Adipurush ಆದಿಪುರುಷ್(Adipurush) ಸಿನಿಮಾ ಜೂನ್ 16ರಂದು ಬಿಡುಗಡೆಯಾಗಿ ಇದುವರೆಗೂ 300 ಕೋಟಿ ಅಧಿಕ ಕಲೆಕ್ಷನ್ ಮಾಡಿದೆ ಆದರೆ ಚಿತ್ರದ ಬಜೆಟ್ ಹಾಗೂ ತಾರಾ ಗಣವನ್ನು ಹೋಲಿಸಿದರೆ ಚಿತ್ರ ಮಾಡಿರುವಂತಹ ಕಲೆಕ್ಷನ್ ಸಾಕಷ್ಟು ಕಡಿಮೆಯಾಗಿದೆ ಎಂದು ಹೇಳಬಹುದು. ಸಿನಿಮಾ ಸಾಕಷ್ಟು ನೆಗೆಟಿವ್ ಪ್ರತಿಕ್ರಿಯೆಗಳನ್ನು ಕೂಡ ಆರಂಭದಿಂದಲೂ ಪಡೆದುಕೊಂಡಿತ್ತು.
ಪ್ರಭಾಸ್(Prabhas) ರವರು ರಾಮನ ಪಾತ್ರದಲ್ಲಿ ತಮ್ಮ ಪ್ರಯತ್ನ ಮೀರಿ ಪ್ರಯತ್ನ ಪಟ್ಟರು ಕೂಡ ಆ ಪಾತ್ರದಲ್ಲಿ ಅವರು ಸರಿಯಾದ ವ್ಯಕ್ತಿ ಎನ್ನುವಂತೆ ಕಾಣಿಸಲಿಲ್ಲ. ರಾವಣನ ಪಾತ್ರದಲ್ಲಿ ಕೂಡ ಸೈಫ್ ಅಲಿ ಖಾನ್(Saif Ali Khan) ಪರಿಪಕ್ವತೆಯ ನಟನೆಯನ್ನು ಕೂಡ ತೋರ್ಪಡಿಸಲಿಲ್ಲ ಎನ್ನುವುದು ಸಿನಿಮಾ ವಿಮರ್ಶಕರು ಹಾಗೂ ಸಿನಿಮಾವನ್ನು ನೋಡಿರುವಂತಹ ಪ್ರೇಕ್ಷಕರ ಅಸಮಾಧಾನದ ಕೂಗಾಗಿದೆ.
ಇನ್ನು ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೃತಿ ಸನೋನ್(Kriti Sanon) ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದರೂ ಕೂಡ ಒಬ್ಬರ ನಟನೆಯಿಂದ ಇಡೀ ಸಿನಿಮಾವನ್ನು ನೋಡಲು ಸಾಧ್ಯವಾಗುವುದಿಲ್ಲ ಅದರಲ್ಲೂ ವಿಶೇಷವಾಗಿ ರಾಮಾಯಣದಂತಹ ಮಹಾಕಾವ್ಯದ ಆಧಾರಿತ ಸಿನಿಮಾವನ್ನು ಈ ರೀತಿ ಬೇಕಾಬಿಟ್ಟಿಯಾಗಿ ಮಾಡಿದರೆ ಯಾರು ತಾನೆ ನೋಡುತ್ತಾರೆ. ಇನ್ನು ಇದೇ ಸಂದರ್ಭದಲ್ಲಿ ನೇಪಾಳದ ಮೇಯರ್ ಗೆ ಆದಿಪುರುಷ ಚಿತ್ರತಂಡ ಕ್ಷಮಾಪಣಾ ಪತ್ರವನ್ನು ಕೂಡ ಬರೆದಿದೆ.
ಹೌದು ಆದಿಪುರುಷ್ ಸಿನಿಮಾದಲ್ಲಿ ಸೀತೆಯನ್ನು ಭಾರತದ ಮಗಳು ಎಂಬುದಾಗಿ ತೋರಿಸಲಾಗಿತ್ತು. ನಿಜವಾಗಿ ಹೇಳಬೇಕೆಂದರೆ ಪುರಾಣಗಳ ಪ್ರಕಾರ ಸೀತೆ ಜನಕ್ ಪುರದ ಮಗಳು ಅಂದರೆ ನೇಪಾಳದ ಮಗಳಾಗಿರುತ್ತಾಳೆ ಹೀಗಾಗಿ ಶ್ರಮೆ ಕೇಳದಿದ್ದರೆ ನೇಪಾಳದಲ್ಲಿ(Nepal) ಸಿನಿಮಾದ ಪ್ರದರ್ಶನ ಮಾಡುವುದಕ್ಕೆ ಬಿಡೋದಿಲ್ಲ ಎಂಬುದಾಗಿ ಮೇಯರ್ ಹೇಳಿಕೊಂಡಿದ್ದರು. ಇದೇ ಕಾರಣಕ್ಕಾಗಿ ಆದಿಪುರುಷ್ ಚಿತ್ರತಂಡ ಈಗ ಮೇಯರ್ ಗೆ ಕ್ಷಮಾಪಣಾ ಪತ್ರವನ್ನು ಬರೆದಿದ್ದಾರೆ.