Adipurush ಡಾರ್ಲಿಂಗ್ ಪ್ರಭಾಸ್(Darling Prabhas) ನಾಯಕನಟನಾಗಿ ಕಾಣಿಸಿಕೊಂಡಿರುವಂತಹ ಆದಿಪುರುಷ್(Adipurush) ಸಿನಿಮಾ ಇದೇ ಜೂನ್ 16ರಂದು ರಾಷ್ಟ್ರಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಈಗಾಗಲೇ ಗರಿಗೆದರಿವೆ. ಯಾಕೆಂದರೆ ರಾಮಾಯಣದ ಕಥಾಂದರವನ್ನು ಈ ಸಿನಿಮಾದ ಮೂಲಕ ತೋರಿಸಲಾಗುತ್ತಿದೆ.
ಪ್ರತಿಯೊಬ್ಬರೂ ಕೂಡ ಆದಿಪುರುಷ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದು ಸಿನಿಮಾ ಭರ್ಜರಿ 6200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾದ ಬಗ್ಗೆ ಕೇವಲ ತೆಲುಗು ಭಾಷೆಯವರು ಮಾತ್ರವಲ್ಲದೆ ಪಂಚ ಭಾಷೆಯವರು ಸೇರಿದಂತೆ ವಿದೇಶಿಗರು ಕೂಡ ನಿರೀಕ್ಷೆಯನ್ನು ಹೊಂದಿದ್ದಾರೆ.
ಪ್ರಭಾಸ್ ರವರ ಹಿಂದಿನ ಎರಡು ಸಿನಿಮಾಗಳು ಈಗಾಗಲೇ ಸತತವಾಗಿ ಸೋಲನ್ನು ಕಂಡಿದ್ದು ಅವರಿಗೂ ಕೂಡ ಈ ಸಿನಿಮಾದ ಗೆಲುವು ಸಾಕಷ್ಟು ಪ್ರಮುಖವಾಗಿದೆ. ಹೀಗಾಗಿ ಇದು ಆರಂಭದಲ್ಲಿ ಸಾಕಷ್ಟು ನಕಾರಾತ್ಮಕ ವಿಮರ್ಶೆಗಳನ್ನು ಪಾಠದ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಸಿನಿಮಾದ ಸೋಲನ್ನು ನಿಶ್ಚಿತ ಎಂಬುದಾಗಿ ಭಾವಿಸಿದ್ದರು. ಆದರೆ ಎರಡನೇ ಟೀಸರ್ ಸಿನಿಮಾದ ಬಗ್ಗೆ ಇರುವಂತಹ ಹಲವಾರು ಅನುಮಾನಗಳನ್ನು ನಿವಾರಿಸಿದೆ ಎಂದು ಹೇಳಬಹುದಾಗಿದೆ.
ಸದ್ಯಕ್ಕೆ ಸಿನಿಮಾ ಬಿಡುಗಡೆ ಆಗುವುದಕ್ಕೆ ಕೇವಲ ಆರು ದಿನಗಳು ಮಾತ್ರ ಬಾಕಿ ಉಳಿದಿದ್ದು ಪ್ರತಿಯೊಬ್ಬರೂ ಕೂಡ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಅದು ಕೂಡ ಭಗವಾನ್ ಶ್ರೀ ರಾಮನ(Bhagwan Sri Ram) ಹೆಸರಿನಲ್ಲಿ ಸಿನಿಮಾ ಮೂಡಿ ಬರುತ್ತಿದ್ದು ರಾಮ ಸಿನಿಮಾಗೆ ಒಳ್ಳೆಯದನ್ನು ಮಾಡಲಿ ಎಂಬುದಾಗಿ ಹಾರೈಸೋಣ.