದೇ ಸಮಯದಲ್ಲಿ ಕೆಜಿಎಫ್ ಗೆ ಹಲವಾರು ನಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬರುತ್ತಿದೆ. ಹಲವಾರು ಜನ ಕೆಜಿಎಫ್ ಚಿತ್ರವು ಅದ್ಭುತ ಎನ್ನುತ್ತಿದ್ದರೆ. ಆದರೆ ನಮ್ಮ ರಾಜ್ಯದಲ್ಲಿ ಕೆಲವು ವ್ಯಕ್ತಿಗಳು ಕೆಜಿಎಫ್ ಚಿತ್ರದ ಮೇಲೆ ಅಸಮಧಾನ ಹಾಗೂ ಕೋಪವನ್ನು ವ್ಯಕ್ತಪಡಿಸು ತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಾಜಿ ಕಮಿಷನರ್ ಭಾಸ್ಕರ್ ರಾವ್ ಅವರು ಕೂಡ ಕೆಜಿಎಫ್ ಚಿತ್ರವನ್ನು ವಿರೋಧ ಮಾಡಿದ್ದರು. ರೌ’ಡಿಸಂ ಹಾಗೂ ದೌ’ರ್ಜನ್ಯಗಳಿಗೆ ಪ್ರಚೋದನೆ ಕೊಡುವ ಇಂತಹ ಚಿತ್ರಗಳನ್ನು ಸಪೋರ್ಟ್ ಮಾಡಬೇಡಿ ಎಂದು ಹೇಳಿದರು. ಇದೀಗ ಭಾಸ್ಕರ್ ರಾವ್ ಅವರ ಹಾಗೆ ಅಹೋರಾತ್ರ ಅವರು ಕೂಡ ಕೆಜಿಎಫ್ ಚಿತ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಹೋರಾತ್ರ ಯಾರೆಂದು ನಿಮಗೆ ಗೊತ್ತಿಲ್ಲದೆ ಇದ್ದರೆ ಇವರು ಲೇಖಕರು ಮತ್ತು ಆಧ್ಯಾತ್ಮಿಕ ಚಿಂತಕರು. ಇದ್ದಕ್ಕಿದ್ದಂತೆ ಫೇಸ್ ಬುಕ್ ಲೈವ್ ಬಂದು ಅಹೋರಾತ್ರ ಕೆಜಿಎಫ್ ಚಿತ್ರದ ಮೇಲೆ ಗರಂ ಆಗಿದ್ದಾರೆ.
ಏನ್ರೀ ನೀವೆಲ್ಲ ಕೆಜಿಎಫ್ ಚಿತ್ರ ಚೆನ್ನಾಗಿದೆ ಅಂತೀರಾ . ಯಾವ ರೀತಿ ನೈತಿಕತೆ ಇದೆ ಈ ಚಿತ್ರದಲ್ಲಿ.. ಆರಂಭದಿಂದ ಕೊನೆಯವರೆಗೂ ಚಿತ್ರದಲ್ಲಿ ಧೂ’ಮಪಾನ ಮಾಡೋದು ಸತತವಾಗಿ ಹೊಡೆದಾಟ ಮಾಡೋದು. ಸಿ’ಗ’ರೇಟನ್ನು ಯಾವಾಗಲೂ ಕೈಯಲ್ಲಿ ಹಿಡಿದುಕೊಂಡು ಬಿಲ್ಡಪ್ ಕೊಡುವವನು ಒಬ್ಬ ಹೀರೋನಾ?..ಯಾವಾಗಲೂ ಧೂ’ಮ’ಪಾನ ಮಾಡುವವನು ಬದುಕಲು ಸಾಧ್ಯನಾ?. A K 47 ಹಿಡಿದುಕೊಂಡು ಪೋಲಿಸ್ ಸ್ಟೇಶನ್ ನನ್ನು ಡಬ ಡಬ ಡಬ ಉಡಾಯಿಸಿ ನಂತರ ಕೆಂಡದಂಥ ರೈ ಫಲ್ನಲ್ಲಿ ಸೀ’ಗ’ರೇಟ್ ಹಚ್ಚಿ ಕೊಳ್ಳುತ್ತಾನೆ. ಇವನು ದುರಹಂಕಾರಿ ಹೀರೋ ಎಂದು ಅಹೋರಾತ್ರ ಗುಡುಗಿದ್ದಾನೆ.
ಈ ದುರಹಂಕಾರಿ ಹೀರೋನನ್ನು ನಿರ್ದೇಶನ ಮಾಡಿರುವುದು ದುರಹಂಕಾರಿ ಡೈರೆಕ್ಟರ್ ಪ್ರಶಾಂತ್ ನೀಲ್. ಕುಡಿದುಕೊಂಡು ಕಥೆಯನ್ನು ಬರೆದಿರುವ ಈ ಡೈರೆಕ್ಟರ್ ಈ ಕತೆಯಲ್ಲಿ ಓವರ್ ಬಿಲ್ಡಪ್ ಗಳನ್ನು ತೋರಿಸಿದ್ದಾನೆ. ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಹೀರೋ ಕುಡಿದು ಕುಡಿದು ಚಿನ್ನವನ್ನು ಸಮುದ್ರಕ್ಕೆ ಎಸೆದು ತಾನೂ ಕೂಡ ಹಾರಿ ಜೀವ ತೆಗೆದುಕೊಳ್ಳುತ್ತಾನೆ. ದೇಶದ ಪ್ರಧಾನಿ ಮುಂದೆ ಕುಳಿತುಕೊಂಡು ಅಹಂಕಾರದ ಮಾತುಗಳನ್ನು ಹೀರೋ ಆಡುತ್ತಾನೆ. ದೇಶದ ಪ್ರಧಾನಿಗೆ ಅಪಮಾನ ಮಾಡಿರುವ ಈ ಚಿತ್ರವನ್ನು ಹಾಲಿವುಡ್ ಲೆವಲ್ ಗೆ ಯಾಕೆ ಹೋಲಿಕೆ ಮಾಡುತ್ತೀರಿ.
ಈಗಿನ ಯುವಕರು ಕೆಜಿಎಫ್ ಚಿತ್ರವು ಹಾಲಿವುಡ್ ಲೆವೆಲ್ ಗೆ ಇದೆ ಅಂತ ಕೂಗಾಡುತ್ತಿದ್ದೀರಾ ಅಲ್ವಾ ? ಲೇ, ನೀವೆಲ್ಲಾ ಹುಟ್ಟೊಕೆ ಮುಂಚೇನೆ ಕನ್ನಡ ಚಿತ್ರರಂಗದಲ್ಲಿ ಹಾಲಿವುಡ್ ಲೆವೆಲ್ ಗೆ ರಾಜ್ ಕುಮಾರ್ ಅವರು ನಟಿಸಿದ್ದ ಬಂಗಾರದ ಮನುಷ್ಯ ಚಿತ್ರ ಬಿಡುಗಡೆಯಾಗಿತ್ತು. ಆಗಿನ ಕಾಲದಲ್ಲಿ ಬಂಗಾರದ ಮನುಷ್ಯ ಚಿತ್ರ ಅಮೆರಿಕಾದ ಕೆಂಟುಕಿಯಲ್ಲಿ ನೂರು ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು.ಆಗ ಹಾಲಿವುಡ್ ನವರು ನಮ್ಮ ನಮ್ಮ ದೇಶದಲ್ಲಿ ಈ ಚಿತ್ರ ನೂರು ದಿನ ಓಡಿದೆ ಅಂತಾ ಅಣ್ಣಾವ್ರಿಗೆ ಕೆಂಟಕಿ ಆಫ್ ಕರ್ನಲ್ ಎಂಬ ಬಿರುದು ಕೊಟ್ಟಿದ್ದರು. ಇದು ನಿಜವಾದ ಹಾಲಿವುಡ್ ಲೆವೆಲ್ ಗೆ ಚಿತ್ರೀಕರಿಸಲಾದ ಕನ್ನಡ ಚಿತ್ರ. ನಮ್ಮನ್ನೆಲ್ಲಾ ಕುರಿ ಅಂತ ಅಂದುಕೊಂಡಿದ್ದೀರಾ? ಕೆಜಿಎಫ್ ಚಿತ್ರ ಚೆನ್ನಾಗಿಲ್ಲ ಅಂತ ಹೇಳೋಕೆ ಯಾರಿಗೂ ಧೈರ್ಯವಿಲ್ಲ ಎನ್ನುತ್ತಾ ಅಹೋರಾತ್ರ ಖಡಕ್ಕಾಗಿ ತನ್ನ ಅಭಿಪ್ರಾಯವನ್ನು ತಿಳಿಸಿದ್ದಾರೆ.