ಆಗೀನ ಕಾಲದಲ್ಲಿ ವರನಟ ಡಾ. ರಾಜಕುಮಾರ್ ಧೂ’ಮ’ಪಾನ ಮಾಡ್ತಿದ್ರಾ? ಸಿನಿಮಾದಲ್ಲಿ ಇಂಥ ಒಂದೂ ಸನ್ನಿವೇಶಗಳನ್ನೂ ಮಾಡದೆ ಇದ್ದ ಅವರು ನಿಜಜೀವನದಲ್ಲಿ ಸಿ’ಗ’ರೇಟ್ ಎಳೆಯುತ್ತಿದ್ದರಂತೆ. ಈ ಮಾತು ಯಾರು ಹೇಳಿದ್ರು, ಎಲ್ಲಿ ಹೇಳಿದ್ರು ಎಂಬುದನ್ನ ಹೇಳ್ತಿವಿ. ಅದಕ್ಕೂ ಮೊದಲು ಈ ಮಾತಿನ ಹಿನ್ನೆಲೆಯನ್ನೊಮ್ಮೆ ನೋಡಲೇಬೇಕು.
ನಟ ಡಾಲಿ ಧನಂಜಯ್ ಅವರ ನಟನೆಯ ’ಹೆಡ್ ಬುಷ್’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಇನ್ನು ಈ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದ್ದು, ನಟ ಧನಂನಂಜಯ್ ಜಬರ್ಧಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೆಡ್ ಬುಷ್ ಚಿತ್ರ, ಬೆಂಗಳೂರಿನ ಭೂಗತ ಡಾನ್ ಎನಿಸಿಕೊಂಡಿದ್ದ ಎಂಪಿ ಜಯರಾಜ್ ಅವರ ಕಥೆ. ಈ ಸಿನಿಮಾಕ್ಕೆ ಶೂನ್ಯ ಅವರು ನಿರ್ದೇಶನವಿದ್ದರೆ, ಈ ಸ್ಟ್ರಾಂಗ್ ಕಥೆಯನ್ನು ಬರೆದವರು ಅಗ್ನಿ ಶ್ರೀಧರ್ ಅವರು. 1970ರ ಕಾಲದ ಭೂಗತ ಲೋಕದ ಘಟನೆಗಳನ್ನ ತೋರಿಸುವಂತ ಚಿತ್ರ ಇದು.
’ಹೆಡ್ ಬುಷ್’ ಸಿನಿಮಾ ಕನ್ನಡದಲ್ಲಿ ಮಾತ್ರವಲ್ಲದೇ ಇತರ ಭಾಷೆಗಳಲ್ಲಿಯೂ ಅಂದರೆ ತಮಿಳು ತೆಲುಗು ಹಿಂದಿ ಭಾಷೆಗಳಲ್ಲಿಯೂ ಡಬ್ ಆಗಿ ತೆರೆಕಾಣಲಿದೆ. ದಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣ ಕಂಡಿದೆ. ಸುಯೋಜ್ ವೇಲಾಯುಧನ್ ಆಗಿನ ಕಾಲಘಟ್ಟದ ಸನ್ನಿವೇಷಗಳನ್ನು ಬಹಳ ಅಚ್ಚುಕಟ್ಟಾಗಿ ಚಿತ್ರೀಕರಿಸಿಕೊಟ್ಟಿದ್ದಾರೆ. ಇನ್ನು ಚರಣ್ ರಾಜ್ ಅವರ ಕಳೆಯ ಕಾಲಕ್ಕೆ ತಕ್ಕ ಸಂಗೀತ ಈ ಚಿತ್ರಕ್ಕಿದೆ.
ಇಷ್ಟೇಲ್ಲಾ ತಯಾರಿಯಾಗಿ ಪ್ರಚಾರ ಕಾರ್ಯವೂ ಶುರುವಾದ ಸಮಯದಲ್ಲಿ ಡಾಲಿ ಧನಂಜಯ್ ಅಭಿನಯದ ’ಹೆಡ್ ಬುಢ್’ ಚಿತ್ರ ತೆರೆಕಾಣತ್ತಾ ಇಲ್ಲವ ಅನ್ನೋದೆ ಪ್ರಶ್ನೆಯಾಗಿದೆ. ಈ ವಿಷಯಕ್ಕಾಗಿ ಚಿತ್ರತಂಡ ತಲೆಕೆಡಿಸಿಕೊಂಡಿದೆ. ಕಾರಣ ಗೊತ್ತಾ? ಈ ಚಿತ್ರ ಎಂಪಿ ಜಯರಾಜ್ ಅವರ ಜೀವನಕ್ಕೆ ಸಂಬಂಧಪಟ್ಟ ಕಥೆಯಾಗಿದೆ. ಹಾಗಾಗಿ ತನ್ನ ಅನುಮತಿಯೇ ಇಲ್ಲದೇ ತನ್ನ ತಂದೆಯ ಬಯೋಗ್ರಫಿ ನಿರ್ಮಿಸುವುದಕ್ಕೆ ಹೇಗೆ ಸಾಧ್ಯ ಅಂತ ಜಯರಾಜ್ ಅವರ ಮಗ ಅಜೀತ್ ಜಯರಾಜ್ ತಗಾದೆ ಎತ್ತಿದ್ದಾರೆ.
ಈಗಾಗಲೇ ಹೆಡ್ ಬುಷ್ ಚಿತ್ರ ರಿಲೀಸ್ ಮಾಡಲು ಅನುಮತಿ ನೀಡದಂತೆ ಕನ್ನಡ ಚಲನಚಿತ್ರ ಅಭಿವೃದ್ಧಿ ಮಂಡಳಿಗೆ ದೂರನ್ನೂ ನೀಡಿದ್ದಾರೆ. ತನ್ನ ತಂದೆಯ ಬಗ್ಗೆ ಇಂದು ಎಲ್ಲರೂ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರು ಯಾರು ಎಂದು ನೋಡದೇ ಇದ್ದವರೂ ಕೂಡ ಅವನು ಇವನು ಎಂದು ಏಕವಚನದಲ್ಲಿ ಮಾತನಾಡುತ್ತಾರೆ. ಇದು ನನಗೆ ಬಹಳ ನೋವಾಗಿದೆ. ನಾನು ಕಾನೂನಾತ್ಮಕ ರೀತಿಯಲ್ಲಿಯೇ ಹೋರಾಡುತ್ತೇನೆ. ಒಟ್ಟಿನಲ್ಲಿ ಈ ಚಿತ್ರ ತೆರೆಕಾಣಬಾರದು ಎಂದು ಹೇಳಿದ್ದಾರೆ.
ಈ ವಿಷಯದ ಬಗ್ಗೆ ಸ್ಪಷ್ತನೆ ನೀಡಿದ ಅಗ್ನಿ ಶ್ರೀಧರ್ ಇದು ನಾನು ಬರೆದ ಕಥೆ. ಜಯರಾಜ್ ಅವರ ಬಯೋಗ್ರಫಿಯಲ್ಲ, ಆದರೂ ಜಯರಾಜ್ ಇದ್ದಹಾಗೆ ಬರೆಯ ಬೇಕೆ ಹೊರತು ಅವರನ್ನ ಗಾಂಧಿ ತರ ಎಂದು ಹೆಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದರ ಜೊತೆಗೆ ಅಣ್ಣಾವ್ರ ಕುರಿತಂತೆ ಒಂದು ವಿಷಯವನ್ನ ಅಗ್ನಿ ಶ್ರೀಧರ್ ಹೇಳಿದ್ದಾರೆ. ಅಣ್ಣಾವ್ರು ಸಿನಿಮಾದಲ್ಲಿ ಸಿಗರೇಟ್ ಮುಟ್ಟಿದವರಲ್ಲ, ಆದರೆ ನಿಜ ಜೀವನದಲ್ಲಿ ಮಾತ್ರ ದಿನಕ್ಕೆ ಎರಡರಿಂದ ಮೂರು ಸಿಗರೇಟ್ ಎಳಿಯುತ್ತಿದ್ದರು. ಇದು ಶಿವಣ್ಣ ಅವರಿಗೂ ಗೊತ್ತಿತ್ತು. ಹಾಗೂ ಅಣ್ಣಾವ್ರ ಜೊತೆಗಿದ್ದವರಿಗೆಲ್ಲ ಗೊತ್ತಿತ್ತು. ಅದೇನೂ ದೊಡ್ಡ ವಿಷಯವಲ್ಲ, ಎಲ್ಲರ ಬಗ್ಗೆ ಎಲ್ಲರಿಗೂ ಗೊತ್ತಿರುವುದಿಲ್ಲ ಎನ್ನುವಂಥ ಮಾತುಗಳನ್ನ ಹೇಳಿದ್ದಾರೆ.
ಅದರಲ್ಲೂ ವಾರ್ತಾ ಇಲಾಖೆಗೆ ನಾವು ಕೊಟ್ಟ ಕಥಾ ಸಾರಾಂಶ ಬೇರೆಯಾರಿಗೂ ಕೊಡುವ ಹಾಗಿಲ್ಲ, ಆದರೂ ಅದು ಜಯರಾಜ್ ಮಗ ಅಜಿತ್ ಕೈಗೆ ಹೇಗೆ ಕೊಟ್ಟರು ಗೊತ್ತಾಗುತ್ತಿಲ್ಲ ಎಂದು ಹೇಳಿದ್ಡಾರೆ. ಒಂದು ಕಡೆ ಡಾಕ್ಟರ್ ರಾಜ್ ಕುಮಾರ್ ಅವರ ಬಗ್ಗೆ ಹೇಳಿರುವ ಮಾತುಗಳು ಕಾಂಟ್ರವರ್ಸಿ ಹುಟ್ಟು ಹಾಕಿದೆ. ಇನ್ನೊಂದು ಕಡೆ ಹೆಡ್ ಬುಶ್ ಚಿತ್ರದ ಬಿಡುಗಡೆಗೆ ಆತಂಕ ಎದುರಾಗಿದೆ. ಒಟ್ಟಿನಲ್ಲಿ ಹೆಡ್ ಬುಷ್ ಚಿತ್ರದ ಬಿಡುಗಡೆಗೆ ಸಂಕಷ್ಟಗಳು ಎದುರಾಗುತ್ತಲೇ ಇದೆ. ಇಡೀ ಚಿತ್ರವನ್ನ ನಿರ್ಮಾಣ ಮಾಡಿ ಚಿತ್ರವನ್ನ ಕೈಯಲ್ಲಿ ಹಿಡಿದಿರುವ ಚಿತ್ರತಂಡ ಮುಂದೇನು ಮಾಡುತ್ತೆ ಕಾದು ನೋಡಬೇಕು.