Adipurush ಆದಿಪುರುಷ್(Adipurush) ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಭರ್ಜರಿ 500 ಕೋಟಿ ಅಧಿಕ ಬಜೆಟ್ ನಲ್ಲಿ ಮೂಡಿ ಬಂದಿರುವಂತಹ ರಾಮಾಯಣ ಆಧಾರಿತ ಸಿನಿಮಾ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ವಿಚಾರವಾಗಿದೆ.
ಆದರೆ ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರಭಾಸ್(Prabhas) ನಾಯಕನನ್ನಾಗಿ ಕಾಣಿಸಿಕೊಂಡಿರುವಂತಹ ಆದಿಪುರುಷ್ ಎಲ್ಲಾ ಕಡೆ ಕಲೆಕ್ಷನ್ ವಿಚಾರದಲ್ಲಿ ಹಾಗೂ ಪ್ರೇಕ್ಷಕರ ಅಭಿಪ್ರಾಯದ ವಿಚಾರದಲ್ಲಿ ಮಖಾಡೆ ಮಲಗುವಂತಹ ಸೂಚನೆಯನ್ನು ಈಗಾಗಲೇ ನೀಡಿದೆ.
ಆದರೆ ಸಿನಿಮಾ ನೋಡಿದವರೆಲ್ಲರೂ ಕೂಡ ರಾಮಾಯಣದ ಕಥೆಯನ್ನೇ ಬದಲಾಯಿಸಲಾಗಿದೆ ಎಂಬುದಾಗಿ ಸಿನಿಮಾದ ಬಗ್ಗೆ ತಮ್ಮ ಅಸಮಾಧಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಹೊರ ಹಾಕುತ್ತಿದ್ದಾರೆ. ಇದರ ನಡುವೆ ಸಿನಿಮಾದ ಬರಹಗಾರ ಹೇಳಿರುವ ಹೇಳಿಕೆ ಕೇಳಿದರೆ ನೀವು ಕೂಡ ಸರ್ಪ್ರೈಸ್ ಆಗ್ತೀರಾ.
ಹೌದು ಆದಿಪುರುಷ್ ಸಿನಿಮಾದ ಬರಹಗಾರ ನಾವು ಈ ಸಿನಿಮಾವನ್ನು ಕೇವಲ ರಾಮಾಯಣವನ್ನು ಸ್ಪೂರ್ತಿಯಾಗಿಟ್ಟುಕೊಂಡು ಬರೆದಿದ್ದೇವೆ ಹೊರತು ಇದು ರಾಮಾಯಣದ ಕಥೆ ಅಲ್ಲ ಎಂಬುದಾಗಿ ಹೇಳುವ ಮೂಲಕ ಅಭಿಮಾನಿಗಳಿಗೆ ಡಬಲ್ ಶಾ’ ಕ್ ನೀಡಿದ್ದಾರೆ. ಸಿನಿಮಾ ತಂಡದ ಅಧಿಕೃತ ವ್ಯಕ್ತಿಯ ಈ ರೀತಿ ಹೇಳುವಾಗ ಖಂಡಿತವಾಗಿ ಸಿನಿಮಾ ಹಳಿ ತಪ್ಪಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ..